ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ ಮೈಸೂರಿನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ಜನಿಕರಿಗೆ ಪರಂಪರೆಯನ್ನು ತಿಳಿಸುವ ಕಾರ್ಯಕ್ರಮವಾಗಿ ಪಾರಂಪರಿಕ ನಡಿಗೆಗೆ ಇಂದು ಚಾಲನೆ ದೊರಕಿದೆ.
Advertisement
ಮೈಸೂರಿನ ದಿವಾನ್ ರಂಗಾಚಾರ್ಲು ಪುರಭವನದ ಮುಂಭಾಗ ಜಿಲ್ಲಾಧಿಕಾರಿ ಟಿ.ಯೋಗಶ್ ಅವರು ಈ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು. ಈ ನಡಿಗೆಯಲ್ಲಿ ಪುರಭವನ, ದೊಡ್ಡಗಡಿಯಾರ, ಫ್ರೀ ಮೇಸನ್ಸ್ ಕ್ಲಬ್, ಚಾಮರಾಜೇಂದ್ರ ವೃತ್ತ, ಅಂಬಾ ವಿಲಾಸ ಅರಮನೆ, ಕೆ.ಆರ್.ವೃತ್ತ, ದೇವರಾಜ ಮಾರುಕಟ್ಟೆ ಸೇರಿದಂತೆ ಮೈಸೂರಿನ ವಿವಿಧ ಐತಿಹಾಸಿಕ ಕಟ್ಟಗಳು ಹಾಗೂ ಸ್ಥಳಗಳ ಸಂಪನ್ಮೂಲ ವ್ಯಕ್ತಿಗಳು ನಡಿಗೆಯ ಮೂಲಕ ಮೈಸೂರಿನ ಪರಂಪರೆ, ಸಂಸ್ಥಾನ ಬೆಳೆದು ಬಂದ ದಾರಿ, ರಾಜರ ಕೊಡುಗೆ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಿದರು.
Advertisement
Advertisement
Advertisement
ಈ ಪಾರಂಪರಿಕ ನಡಿಗೆ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಮೈಸೂರಿನ ವಿವಿಧೆಡೆ ಸಂಚರಿಸಿ ರಾಜ ಪರಂಪರೆಯನ್ನು ಸಾರಲಿದೆ.