ಪುದುಚೇರಿ: ಕಾಟನ್ ಕ್ಯಾಂಡಿ (Cotton Candy) ತಯಾರಿಕೆಯಲ್ಲಿ ವಿಷಕಾರಿ ಆಂಶವನ್ನು ಬಳಸಲಾಗುತ್ತೆ ಎಂದು ಪುದುಚೇರಿಯಲ್ಲಿ (Puducherry) ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿದೆ.
ಕಾಟನ್ ಕ್ಯಾಂಡಿ ತಯಾರಿಕೆಯಲ್ಲಿ ವಿಷಕಾರಿ ರಾಸಾಯನಿಕವನ್ನು ಬಳಸಿರುವುದನ್ನು ಸರ್ಕಾರಿ ಅಧಿಕಾರಿಗಳು ಪತ್ತೆ ಹಚ್ಚಿದ ನಂತರ ಅದರ ಮಾರಾಟವನ್ನು ನಿಷೇಧಿಸಲಾಗಿದೆ. ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ (Tamilisai Soundararajan) ಅವರು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವನ್ನು ಹಂಚಿಕೊಂಡು ನಿಷೇಧವನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಪತ್ತೆಯಾದ ವಿಷ್ಣು ವಿಗ್ರಹ ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರ
Advertisement
Advertisement
ಮಕ್ಕಳಿಗೆ ಕಾಟನ್ ಕ್ಯಾಂಡಿ ಖರೀದಿಸುವುದನ್ನು ತಡೆಯಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಏಕೆಂದರೆ ಅದರಲ್ಲಿ ಇರುವ ರಾಸಾಯನಿಕ ಆಂಶಗಳು ಮಕ್ಕಳ ಆರೋಗ್ಯವನ್ನು ಹಾನಿ ಮಾಡುತ್ತದೆ. ವಿಷಕಾರಿ ವಸ್ತುವಾದ ರೋಡಮೈನ್-ಬಿ ಎಂಬ ಅಂಶವಿರುವುದನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಹೆಣ್ಣು ಭ್ರೂಣ ಹತ್ಯೆ ಪ್ರಕರಣ – ಸಿಐಡಿಯಿಂದ ಆರೋಗ್ಯ ಇಲಾಖೆಗೆ ವರದಿ ಕೊಡಲು ಸಿದ್ಧತೆ
Advertisement
Advertisement
ಕಾಟನ್ ಕ್ಯಾಂಡಿ ಮಾರಾಟ ಮಾಡುವ ಅಂಗಡಿಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ವಿಷಕಾರಿ ಅಂಶ ಕಂಡುಬಂದಲ್ಲಿ ಅಂಗಡಿಗಳನ್ನು ವಶಕ್ಕೆ ಪಡೆಯುವಂತೆ ತಿಳಿಸಿದ್ದಾರೆ. ಇದೇ ವೇಳೆ ಬಣ್ಣ ಮಿಶ್ರಿತ ಯಾವುದೇ ಅಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ 20 ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ – ಇಬ್ಬರ ವಿರುದ್ಧ ದೂರು ದಾಖಲು
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ರೋಡಮೈನ್- ಬಿ ರಾಸಾಯನಿಕ ಅಂಶವಾಗಿದ್ದು, ಅದು ಬಣ್ಣವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಆಹಾರದೊಂದಿಗೆ ಬೆರೆಸಿದಾಗ ಸಾಮಾನ್ಯವಾಗಿಯೇ ದೇಹವನ್ನು ಪ್ರವೇಶಿಸುತ್ತದೆ. ನಂತರ ಜೀವಕೋಶ ಮತ್ತು ಅಂಗಾಂಶಗಳ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡುತ್ತದೆ ಎಂದು ತಿಳಿಸಿದೆ. ಇದನ್ನು ಆಹಾರದಲ್ಲಿ ದೀರ್ಘಕಾಲದವರೆಗೆ ಬಳಸುವುದರಿಂದ ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗಬಹುದು. ಇದನ್ನೂ ಓದಿ: ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳ ಗಡಿ ಮುಟ್ಟಲಿದೆ: ಪ್ರಧಾನಿ ಮೋದಿ