ರುಚಿರುಚಿಯಾದ ಚಿಕನ್ ಮೀಟ್‌ಬಾಲ್ ಈ ರೀತಿ ಮಾಡಿ

Public TV
2 Min Read
Chicken Meatballs 1

ಚೈನೀಸ್ ಸ್ಟೈಲ್‌ನ ಸ್ಟ್ರೀಟ್ ಫುಡ್ ಎಂದರೆ ಈಗಿನ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಆ ಖಾದ್ಯಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬ ಪ್ರಶ್ನೆ ಪ್ರತಿಯೊಬ್ಬ ಪೋಷಕರಿಗೂ ಮೂಡುತ್ತದೆ. ಆದರೆ ಅಂತಹುದೇ ಅಡುಗೆಗಳನ್ನು ಮನೆಯಲ್ಲಿ ಮಾಡಿದರೆ ಅದನ್ನು ಇನ್ನಷ್ಟು ಆರೋಗ್ಯಕರವಾಗಿಸಲು ಸಾಧ್ಯವಾಗುತ್ತದೆ. ನಾವಿಂದು ಹೇಳಿಕೊಡುತ್ತಿರುವ ರೆಸಿಪಿ ಸ್ಟ್ರೀಟ್ ಫುಡ್ ಸ್ಟೈಲ್‌ನ ಚಿಕನ್ ಮೀಟ್‌ಬಾಲ್. ಇದನ್ನು ತುಂಬಾ ರುಚಿಕರವಾಗಿ ಹೇಗೆ ಮಾಡೋದು ಎಂಬುದನ್ನು ನೀವೂ ಇಲ್ಲಿ ನೋಡಿ ಕಲಿಯಿರಿ.

Chicken Meatballs

ಬೇಕಾಗುವ ಪದಾರ್ಥಗಳು:
ಕೊಚ್ಚಿದ ಚಿಕನ್ – 750 ಗ್ರಾಂ (ಮೂಳೆ, ಚರ್ಮ ರಹಿತ)
ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
ಮೊಟ್ಟೆ – 1
ಓಟ್ಸ್ – ಅರ್ಧ ಕಪ್
ಓಟ್ಸ್ ಹಿಟ್ಟು – ಕಾಲು ಕಪ್
ರೆಡ್ ಚಿಲ್ಲಿ ಸಾಸ್ – 1 ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಸೋಯಾ ಸಾಸ್ – ಅರ್ಧ ಕಪ್
ವಿನೆಗರ್ – ಕಾಲು ಕಪ್
ಆರೆಂಜ್ ಜ್ಯೂಸ್ – ಕಾಲು ಕಪ್
ಜೇನುತುಪ್ಪ – ಒಂದೂವರೆ ಟೀಸ್ಪೂನ್
ಶುಂಠಿ ಪೇಸ್ಟ್ – ಕಾಲು ಟೀಸ್ಪೂನ್
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಹುರಿದ ಎಳ್ಳು – 2 ಟೀಸ್ಪೂನ್
ಹೆಚ್ಚಿದ ಸ್ಪ್ರಿಂಗ್ ಆನಿಯನ್ – 2 ಟೀಸ್ಪೂನ್ ಇದನ್ನೂ ಓದಿ: ಏರ್ ಫ್ರೈಯರ್‌ನಲ್ಲಿ ರೋಸ್ಟೆಡ್ ಟೊಮೆಟೊ ಸೂಪ್ ಮಾಡುವ ವಿಧಾನ

Chicken Meatballs 2

ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 200 ಡಿಗ್ರಿಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ ಹಾಗೂ ಬೇಕಿಂಗ್ ಶೀಟ್ ಅನ್ನು ಜೋಡಿಸಿಟ್ಟಿರಿ.
* ಈಗ ದೊಡ್ಡ ಬಟ್ಟಲಿನಲ್ಲಿ ಕೊಚ್ಚಿದ ಕೋಳಿ ಮಾಂಸ, ಬೆಳ್ಳುಳ್ಳಿ ಪೇಸ್ಟ್, ಮೊಟ್ಟೆ, ಓಟ್ಸ್, ಓಟ್ಸ್ ಹಿಟ್ಟು, ರೆಡ್ ಚಿಲ್ಲಿ ಸಾಸ್ ಹಾಗೂ ಉಪ್ಪು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ನಿಮ್ಮ ಕೈಗಳನ್ನು ಒದ್ದೆ ಮಾಡಿಕೊಂಡು, ಮಾಂಸದ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಡು ನಿಂಬೆ ಗಾತ್ರದ ಚೆಂಡುಗಳನ್ನಾಗಿ ಮಾಡಿಕೊಳ್ಳಿ.
* ಮಾಂಸದ ಚೆಂಡುಗಳನ್ನು ಬೇಕಿಂಗ್ ಶೀಟ್‌ನಲ್ಲಿರಿಸಿ, 30 ನಿಮಿಷಗಳ ಕಾಲ ಓವನ್‌ನಲ್ಲಿ ಬೇಯಿಸಿಕೊಳ್ಳಿ.
* ಈ ನಡುವೆ ನೀವು ಸಾಸ್ ಅನ್ನು ತಯಾರಿಸಬೇಕು. ಇದಕ್ಕಾಗಿ ಒಂದು ಕಡಾಯಿಯನ್ನು ತೆಗೆದುಕೊಂಡು ಅದರಲ್ಲಿ ಸೋಯಾ ಸಾಸ್, ವಿನೆಗರ್, ಆರೆಂಜ್ ಜೂಸ್, ಜೇನುತುಪ್ಪ ಹಾಗೂ ಶುಂಠಿ ಪೇಸ್ಟ್ ಅನ್ನು ಹಾಕಿ ಎಲ್ಲವನ್ನು ಮಿಶ್ರಣ ಮಾಡಿ.
* ಈ ಮಿಶ್ರಣವನ್ನು ಕುದಿಯಲು ಬಿಟ್ಟು ನಂತರ 1 ನಿಮಿಷ ಬೇಯಿಸಿಕೊಳ್ಳಿ. ಮಿಶ್ರಣಕ್ಕೆ ಆಗಾಗ ಕೈಯಾಡಿಸುತ್ತಿರಿ.
* ಒಂದು ಸಣ್ಣ ಬೌಲ್‌ನಲ್ಲಿ ಕಾರ್ನ್ ಫ್ಲೋರ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ನೀರು ಸೇರಿಸಿ ತೆಳ್ಳಗಿನ ಸ್ಲರಿ ತಯಾರಿಸಿ. ಇದನ್ನು ಸಾಸ್ ಮಿಶ್ರಣಕ್ಕೆ ಹಾಕಿ. ಈಗ ಸಾಸ್ ದಪ್ಪವಾಗುತ್ತದೆ.
* ಬಳಿಕ ಮೀಟ್‌ಬಾಲ್‌ಗಳನ್ನು ಓವನ್‌ನಿಂದ ತೆಗೆದು ಅದನ್ನು ತಯಾರಿಸಿಟ್ಟ ಸಾಸ್‌ಗೆ ಸೇರಿಸಿ ಮಿಶ್ರಣ ಮಾಡಿ.
* 1-2 ನಿಮಿಷ ಫ್ರೈ ಮಾಡಿ, ಉರಿಯನ್ನು ಆಫ್ ಮಾಡಿ.
* ಕೊನೆಯಲ್ಲಿ ಹುರಿದ ಎಳ್ಳು ಹಾಗೂ ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿದರೆ ರುಚಿರುಚಿಯಾದ ಚಿಕನ್ ಮೀಟ್‌ಬಾಲ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: 7 ಲೇಯರ್ ಚಿಕನ್ ಟಾಕೋ – ತರಕಾರಿ ಇದ್ರೂ ಮಕ್ಕಳು ಇಷ್ಟಪಟ್ಟು ಸವೀತಾರೆ

Share This Article