ದಾವಣಗೆರೆ: ನಗರದ ಎಸ್.ಎಸ್.ಲೇಔಟ್‍ನ ರಿಂಗ್ ರೋಡ್ ಬಳಿ ಇರುವ ವಿದ್ಯಾಸಂಸ್ಥೆಯೊಂದು ಜನರಿಗೆ ಪರೀಕ್ಷೆ ಬರೆಯದೇ ನಕಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಮಾರ್ಕ್ಸ್ ಕಾರ್ಡ್‍ಗಳನ್ನು ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
Advertisement
ಶ್ರೀದೇವಿ ಇನ್ಸಿಟ್ಯೂಟ್ ಎಂಬ ವಿದ್ಯಾಸಂಸ್ಥೆ ಕೇವಲ 10 ರಿಂದ 20 ಸಾವಿರ ರೂ.ಗಳಿಗೆ ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡುತ್ತಿದೆ. ಭ್ರಷ್ಟಾಚಾರ ವಿರೋಧಿ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿದಾಗ ಈ ಅಕ್ರಮ ಗೊತ್ತಾಗಿದೆ. ಇದೇ ವೇಳೆ ಸ್ಥಳಕ್ಕೆ ಮಾಧ್ಯಮದವರು ತೆರಳಿದಾಗ ಶ್ರೀದೇವಿ ವಿದ್ಯಾಸಂಸ್ಥೆಯ ಸಿಬ್ಬಂದಿಗಳು ಬಾತ್ ರೂಂನಲ್ಲಿ ಅವಿತುಕೊಂಡಿದ್ದರು.
Advertisement
Advertisement
ಶ್ರೀದೇವಿ ವಿದ್ಯಾಸಂಸ್ಥೆಯು ಕಾಳಿಂಗೆಗೌಡ ಎಂಬವರಿಗೆ ಸೇರಿದೆ. 2013 ರಲ್ಲಿ ಸಾಗರ್ ಎನ್ನುವರು ಈ ಸಂಸ್ಥೆಯಿಂದ ನಕಲಿ ಅಂಕಪಟ್ಟಿಯನ್ನ ಪಡೆದಿದ್ದರು. ಪ್ರತಿವರ್ಷ ಈ ಸಂಸ್ಥೆ ನೂರಾರು ವಿದ್ಯಾರ್ಥಿಗಳಿಗೆ ನಕಲಿ ಮಾರ್ಕ್ಸ್ ಕಾರ್ಡ್ ನೀಡುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
Advertisement