ಸೀಬೆಕಾಯಿ ಅಥವಾ ಪೇರಳೆ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲ್ಲರಿಗೂ ಚಿರಪರಿಚಿತ. ಕಡಿಮೆ ಬೆಲೆಗೆ ಸಿಗುವ ಈ ಹಣ್ಣಿನಲ್ಲಿ ಆರೋಗ್ಯ ಕಾಪಾಡುವ ಅನೇಕ ಅಂಶಗಳಿವೆ. ಸೀಬೆಕಾಯಿ ಜ್ಯೂಸ್ ಕೂಡ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಇದು ತಂಪಿನ ಜೊತೆ ಪೋಷಕಾಂಶಗಳನ್ನು ದೇಹಕ್ಕೆ ಪೂರೈಕೆ ಮಾಡುತ್ತದೆ. ಸೀಬೆ ಜ್ಯೂಸ್ ನಮ್ಮ ದೇಹದ ವಿಟಮಿನ್ ಸಿ ಕೊರತೆಯನ್ನು ಹೋಗಲಾಡಿಸುತ್ತದೆ. ಹೀಗಾಗಿ ಅಂಗಡಿಗಳಲ್ಲಿ ಜ್ಯೂಸ್ ಕೊಂಡು ಕುಡಿಯುವ ಬದಲಾಗಿ ಮನೆಯಲ್ಲಿಯೇ ಬೇಗನೇ ಜ್ಯೂಸ್ ತಯಾರಿಸಬಹುದು. ಸೀಬೆ ಜ್ಯೂಸ್ ತಯಾರಿಸುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು:
ತೊಳೆದು ಸಿಪ್ಪೆ ಬಿಡಿಸಿ ಹೆಚ್ಚಿದ ಸೀಬೆ ಹಣ್ಣು – 1 ಕಪ್
ಸಕ್ಕರೆ- 1 ಟೀ ಚಮಚ
ತಣ್ಣನೆಯ ನೀರು – 1/2 ಕಪ್
ಪುದಿನ ಎಲೆಗಳು – 3
ಐಸ್ ಕ್ಯೂಬ್
Advertisement
ಮಾಡುವ ವಿಧಾನ:
* ಸೀಬೆಹಣ್ಣುಗಳ ಸಿಪ್ಪೆಯನ್ನು ತೆಗೆದು ಸಣ್ಣದಾಗಿ 1 ಕಪ್ ನಷ್ಟು ಕತ್ತರಿಸಿಕೊಳ್ಳಬೇಕು.
* ನಂತರ ಸೀಬೆ ಹಣ್ಣನ್ನು ಮಿಕ್ಸರ್‍ನಲ್ಲಿ ಮಿಕ್ಸಿ ಮಾಡಿ ತಣ್ಣನೆಯ ನೀರು ಮತ್ತು ಸಕ್ಕರೆಯನ್ನು ಹಾಕಬೇಕು. ಹಣ್ಣಿನ ಮಿಶ್ರಣ ನುಣುಪಾಗ ಬೇಕು.
* ಮಿಕ್ಸಿಯಾದ ಮೇಲೆ ಅದನ್ನು 1 ಕಪ್‍ನಲ್ಲಿ ಸೋಸಿ ಬೀಜಗಳನ್ನು ಹೊರತೆಗೆಯ ಬೇಕು.
* ಕೊನೆಗೆ ಜ್ಯೂಸ್‍ಗೆ ಐಸ್ ಕ್ಯೂಬ್ ಮತ್ತು ಪುದಿನ ಎಲೆಗಳನ್ನು ಸೇರಿಸಿದರೆ ರುಚಿ ರುಚಿಯಾದ ಸೀಬೆ ಹಣ್ಣಿನ ಜ್ಯೂಸ್ ಕುಡಿಯಲು ರೆಡಿ.
Advertisement
Advertisement
ಉಪಯೋಗಗಳು:
* ಸೀಬೆಕಾಯಿಯ ಸಿಪ್ಪೆ, ಬೀಜ ಯಾವುದನ್ನು ಬಿಸಾಡುವಂತಿಲ್ಲ. ಅವುಗಳಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶಗಳು ಇರುತ್ತವೆ. ಸೀಬೆಕಾಯಿಂದ ಮೊಡವೆಗಳು ಹೋಗುತ್ತದೆ, ಹಲ್ಲಿನ ತೊಂದರೆಗಳು ಮಾಯವಾಗುತ್ತದೆ.
* ಸೀಬೆ ಹಣ್ಣಿನಲ್ಲಿ ಕಿತ್ತಳೆ ಹಣ್ಣಿಗಿಂತ ಹೆಚ್ಚು ವಿಟಮಿನ್ ಸಿ ಪೋಷಕಾಂಶವಿರುತ್ತದೆ. ಇದು ರಕ್ತದ ಒತ್ತಡವನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರವನ್ನುವಹಿಸುತ್ತದೆ ಮತ್ತು ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.
* ಸೀಬೆಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಇರುವ ಕಾರಣ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ದಿನನಿತ್ಯದ ಆಹಾರದ ಭಾಗವಾಗಿ ಇದನ್ನು ಸೇರಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
* ಈ ಜ್ಯೂಸ್ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಡುತ್ತದೆ. ದೇಹದಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ. ಇದರಲ್ಲಿ ಪೋಷಕಾಂಶಗಳು ಇರುವ ಕಾರಣ ಮುಖದಲ್ಲಿ ಮೊಡವೆಗಳ ಆಗದಂತೆ ನೋಡಿಕೊಳ್ಳುತ್ತದೆ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
* ಸೀಬೆಕಾಯಿ ಜ್ಯೂಸ್ ಕಣ್ಣಿಗೆ ಸಂಬಂಧಿಸಿದ ತೊಂದರೆಗಳಿಗೆ ಬಹಳ ಉಪಯೋಗಕಾರಿ. ದೃಷ್ಟಿ ದೋಷವನ್ನು ತಡೆಯುವಲ್ಲಿ ಸಹಾಯಕಾರಿ.