ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಅಪೂರ್ವ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ನಟಿ ಅಪೂರ್ವ ಇದೀಗ ನಿರ್ದೇಶಕಿಯಾಗಿ ಹೊಸ ಕೆಲಸ ಶುರು ಮಾಡಿದ್ದಾರೆ. ವಿಕ್ಟರಿ, ಕೃಷ್ಣ ಟಾಕೀಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಅಪೂರ್ವ ನಿರ್ದೇಶಕಿಯಾಗಬೇಕೆಂದು ಸಿನಿಮಾ ರಂಗಕ್ಕೆ ಬಂದವರಂತೆ. ಆದರೆ, ಆಗಿದ್ದು ನಾಯಕಿ. ಇದನ್ನೂ ಓದಿ : ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2
Advertisement
ಅಪೂರ್ವ ಸಿನಿಮಾ ಬಂದಾಗ ರವಿಚಂದ್ರನ್ ವಯಸ್ಸಿಗೂ ಈ ಹುಡುಗಿಯ ವಯಸ್ಸಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಸಿನಿಮಾದ ಕಥೆಯೇ ಆ ರೀತಿ ಇದ್ದ ಕಾರಣಕ್ಕಾಗಿ ಅಪೂರ್ವ ಕೂಡ ಹೈಲೈಟ್ ಆದರು. ಅಲ್ಲಿಂದ ಹಲವು ಚಿತ್ರಗಳು ಅವರನ್ನು ಅರಸಿಕೊಂಡು ಬಂದವು. ಸದ್ಯ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದರೂ, ನಿರ್ದೇಶನದ ಮೇಲಿನ ಮೋಹದಿಂದಾಗಿ ಮೊದಲ ಬಾರಿಗೆ ಮಕ್ಕಳ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಆ ಚಿತ್ರಕ್ಕೆ ಓ ನನ್ನ ಚೇತನ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್
Advertisement
Advertisement
“ಇದೊಂದು ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟಿಕೊಂಡು ಐಡ್ಯಾ. ಲಾಕ್ ಡೌನ್ ಆದಾಗ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆದರು. ಮೊಬೈಲ್ ಗೀಳು ಅವರ ಬದುಕನ್ನು ಹೇಗೆಲ್ಲ ಹಾಳು ಮಾಡಿತು ಎನ್ನುವ ಕುರಿತಾದ ಸಿನಿಮಾವಿದು. ಮೊದಲ ಚಿತ್ರದಲ್ಲಿಯೇ ಅಪೂರ್ವ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ” ಅಂತಾರೆ ಚಿತ್ರಕಥೆ ಕಥೆ ಬರೆದಿರುವ ನಿರ್ದೇಶಕ ಹರಿಸಂತು. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?
Advertisement
ಅಪೂರ್ವ ಅವರ ಚೊಚ್ಚಲು ಸಿನಿಮಾಗೆ ಅಂತಾರಾಷ್ಟ್ರೀಯ ಮನ್ನಣೆ ಕೂಡ ದೊರೆತಿದೆ. ಈಗ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೂ ಸಿನಿಮಾ ಆಯ್ಕೆಯಾಗಿದೆ. ಗುರು ಪ್ರಶಾಂತ್ ರೈ ಸಿನಿಮಾಟೋಗ್ರಫಿಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಪ್ರದೀಪ್ ವರ್ಮಾ ಸಂಗೀತ ನೀಡಿದ್ದಾರೆ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ
ಮಾಸ್ಟರ್ ಪ್ರತೀಕ್, ಬೇಬಿ ಡಿಂಪನಾ, ಮಾಸ್ಟರ್ ಶೌರ್ಯ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.