-ಬೇಟೆಗಾರನ ಜೊತೆ ಆಮೆ, ಹಾವು, ಗಿಣಿ, ನಾಯಿ ಚಿತ್ರ
ಕೊಪ್ಪಳ: 17ನೇ ಶತಮಾನದ ಪಾಳೆಗಾರರ ಕಾಲದ ವಿಶೇಷ ವೀರಗಲ್ಲು ಪತ್ತೆಯಾಗಿದೆ. ಬೇಟೆಗಾರನ ಕುರಿತು ಇರುವ ವೀರಗಲ್ಲು ಇದಾಗಿದ್ದು, ಅಪರೂಪದ ಶಾಸನ ಶಿಲ್ಪ ದೊರೆತಿದೆ.
ರಾಯಚೂರು ತಾಲೂಕಿನ ಇಡಪನೂರು ಗ್ರಾಮದಲ್ಲಿ ವೀರಗಲ್ಲು ಪತ್ತೆಯಾಗಿದೆ. ಈ ವೀರಗಲ್ಲುಗಳನ್ನು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕೊಪ್ಪಳ ಸ್ನಾತಕೋತ್ತರ ಕೇಂದ್ರದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಅಧ್ಯಾಪಕಿ ಡಾ. ಗೀತಾ ಪಾಟೀಲ್ ಈ ಶಿಲ್ಪದ ವೈಶಿಷ್ಟ ಗುರುತಿಸಿದ್ದಾರೆ. ಇಡಪನೂರು ಗ್ರಾಮದ ಆಂಜನೇಯ ದೇವಾಲಯದ ಬಳಿ ಸಾಲಾಗಿ ಹಲವು ವೀರಗಲ್ಲು ಇವೆ. ಅವುಗಳಲ್ಲಿ ಮೊದಲಿಗೆ ಇರುವ ವೀರಗಲ್ಲು ವಿಶಿಷ್ಟ ಸಂಕಥನ ಸಂಕೇತಿಸುತ್ತಿದ್ದು ಗಮನ ಸೆಳೆಯುತ್ತದೆ. ಈ ವೀರಗಲ್ಲು ಬೇಟೆಗಾರನ ಕುರಿತಾಗಿದೆ. 17ನೇ ಶತಮಾನದ ಕಾಲದ್ದು ಇದಾಗಿದ್ದು, ಅಂದಿನ ಕಾಲದ ಪಾಳೆಗಾರರ ಕುರಿತು, ಅವರ ಬೇಟೆಗಳ ಕುರಿತು ಈ ವೀರಗಲ್ಲು ತಿಳಿಸುತ್ತವೆ ಎಂದು ಹೇಳಬಹುದು.
Advertisement
Advertisement
7.5 ಅಡಿ ಅಗಲ, 3.5 ಅಡಿ ಎತ್ತರ ಅಳತೆಯ ಈ ವೀರಗಲ್ಲು ವೀರನೊಬ್ಬನ ಬೇಟೆಗಾರಿಕೆಯನ್ನು ನಿದರ್ಶಿಸುತ್ತದೆ. ಸರ್ವಾಲಂಕಾರ ಭೂಷಿತ ಕುದುರೆಯನ್ನು ಸವಾರಿ ಮಾಡುತ್ತಿರುವ ವೀರ ಬೇಟೆಯಲ್ಲಿ ತೊಡಗಿದ್ದಾನೆ. ಬಲಗೈಯಲ್ಲಿ ಭರ್ಚಿ ಎಡಗೈಯಲ್ಲಿ ಕಿರುಖಡ್ಗ ಹಿಡಿದಿದ್ದಾನೆ. ಕುದುರೆಯ ಮುಂದೆ ಸೇವಕನೊಬ್ಬ ಬಲಗೈಯಿಂದ ಕುದುರೆ ಲಗಾಮನ್ನು ಹಿಡಿದಿದ್ದರೆ, ಎಡಗೈಯಲ್ಲಿ ನೀರಿನ ಚೀಲ (ಚರ್ಮದ್ದು) ಇದೆ. ಬೇಟೆಗೆ ನಾಯಿಯನ್ನು ಕರೆದೊಯ್ದಿದ್ದಾರೆ. ವೀರನ ಸುತ್ತಲೂ ಆಮೆ, ಹಾವು, ಗಿಣಿ, ಸೂರ್ಯ, ಚಂದ್ರರನ್ನು ಕಂಡಿರಿಸಲಾಗಿದೆ. ಸೂರ್ಯಚಂದ್ರರ ಶಿಲ್ಪಗಳು ಸಹಜವಾದರೂ ಗಿಣಿ ಕೆಲವು ವೀರಗಲ್ಲುಗಳಲ್ಲಿ ಮಾತ್ರಕಂಡು ಬರುತ್ತದೆ. ಇವು ವೀರನ ಪ್ರಾಣವನ್ನು ಸಂಕೇತಿಸುತ್ತವೆ (ಪ್ರಾಣಪಕ್ಷಿ) ಎಂಬ ಅಭಿಪ್ರಾಯವಿದೆ. ಆದರೆ ಹಾವು, ಆಮೆಗಳ ಹಿನ್ನೆಲೆಯಲ್ಲಿ ಗಮನಿಸಿದರೆ ವಿಶೇಷವೆನಿಸುತ್ತವೆ. ಇದನ್ನೂ ಓದಿ: ಅನ್ಯಧರ್ಮದ ಯುವಕನ ಜೊತೆ ಕಾಣಿಸಿಕೊಂಡಿದ್ದಕ್ಕೆ ಯುವತಿಗೆ ಥಳಿತ
Advertisement
Advertisement
ಆಮೆ ಜಲಚರವಾದರೆ, ಹಾವು ಭೂಚರ, ಗಿಣಿ ಆಕಾಶಚರಗಳಾಗಿವೆ. ಅಂದರೆ ಇವು ಜಲ, ಭೂಮಿ ಮತ್ತು ಆಕಾಶವನ್ನು ಸಂಕೇತಿಸುತ್ತವೆ. ಆಮೆ ನಿಧಾನಗತಿಯದಾದರೆ ಅದಕ್ಕಿಂತ ವೇಗದ್ದು ಹಾವು, ಹಾವಿಗಿಂತ ವೇಗದ್ದು ಗಿಣಿ. ಒಟ್ಟಿನಲ್ಲಿ ಇವು ವೀರನ ವ್ಯಕ್ತಿತ್ವ, ಅವನ ಹೋರಾಟದ ಹಿನ್ನೆಲೆ, ವೀರಮರಣವನ್ನು ದೃಷ್ಟಾಂತದ ಹಿನ್ನೆಲೆಯಲ್ಲಿ ನಿರೂಪಿಸುತ್ತವೆ. ಈ ಹಿನ್ನೆಲೆಯಲ್ಲಿ ಇದೊಂದು ಅಪರೂಪದ ವೀರಗಲ್ಲು ಎಂಬುದಾಗಿ ಸಂಶೋಧಕಿ ಡಾ. ಗೀತಾ ಪಾಟೀಲ್ ಅಭಿಪ್ರಾಯಪಡುತ್ತಾರೆ. ಈ ವೀರಗಲ್ಲು ಶೋಧನೆಯಲ್ಲಿ ಡಾ. ರವೀಂದ್ರ ಬಟಗೇರಿ, ಶೃತಿ ದೇಸಾಯಿ ನೆರವಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೂತನ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆ ಕಲಿಕೆಗೆ ಆದ್ಯತೆ: ಗೆಹ್ಲೋಟ್