ರಣವೀರ್ ಒಳ್ಳೆಯ ಎಂಟರ್ಟೈನರ್ ಎಂದ ಪೂಜಾ ಹೆಗ್ಡೆ

Public TV
1 Min Read
Pooja Hegde Ranveer Singh

ಮುಂಬೈ: ದಕ್ಷಿಣ ಭಾರತ ಖ್ಯಾತ ನಟಿ ಪೂಜಾ ಹೆಗ್ಡೆ, ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ಎಂಟರ್ಟೈನರ್ ಎಂದು ಹೊಗಳಿದ್ದಾರೆ.

ರಣವೀರ್ ಸಿಂಗ್ ಯಾವಾಗಲು ಸೆಟ್ ನಲ್ಲಿ ಮಾತ್ರವಲ್ಲ ಎಲ್ಲೇ ಹೋದರೂ ರಾಕಿಂಗ್ ಆಗಿರುತ್ತಾರೆ. ಈ ಕುರಿತು ಪೂಜಾ ಸಹ ಮಾತನಾಡಿದ್ದು, ನಾನು ಸೆಟ್‍ಗಳಲ್ಲಿ ಯಾವಾಗಲೂ ಮನರಂಜನೆ ನೀಡುತ್ತಿದ್ದೆ, ಅದರಲ್ಲಿಯೂ ರಣವೀರ್ ಒಳ್ಳೆಯ ಎಂಟರ್ಟೈನರ್ ಆಗಿದ್ದರು. ಅವರು ಸದಾ ಸೆಟ್ ನಲ್ಲಿ ಕ್ರೀಯಾಶೀಲರಾಗಿ ಇರುತ್ತಿದ್ದರು. ಸ್ನೇಹಪರ ವ್ಯಕ್ತಿತ್ವ ಅವರಲ್ಲಿ ಇದೆ. ಅವರು ಹೊಸಬರ ಜೊತೆ ಸಲೀಸಾಗಿ ಬೆರೆಯುತ್ತಾರೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ತೆಲುಗು ಭಾಷೆಯನ್ನು ನೀವು ಅನುವಾದಿಸಿದರೆ ಸೆಕ್ಸಿಸ್ಟ್ ಆಗಿ ಕಾಣುತ್ತೆ: ನಾಗಾರ್ಜುನ ಅಕ್ಕಿನೇನಿ

Pooja Hegde

ನಾನು ರಣವೀರ್ ಮತ್ತು ರೋಹಿತ್ ಸರ್ ಜೊತೆ ಸಖತ್ ಎಂಜಾಯ್ ಮಾಡಿದ್ದೇನೆ. ಸೆಟ್ ನಲ್ಲಿ ಫುಲ್ ಕಾಮಿಡಿ ಇತ್ತು. ಶೂಟಿಂಗ್ ಸಮಯದಲ್ಲಿ ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಕ್ರಿಯೇಟ್ ಆಗಿತ್ತು. ಇದೊಂದು ಅದ್ಭುತ ಅನುಭವವಾಗಿತ್ತು ಎಂದು ತಿಳಿಸಿದ್ದಾರೆ.

ಪೂಜಾ ಹೆಗ್ಡೆ ತಮ್ಮ ಮುಂದಿನ ಚಿತ್ರ ‘ಸರ್ಕಸ್’ ನಲ್ಲಿ ರಣವೀರ್ ಸಿಂಗ್ ಅವರ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾಗೆ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಜಾಕ್ವೆಲಿನ್ ಫೆನಾರ್ಂಡೀಸ್, ವರುಣ್ ಶರ್ಮಾ, ಸಿದ್ದಾರ್ಥ ಜಾದವ್, ಜಾನಿ ಲೀವರ್, ಸಂಜಯ್ ಮಿಶ್ರಾ, ಮುರಳಿ ಶರ್ಮಾ, ಸುಲಭಾ ಆರ್ಯಾ, ವ್ರಜೇಶ್ ಹಿರ್ಜೀ ಮುಂತಾದವರು ನಟಿಸುತ್ತಿದ್ದಾರೆ.

Ranveer Singh

ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಟಿ-ಸೀರೀಸ್ ‘ಸರ್ಕಸ್’ ಸಿನಿಮಾಗೆ ಬಂಡವಾಳ ಹೂಡಿದೆ. ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ ಇದೇ ಮೊದಲಬಾರಿಗೆ ರಣವೀರ್ ಸಿಂಗ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಶುಭಾನನ್ನು ನೋಡಲು ಹಳ್ಳಿಗೆ ಹೋದ ನೀತು

ಈ ಸಿನಿಮಾ ಜೊತೆಗೆ ರಣವೀರ್ ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಇವರಿಗೆ ಜೋಡಿಯಾಗಿ ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ. ಪೂಜಾ ಹೆಗ್ಡೆ ‘ರಾಧೆ ಶ್ಯಾಮ್’ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದು, ಈ ಸಿನಿಮಾದಲ್ಲಿ ಪ್ರಭಾಸ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *