Connect with us

ಈ ಕಾರಣಕ್ಕೆ ಹಾವೇರಿ ಸ್ವಾಮೀಜಿ ಆತ್ಮಹತ್ಯೆಗೆ ಶರಣಾದ್ರು!

ಈ ಕಾರಣಕ್ಕೆ ಹಾವೇರಿ ಸ್ವಾಮೀಜಿ ಆತ್ಮಹತ್ಯೆಗೆ ಶರಣಾದ್ರು!

ಹಾವೇರಿ: ಜಿಲ್ಲೆಯ ಬಾಲೇಹೊಸೂರಿನ ದಿಂಗಾಲೇಶ್ವರ ಮಠ ಶಾಖಾ ಮಠದ 38 ವರ್ಷದ ಮಹಾಲಿಂಗ ಸ್ವಾಮೀಜಿ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದರು. ಸ್ವಾಮೀಜಿ ಡೆತ್ ನೋಟ್‍ನಲ್ಲಿ ಮನಃಶಾಂತಿ ಇಲ್ಲ, ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತಾ ಬರೆದಿದ್ದರು.

ಸ್ವಾಮೀಜಿ ಆವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿರಲಿಲ್ಲ. ಇತ್ತೀಚೆಗೆ ಸ್ವಾಮೀಜಿ ಕಾರು ತಡಸ್ ಕ್ರಾಸ್ ಬಳಿ ಬೈಕ್ ಗೆ ಡಿಕ್ಕಿ ಆಗಿತ್ತು. ಬೈಕ್‍ನಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ನನ್ನಿಂದ ಒಂದು ಜೀವ ಹೋಗಿದೆ ಎಂದು ದುಖಃಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಕ್ತರು ಮಾತಾನಾಡಿಕೊಳ್ಳುತ್ತಿದ್ದಾರೆ.

ಡೆತ್‍ನೋಟ್‍ನಲ್ಲಿ ಏನಿದೆ?
ಪೂಜ್ಯ ಗುರುಗಳೇ ಮತ್ತು ನನ್ನ ಬಂಧು ಬಾಂಧವರೇ ಹಾಗೂ ನನ್ನ ಮಿತ್ರರೇ, ನನ್ನ ಸಾವಿಗೆ ನಾನೇ ಕಾರಣ ಯಾರು ಹೊಣೆಗಾರರಲ್ಲ. ನನಗೆ ಮನಃಶಾಂತಿ ಇಲ್ಲ. ಅದಕ್ಕೆ ನಾನು ಮನಃಶಾಂತಿಗೋಸ್ಕರ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇವೆ. ನನ್ನ ಸಮಾಧಿ ಇದೇ ಮಠದಲ್ಲಿ ಮಾಡಿ. ಇದು ನನ್ನ ಕೊನೆಯ ಆಸೆ. ನಾನು ಯಾವ ಭಕ್ತರಿಗೂ ಕೆಟ್ಟದನ್ನು ಮಾಡಿರಲಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ ಅಂತಾ ಬರೆದಿದ್ರು.

ಸ್ವಾಮೀಜಿ ರಾತ್ರಿ ಮಠದಲ್ಲಿ ಯಾರು ಇಲ್ಲದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಂಜಾನೆ ಗ್ರಾಮಸ್ಥರು ಮಠಕ್ಕೆ ಬಂದು ನೋಡಿದಾಗ ವಿಚಾರ ಬೆಳಕಿಗೆ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.