ನವದೆಹಲಿ: ಕಳೆದ ಕೆಲ ವಾರಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಆದ್ರೆ ಪೆಟ್ರೋಲ್ ಬೆಲೆ 99.99ರೂಪಾಯಿಗಿಂತ ಒಂದು ಪೈಸೆಯೂ ಜಾಸ್ತಿಯಾಗಲ್ಲ ಅಂತ ವರದಿಯಾಗಿದೆ.
ಕಾರಣವೇನು?
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(ಎಚ್‍ಪಿಸಿಎಲ್) ಕಂಪೆನಿ `ಪವರ್ 99′ ರ ಅಡಿಯಲ್ಲಿ 19 ಒಕ್ಟೇನ್ ಗುಣಮಟ್ಟದಲ್ಲಿ ಪೆಟ್ರೋಲ್ ಅನ್ನು ಮಾರಾಟ ಮಾಡುತ್ತಿದೆ. ಈ ಪೆಟ್ರೋಲ್ ನ ಮೂಲ ಬೆಲೆ 20 ರೂ ಆಗಿರುತ್ತದೆ. ಆದ್ದರಿಂದ ಈಗಿರುವ ಮೆಷಿನ್ ನಲ್ಲಿ ಪೆಟ್ರೋಲ್ ದರ 99.99 ರೂ. ಗಿಂತ ಹೆಚ್ಚು ತೋರಿಸುವ ಸಂಖ್ಯೆ ಇಲ್ಲ. ಹೀಗಾಗಿ ಪೆಟ್ರೋಲ್ ದರ ತೋರಿಸುವ ತೋರಿಸುವ ಪಟ್ಟಿಯಲ್ಲಿ ಬದಲಾಯಿಸಬೇಕಾಗಿದೆ. ಅದಕ್ಕಾಗಿ ಪೆಟ್ರೋಲ್ ಪಂಪ್ ಸರ್ವಿಸ್ ಸ್ಥಗಿತಗೊಳಿಸಿ, ನುರಿತ ತಂತ್ರಜ್ಞರಲ್ಲಿ ಮೆಷಿನ್ ದರ ಪಟ್ಟಿ ಬದಲಾವಣೆ ಮಾಡಬೇಕಿದೆ. ಈ ಬದಲಾವಣೆಗೆ ಕೆಲ ಸಮಯಗಳೇ ಬೇಕಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
Advertisement
ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 81.63 ರೂಪಾಯಿ ಆಗಿದ್ದು, ಮುಂಬೈನಲ್ಲಿ 89.01 ರೂಪಾಯಿಯಾಗಿದೆ. ಹೀಗಾಗಿ ಪೆಟ್ರೋಲ್ ದರ 100 ರೂ.ರ ಗಡಿ ದಾಟುತ್ತಾ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
Advertisement
Petrol at Rs 81.63/litre (increase by Rs 0.35/litre) and diesel at Rs 73.54/litre (increase by Rs 0.24/litre) in Delhi. Petrol at Rs 89.01/litre (increase by Rs 0.34/litre) and diesel at Rs 78.07/litre (increase by Rs 0.25/litre) in Mumbai. pic.twitter.com/6nkdd1bRaG
— ANI (@ANI) September 15, 2018
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv