ಬೆಂಗಳೂರು: ತಾಂತ್ರಿಕತೆ ಬೆಳೆದಂತೆ ಬಾಹ್ಯಾಕಾಶ ಸಂಶೋಧನೆಗಳು (Space Research) ಹೆಚ್ಚೆಚ್ಚು ಆಗುತ್ತಿದ್ದು, ಅದಕ್ಕೆ ಪೂರಕವಾದ ಸಂಶೋಧನೆಗಳು ನಡೆಯುತ್ತಿವೆ. ಹಾಗಾಗಿ ಬ್ಯಾಹ್ಯಾಕಾಶ ಯಾನಕ್ಕೆ ಬಹುಮುಖ್ಯವಾಗಿ ಬೇಕಾದ ಗಗನಯಾತ್ರಿಗಳ ದಿರಿಸುಗಳಲ್ಲೂ (Astronuts Dress) ಸಾಕಷ್ಟು ಬೆಳವಣಿಗೆ ಕಂಡುಬರುತ್ತಿವೆ.
Advertisement
ಹೌದು.. ಬಾಹ್ಯಾಕಾಶ ಯಾನಕ್ಕೆ ತೆರಳುವ ಗಗನಯಾತ್ರಿಗಳು ಧರಿಸುವ ದಿರಿಸುಗಳು ಅದ್ಭುತ ತಂತ್ರಜ್ಞಾನವನ್ನ ಒಳಗೊಂಡಿವೆ. ಗಗನಯಾತ್ರಿಗಳು ಬಾಹ್ಯಾಕಾಶದ ಕಠಿಣ ವಾತಾವರಣದಲ್ಲಿಯೂ ಅನ್ವೇಷಣೆ ಕೈಗೊಳ್ಳಲು ಮತ್ತು ತಮ್ಮ ಕಾರ್ಯಗಳನ್ನು ನಿರ್ವಹಿಸಲು ಅವು ಅನುವು ಮಾಡಿಕೊಡುತ್ತವೆ. ಬಾಹ್ಯಾಕಾಶ ಯಾನದ ವೇಳೆ ಗಗನಯಾತ್ರಿಗಳು ಧರಿಸುವ ಉಡುಪುಗಳ ಕೆಲವು ವಿಶಿಷ್ಟ ಲಕ್ಷಣಗಳನ್ನು ಇಲ್ಲಿ ತಿಳಿಯಬಹುದು.
Advertisement
ನೀರಿನ ಟ್ಯೂಬ್‌ಗಳಂತಹ ರಚನೆಗಳು ಮತ್ತು ಮೈಕ್ರೋಮೀಟೋರಾಯ್ಡ್ (Micrometeoroid) ಉಡುಪನ್ನು ಗಗನಯಾತ್ರಿಗಳು ಬಳಸುತ್ತಾರೆ. ಇದು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ದೈಹಿಕ ದ್ರವಗಳು ಸಮತೋಲನದಲ್ಲಿರುವಂತೆ ನೋಡಿಕೊಳ್ಳಲು ಸಹಾಯಕವಾಗುತ್ತವೆ.
Advertisement
Advertisement
ಜೊತೆಗೆ ಈ ಉಡುಪುಗಳು -250° ಫ್ಯಾರನ್‌ಹೀಟ್ (ಸುಮಾರು -121 ಡಿಗ್ರಿ ಸೆಲ್ಸಿಯಸ್) ನಿಂದ 250° ಫ್ಯಾರನ್ ಹೀಟ್ (121 ಡಿಗ್ರಿ ಸೆಲ್ಸಿಯಸ್) ವರೆಗಿನ ವಿಪರೀತ ತಾಪಮಾನದಿಂದ ಅವರನ್ನ ರಕ್ಷಿಸುತ್ತವೆ. ಗಗನಯಾತ್ರಿಗಳಿಗೆ ಉಸಿರಾಟಕ್ಕೆ ಆಮ್ಲಜನಕ ಪೂರೈಕೆ ಮಾಡುವ ಜೊತೆಗೆ, ಬಾಹ್ಯಾಕಾಶದಲ್ಲಿ ನಡೆದಾಡುವ ಸಮಯದಲ್ಲಿ ಕುಡಿಯಲು ನೀರನ್ನೂ ಪೂರೈಸುತ್ತದೆ. ಇದನ್ನೂ ಓದಿ: ಅರ್ಮೇನಿಯನ್ ನಿಯಂತ್ರಿತ ಕರಾಬಾಕ್‌ನಲ್ಲಿ ಅಜರ್‌ಬೈಜಾನ್ ಮಿಲಿಟರಿ ದಾಳಿ – 25 ಮಂದಿ ಸಾವು
ಕೈಗವಸುಗಳು, ಬೂಟುಗಳು, ಹೆಲ್ಮೆಟ್, ವೈಸರ್ (ಹೆಲ್ಮೆಟ್‌ನಲ್ಲಿ ಮುಖದ ಮುಂಭಾಗ ಅಳವಡಿಸಲಾದ ಗ್ಲಾಸ್) ಮತ್ತು ಬೆನ್ನುಹೊರೆಯನ್ನು ಈ ಉಡುಪು ಒಳಗೊಂಡಿರುತ್ತದೆ. ಕೆಲವೊಮ್ಮೆ ಜೆಟ್-ಪ್ಯಾಕ್ (ಲಿಕ್ವಿಡ್ ಡಿವೈಸ್) ಮಾದರಿಯ ಸಾಧನವಾಗಿರುವ ಇದನ್ನು ಮಾನವಸಹಿತ ಚಾಲನಾ ಘಟಕವೆಂದೂ (ಮ್ಯಾನ್ಡ್ ಮ್ಯಾನುವರಿಂಗ್ ಯುನಿಟ್) ಕರೆಯಲಾಗುತ್ತದೆ. ಇದು ಗಗನಯಾತ್ರಿಗಳು ಅಗತ್ಯ ಕಾರ್ಯನಿರ್ವಹಿಸಲು ನೆರವಾಗುತ್ತದೆ.
ತಾಪಮಾನ, ಒತ್ತಡ, ಆಮ್ಲಜನಕ, ಇಂಗಾಲದ ಡೈಆಕ್ಸೈಡ್, ಶಕ್ತಿ, ಸಂವಹನ ಮತ್ತು ಟೆಲಿಮೆಟ್ರಿ ಅಥವಾ ದೂರಮಾಪನ (ದೂರದ ಭೌತಿಕ ಘಟನೆಯನ್ನು ತಿಳಿಯುವ ವ್ಯವಸ್ಥೆ) ಮಾಡುವ, ಸೂಟ್‌ನ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವ ಜೀವ ಬೆಂಬಲ ವ್ಯವಸ್ಥೆಯನ್ನ (ಲೈಫ್ ಸಪೋರ್ಟ್ ಸಿಸ್ಟಂ) ಅವು ಹೊಂದಿವೆ. ಇದನ್ನೂ ಓದಿ: ನೀರಿನ ಸೆಲೆ ಇರುವ ಗ್ರಹ ಪತ್ತೆ; ಇಲ್ಲಿದ್ಯಾ ಜೀವಿಗಳ ನೆಲೆ? – ನಾಸಾ ಹೇಳೋದೇನು?
ಭವಿಷ್ಯದ ಕಾರ್ಯಾಚರಣೆಗಳ ಸವಾಲುಗಳು ಮತ್ತು ಬೇಡಿಕೆಗಳನ್ನು ಪೂರೈಸಲು ಬಾಹ್ಯಾಕಾಶದ ದಿರಿಸುಗಳನ್ನು ನಿರಂತರವಾಗಿ ಸುಧಾರಿಸಲಾಗುತ್ತಿದೆ. ಉದಾಹರಣೆಗೆ, ಎಕ್ಸ್ ಪ್ಲೋರೇಶನ್ ಎಕ್ಸ್ ಟ್ರಾವೆಹಿಕ್ಯುಲರ್ ಮೊಬಿಲಿಟಿ ಯುನಿಟ್ ಅಥವಾ xEMU ಎಂಬ ಹೊಸ ಸೂಟ್ ಅನ್ನು ನಾಸಾ (NASA) ಅಭಿವೃದ್ಧಿಪಡಿಸುತ್ತಿದೆ. ಇದು ಹಿಂಭಾಗದಲ್ಲಿ ಪ್ರವೇಶಿಸಬಹುದಾದ ಹ್ಯಾಚ್, ಸುಧಾರಿತ ಚಲನಶೀಲತೆ, ವರ್ಧಿತ ಸಂವಹನ ಮತ್ತು ಹೆಚ್ಚಿನ ಗ್ರಾಹಕೀಕರಣ ಆಯ್ಕೆಗಳನ್ನು ಹೊಂದಿರುತ್ತದೆ. 2025ರ ಚಂದ್ರಯಾನಕ್ಕೆ ಈಗಿನೀಂದಲೇ ಸಿದ್ಧತೆ ನಡೆಸಿರುವ ನಾಸಾ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನೊಳಗೊಂಡ ಉಡುಪುಗಳನ್ನು ಸಿದ್ಧಪಡಿಸಿದೆ.
ಬಾಹ್ಯಾಕಾಶ ಸೂಟ್‌ಗಳು ಗಗನಯಾತ್ರಿಗಳ ಸುರಕ್ಷತೆಗೆ ಮಾತ್ರವಲ್ಲದೆ ಮತ್ತು ಆವಿಷ್ಕಾರಗಳನ್ನೂ ಮುನ್ನಡೆಸಲೂ ನೆರವಾಗುತ್ತಿವೆ
ಮಾಹಿತಿ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
Web Stories