ಈರುಳ್ಳಿ ಟೊಮೆಟೋಗಳಂತಹ ಪದಾರ್ಥಗಳು ಇಲ್ಲದೇ ಹೋದಾಗ ಕೆಲವೇ ದಾರ್ಥಗಳನ್ನು ಬಳಸಿ ಚಿಕನ್ನ ಖಾದ್ಯ ಏನಾದ್ರೂ ಮಾಡಬೇಕಾಗಿ ಬಂದರೆ ನೀವು ಟ್ರೈ ಮಾಡೋಕೆ ಪರ್ಫೆಕ್ಟ್ ಆಗಿದೆ ಈ ರೆಸಿಪಿ. ಸುಲಭ ಹಾಗೂ ರುಚಿಕರವಾಗಿ ತಯಾರಿಸಬಹುದಾದ ಚಿಕನ್ ಫ್ರೈ ಇದಾಗಿದ್ದು, ತಕ್ಷಣವೇ ಮಾಡಬಹುದು. ಮೊಸರು, ಕಾಶ್ಮೀರಿ ಕೆಂಪು ಮೆಣಸಿನಕಾಯಿ ಹಾಗೂ ಇತರ ಕೆಲ ಪದಾರ್ಥಗಳಷ್ಟೇ ಸಾಕು. ಸಿಂಪಲ್ ಚಿಕನ್ ಫ್ರೈ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ – 300 ಗ್ರಾಂ
ಮೊಸರು – 3 ಟೀಸ್ಪೂನ್
ಪುಡಿ ಮಾಡಿದ ಕಾಳುಮೆಣಸು – 1 ಟೀಸ್ಪೂನ್
ತುಪ್ಪ – 2 ಟೀಸ್ಪೂನ್
ಮುರಿದ ಕಾಶ್ಮೀರಿ ಕೆಂಪು ಮೆಣಸಿನಕಾಯಿ – 5
ಕರಿಬೇವು – 2 ಚಿಗುರು
ನಿಂಬೆ ರಸ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿರುವಂತೆ ಇದನ್ನೂ ಓದಿ: ಏರ್ ಫ್ರೈಯರ್ನಲ್ಲಿ ಮಾಡಿ ಟೇಸ್ಟಿ ಕೋಕನಟ್ ಸಿಗಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಚಿಕನ್ಗೆ ಮೊಸರು, ಕರಿ ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ ಮ್ಯಾರಿನೇಟ್ ಆಗಲು ಸ್ವಲ್ಪ ಹೊತ್ತು ಪಕ್ಕಕ್ಕಿಡಿ.
* ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಕಾಶ್ಮೀರಿ ಮೆಣಸು ಸೇರಿಸಿ ಸ್ವಲ್ಪ ಹುರಿಯಿರಿ.
* ಬಳಿಕ ಚಿಕನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪ್ಯಾನ್ ಅನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ ಆಗಾಗ ಕೈಯಾಡಿಸುತ್ತಾ ಸುಮಾರು 10 ನಿಮಿಷ ಬೇಯಿಸಿಕೊಳ್ಳಿ.
* ಬಳಿಕ ಸ್ವಲ್ಪ ನೀರು ಸೇರಿಸಿ 5 ನಿಮಿಷಗಳ ಕಾಲ ಬೇಯಿಸುವುದನ್ನು ಮುಂದುವರಿಸಿ.
* ನಂತರ ಕರಿಬೇವಿನ ಎಲೆ ಸೇರಿಸಿ, 3-5 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಬೇಯಿಸಿಕೊಳ್ಳಿ.
* ಕೊನೆಯಲ್ಲಿ ನಿಂಬೆ ರಸ ಸೇರಿಸಿ, ಉರಿಯನ್ನು ಆಫ್ ಮಾಡಿ, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದಾದ ನಾನ್ವೆಜ್ ರೆಸಿಪಿ – ಏಷ್ಯನ್ ಜಿಂಜರ್ ಚಿಕನ್
Advertisement
Web Stories