ಡಾರ್ಲಿಂಗ್ ಪ್ರಭಾಸ್ (Darling Prabhas) ಮದುವೆ ಯಾವಾಗ ಅನ್ನೋದು ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ. 45ರ ಆಸುಪಾಸಿನಲ್ಲಿ ಪ್ರಭಾಸ್ ಮದುವೆ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ. ಹೀಗಿರುವಾಗ ಪ್ರಭಾಸ್ ಲವ್ ಲೈಫ್ ಬಗ್ಗೆ ವರುಣ್ ಧವನ್ (Varun Dhawan) ಸುಳಿವು ನೀಡಿದ್ದಾರೆ.
ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್, ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟು ಬ್ಯುಸಿ ಶೆಡ್ಯೂಲ್ ನಡುವೆ ಮದುವೆಗೆ ಗ್ರೀನ್ ಸಿಗ್ನಲ್ ಕೊಡುತ್ತಾರಾ ಎಂಬುದು ಅಭಿಮಾನಿಗಳಲ್ಲಿ ಅನುಮಾನ ಉಂಟಾಗಿದೆ. ಇದರ ಮಧ್ಯೆ ಬಾಲಿವುಡ್ ನಟ ವರುಣ್ ಡಾರ್ಲಿಂಗ್ ಪ್ರಭಾಸ್ ಲವ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಮತ್ತೆ ಕನ್ನಡಕ್ಕೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ: ʻಕೆಡಿ’ಯಲ್ಲಿ ಲೇಡಿ ಪವರ್
ಇತ್ತೀಚೆಗೆ ಪ್ರಭಾಸ್ ಲವ್‌ನಲ್ಲಿ ಬಿದ್ದಿರೋ ಬಗ್ಗೆ ಗಾಳಿಸುದ್ದಿ ಹರಿದಾಡುತ್ತಿತ್ತು. ಆದಿಪುರುಷ್ ಸಿನಿಮಾದ ನಟಿ ಕೃತಿ (Kriti Sanon) ಮೇಲೆ ಪ್ರಭಾಸ್‌ಗೆ ಲೈಟ್ ಆಗಿ ಲವ್ ಆಗಿದೆ ಅನ್ನೋ ಸುದ್ದಿ ಹರಿದಾಡಿತ್ತು. ಇದೇ ವೇಳೆ ನಟ ವರುಣ್ ಧವನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ಪ್ರಭಾಸ್ ಲವ್ ಲೈಫ್ ಮೇಲೆ ಎಲ್ಲರಿಗೂ ಕಣ್ಣು. ಈ ಮಧ್ಯೆ ಪ್ರಭಾಸ್ ಜೊತೆ ಬಾಲಿವುಡ್ ನಟಿ ಕೃತಿ ಸನೂನ್ ಹೆಸರು ಕೂಡ ತಳುಕು ಹಾಕೊಂಡಿದೆ. ಈಗ ಬಾಲಿವುಡ್ ಸ್ಟಾರ್ ವರುಣ್ ಧವನ್ ಕೂಡ ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ನೀಡಿದ್ದಾರೆ. ಪ್ರಭಾಸ್ ಲೈಫ್‌ನಲ್ಲಿ ಒಬ್ಬ ಡಾರ್ಲಿಂಗ್ ಇದ್ದಾಳೆ. ಅವಳು ಇದಕ್ಕಿಂತ ಖುಷಿಯಾಗಿರಲು ಸಾಧ್ಯವೇ ಇಲ್ಲ ಎಂದು ನಟ ವರುಣ್ ಧವನ್ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಪ್ರಭಾಸ್, ಕೃತಿ ಲವ್ ಮ್ಯಾಟರ್ ನಿಜಾನಾ, ಪ್ರಭಾಸ್‌ಗೆ ಮದುವೆ ಆಲೋಚನೆ ಇದ್ಯಾ ಈ ಎಲ್ಲಾ ಉತ್ತರಕ್ಕೂ ಕಾದುನೋಡಬೇಕಿದೆ.