Sunday, 22nd July 2018

Recent News

ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

ನವದೆಹಲಿ: ವಿರಾಟ್ ಕೊಹ್ಲಿ- ಅನುಷ್ಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಖಾಸಗಿ ಹೋಟೆಲ್‍ನಲ್ಲಿ ಪಂಜಾಬಿ ಸಂಪ್ರದಾಯದಂತೆ ನಡೆದ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು ಮತ್ತು ಗೆಳೆಯರು ಮಾತ್ರ ಭಾಗಿಯಾಗಿದ್ದರು.

ಮದುವೆ ಬಳಿಕ ನಾವಿಬ್ಬರೂ ನಮ್ಮ ಪ್ರೀತಿಗೆ ಬದ್ಧರಾಗಿದ್ದು, ಕೊನೆಯವರೆಗೂ ಈ ಪ್ರೀತಿಯನ್ನು ಉಳಿಸಿಕೊಳ್ಳುತ್ತೇವೆ ಎಂದು ವಿರಾಟ್, ಅನುಷ್ಕಾ ಟ್ವೀಟ್ ಮಾಡಿದ್ದಾರೆ. ಡಿಸೆಂಬರ್ 21ರಂದು ನವದೆಹಲಿಯಲ್ಲಿ ತಮ್ಮ ಬಂಧು-ಬಳಗದವರಿಗಾಗಿ ಆದ್ಧೂರಿ ರಿಸೆಪ್ಷೆನ್ ಆಯೋಜಿಸಲಾಗಿದೆ. ಡಿಸೆಂಬರ್ 26ರಂದು ಮುಂಬೈನಲ್ಲಿ ಚಿತ್ರೋದ್ಯಮದ ಗೆಳೆಯರು, ಕ್ರಿಕೆಟರ್‍ಗಳಿಗೆ ಔತಣಕೂತ ಹಮ್ಮಿಕೊಳ್ಳಲಾಗಿದೆ. ಇನ್ನು ಇಟಲಿಯಿಂದ ಬಂದ ಬಳಿಕ ಮುಂಬೈನ ವರ್ಲಿಯಲ್ಲಿರುವ ತಮ್ಮ ನೂತನ ನಿವಾಸದಲ್ಲಿ ವಿರುಷ್ಕಾ ಜೋಡಿ ನವಜೀವನ ಆರಂಭಿಸಲಿದೆ.

ಇಟಲಿಯ ಟಸ್ಕನಿ ನಗರದ ‘ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೋಗೋ ಫಿನೊಕಿಯೆಟೊ ರೆಸಾರ್ಟ್‍ನಲ್ಲಿ 5 ಐಷಾರಾಮಿ ವಿಲ್ಲಾಗಳಿದ್ದು, 22 ಕೋಣೆಗಳಿವೆ. 44 ಮಂದಿಗೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಕೊಹ್ಲಿ, ಅನುಷ್ಕಾ ಮದುವೆ: ಫೋಟೋಗಳಲ್ಲಿ ನೋಡಿ

ಹಾರ್ಪರ್ಸ್ ಬಜಾರ್ ಬ್ರೈಡ್ ಮ್ಯಾಗಜೀನ್ ಗೆ ಅನುಷ್ಕಾ ಶರ್ಮ 2014 ರಲ್ಲಿ ಸಂದರ್ಶನ ನೀಡಿದ್ದರು. ಆ ಸಮಯದಲ್ಲಿ ಅನುಷ್ಕಾ ತಮ್ಮ ಮದುವೆಯ ಕಸಸಿನ ಬಗ್ಗೆ ಹೇಳಿದ್ದರು. ಸಾಂಪ್ರದಾಯಿಕವಾಗಿ ಪ್ರಕೃತಿಯ ನಡುವೆ ದ್ರಾಕ್ಷಿ ತೋಟದ ಮಧ್ಯೆ ಮದುವೆಯಾಗಬೇಕೆಂದು ಅನುಷ್ಕಾ ತಿಳಿಸಿದ್ದರು. ಈಗ ಆ ರೀತಿಯೇ ಅನುಷ್ಕಾ ತಮ್ಮ ಮದುವೆಯನ್ನು ಇಟಲಿಯಲ್ಲಿ ಮಾಡಿಕೊಂಡಿದ್ದಾರೆ.


Leave a Reply

Your email address will not be published. Required fields are marked *