ಬೆಂಗಳೂರು: ದುನಿಯಾ ವಿಜಿ ಜೈಲಿನಿಂದ ಜಾಮೀನು ಪಡೆದು ಹೊರಬರುತ್ತಿದ್ದಂತೆಯೇ ಅವರಿಗೆ ಮತ್ತೊಂದು ಭಯ ಶುರುವಾಗಿದೆ. ತನ್ನ ಇಬ್ಬರು ಹೆಣ್ಣು ಮಕ್ಕಳ ಭಯ ವಿಜಯ್ ಅವರನ್ನು ಕಾಡುತ್ತಿದೆ.
ದುನಿಯಾ ವಿಜಿ ಮಂಗಳವಾರ ಮಧ್ಯಾಹ್ನ ಗಿರಿ ನಗರ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಪೊಲೀಸರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ನನ್ನ ಇಬ್ಬರು ಹೆಣ್ಣು ಮಕ್ಕಳು ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ.
Advertisement
ನನ್ನ ಇಬ್ಬರು ಹೆಣ್ಣು ಮಕ್ಕಳು ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅವರಿಬ್ಬರು ತನ್ನ ತಾಯಿಯ ಮಾತು ಕೇಳಿಕೊಂಡು ನನ್ನ ವಿರುದ್ಧ ದೂರು ನೀಡುವ ಸಾಧ್ಯತೆಗಳಿವೆ. ಹಾಗಾಗಿ ನನ್ನ ವಿರುದ್ಧ ಯಾವುದಾದರೂ ದೂರು ಬಂದರೆ ಪರಿಶೀಲಿಸಿ ನನ್ನ ಗಮನಕ್ಕೆ ತನ್ನಿ ಎಂದು ಪೊಲೀಸರಿಗೆ ವಿಜಿ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಸದ್ಯ ವಿಜಿ ಪೊಲೀಸ್ ಇನ್ಸ್ ಪೆಕ್ಟರ್ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆಯಷ್ಟೆ ವಿಜಿ ಮನೆಯಲ್ಲಿ ಹೈಡ್ರಾಮ ನಡೆದಿತ್ತು. ಆದರೆ ಈಗ ವಿಜಿ ವಿರುದ್ಧ ಅವರ ಇಬ್ಬರು ಹೆಣ್ಣು ಮಕ್ಕಳು ಸಿಡಿದೆದ್ದಿದ್ದಾರೆ.
Advertisement
ಕಳೆದ 8 ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿರುವ ನಟ ದುನಿಯಾ ವಿಜಯ್ ಅವರಿಗೆ ಸಂಕಷ್ಟ ಎದುರಾಗಿದ್ದು, ಮೊದಲ ಪತ್ನಿಯ ಪುತ್ರಿ ಮೋನಿಕಾ ತಂದೆಯ ಮನೆಯಿಂದ ಅಮ್ಮ ನಾಗರತ್ನ ಮನೆಗೆ ತೆರಳಿದ್ದಾರೆ. ಮಂಗಳವಾರ ಬೆಳಗ್ಗೆ ದುನಿಯಾ ವಿಜಯ್‍ರ ಪುತ್ರಿ ಮೋನಿಕಾ ಬ್ಯಾಗ್ ಸಮೇತ ತಂದೆ ಮನೆಯಿಂದ ಹೊರ ಬಂದಿದ್ದು, ಅಮ್ಮ ಮನೆಗೆ ತೆರಳಿದರು.
ಕೋರ್ಟ್ ನಿಂದ ಬೇಲ್ ಪಡೆದು ಜೈಲಿನಿಂದ ಬಿಡುಗಡೆಯಾಗಿ ನಗರದ ಕತ್ರಿಗುಪ್ಪೆ ನಿವಾಸಕ್ಕೆ ಆಗಮಿಸಿದ ತಂದೆ ದುನಿಯಾ ವಿಜಯ್ ವಿರುದ್ಧ ಪುತ್ರಿ ಮೋನಿಕಾ ಅಸಮಾಧಾನ ಹೊರ ಹಾಕಿದ್ದು, ತಂದೆಯೊಂದಿಗೆ ಜಗಳ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ವಿಜಯ್ ಅವರ ಬಳಿ ಅಮ್ಮನ ಮನೆಗೆ ತೆರಳುವುದಾಗಿ ಪುತ್ರಿ ಹಠ ಹಿಡಿದಿದ್ದರು. ಸ್ವಲ್ಪ ಸಮಯದ ಬಳಿಕ ವಿಜಯ್ ಅವರು ಮಗಳಿಗೆ ಬ್ಯಾಗ್ ನೀಡಿ ಮನೆ ಹಿಂಬಾಗಿಲಿನಿಂದ ಪುತ್ರಿಯನ್ನು ಕಳುಹಿಸಿದರು ಎಂಬ ಮಾಹಿತಿ ಲಭಿಸಿತ್ತು. ಇದೇ ವೇಳೆ ವಿಜಯ್ ಅವರ ತಾಯಿಯೂ ನಾಗರತ್ನ ಅವರ ಪರವೇ ಮಾತನಾಡಿದ್ದು, ಕೀರ್ತಿಯಿಂದಲೇ ಇಷ್ಟೆಲ್ಲ ನಡೆಯಿತು ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.
ಕಳೆದ 2 ವರ್ಷಗಳಿಂದ ಕೀರ್ತಿ ಹಾಗೂ ದುನಿಯಾ ವಿಜಯ್ ಅವರೊಂದಿಗೆ ವಾಸವಿದ್ದ ಮಗಳು ಸದ್ಯ ಅಮ್ಮನ ಮನೆಗೆ ಹೋಗಿದ್ದಾಳೆ ಎನ್ನಲಾಗಿದೆ. ಕಳೆದ ರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿಜಯ್, 2ನೇ ಪತ್ನಿ ಹಾಗೂ ನನ್ನ ಮಕ್ಕಳಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೇ ನನ್ನ ಮಗಳಿಗೆ 18 ವರ್ಷ ಪೂರ್ತಿಯಾಗಿದೆ, ಮತ್ತೊಬ್ಬ ಮಗಳಿಗೆ 18 ಪೂರ್ತಿಯಾಗಬೇಕಿದೆ. ಅವರ ಇಚ್ಛೆಯಂತೆ ಸ್ವತಂತ್ರ್ಯವಾಗಿ ಜೀವಿಸಲು ಅವರು ಅರ್ಹರು ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=ocxlKBxASJc