ಬೆಂಗಳೂರು: ನಗುಮುಖ, ಮುಗ್ಧತೆಯ ಮಾತು, ಕ್ಲೀನ್ ಫೇಸು ಇದು ಸದಾ ಅಪ್ಪು ಕಾಣಿಸ್ಕೊಳ್ಳುವ ಶೈಲಿ. ಆಕಸ್ಮಾತ್ ಅಪ್ಪು ಮುಖದಲ್ಲಿ ಸ್ವಲ್ಪ ಬದಲಾವಣೆಯಾದರೂ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇದೀಗ ಪುನೀತ್ ರಾಜ್‍ಕುಮಾರ್ ಮುಖದಲ್ಲಿ ಬದಲಾವಣೆಯಾಗಿದೆ. ಬಾಡಿ ಚೇಂಜ್ ಆಗಿದೆ. ಕ್ಲೀನ್ ಶೇವಿಂಗ್ ನಲ್ಲಿರುತ್ತಿದ್ದ ಅಪ್ಪು ಇದೀಗ ಗಡ್ಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಣ್ಣಕ್ಕೆ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚುತ್ತಿದ್ದ ಅಪ್ಪು ಕೊಂಚ ದಪ್ಪಗಾಗಿದ್ದಾರೆ.
ಅಪ್ಪು ಎಂದರೆ ಕಣ್ಣ ಮುಂದೆ ಬರೋದು ಒಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್. ಚಿತ್ರಗಳೂ ಕೂಡ ಹಾಗೇ ಇರುತ್ತವೆ. ಅವರ ಅಭಿಮಾನಿಗಳು ಬಯಸೋದು ಅದನ್ನೇ. ಈ ವರ್ಷದಲ್ಲೇ ತೆರೆ ಕಂಡಿದ್ದ ರಾಜಕುಮಾರ ಚಿತ್ರ ಅಪ್ಪು ಬದುಕಿನ ದಿಕ್ಕನ್ನೇ ಬದಲಾಯಿಸಿದೆ ಎಂದು ಹೇಳಿದರೆ ಆಶ್ಚರ್ಯವಿಲ್ಲ. ಹಾಗೆ ನೋಡೋದಾದರೆ ಕಮರ್ಷಿಯಲ್ ಚಿತ್ರಗಳ ಭರಾಟೆಯಲ್ಲಿ ಮಾಸ್ ಮೇನಿಯಾದಲ್ಲಿ ಕೌಟುಂಬಿಕ ಚಿತ್ರ ಕೈ ಹಿಡಿಯುತ್ತೆ ಎಂದರೆ ಅದು ದೊಡ್ಡ ಸಾಧನೆಯೇ ಸರಿ. ರಾಜಕುಮಾರ ಚಿತ್ರದ ಯಶಸ್ಸು ಚಿತ್ರರಂಗದಲ್ಲಿ ಸರ್ವರ ಯಶಸ್ಸು. ಅಲ್ಲಿಂದ ಅಪ್ಪು ಹಿಡಿದದ್ದು ಹೊಸ ಶ್ರೇಯಸ್ಸು.
Advertisement
Advertisement
ಪುನೀತ್ ದೇಹದ ಲುಕ್ ಬದಲಾಗಿರೋದಕ್ಕೂ ರಾಜಕುಮಾರ ಚಿತ್ರಕ್ಕೂ ಅದೇನು ಸಂಬಂಧ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲೇ ಇದೆ. ಹಿಂದೆಲ್ಲಾ ಒಂದು ಚಿತ್ರ ಮುಗಿಯೋ ಹೊತ್ತಿಗೆ ಅಪ್ಪು ಮುಂದಿನ ಚಿತ್ರದ ಮುಹೂರ್ತ ಆಗೇಬಿಡುತ್ತಿತ್ತು, ಇಲ್ಲವೇ ಅನೌನ್ಸ್ ಆಗ್ತಿತ್ತು. ಆದರೆ ಇನ್ನೇನು ಕೆಲವು ವಾರಗಳಲ್ಲೇ ಅಂಜನಿಪುತ್ರ ತೆರೆಗೆ ಬಂದು ಬಿಡುತ್ತೆ. ಅಂಜನಿಪುತ್ರ ಕೂಡ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಅನ್ನೋದು ಟ್ರೇಲರ್ ನೋಡಿದರೆ ಗೊತ್ತಾಗೋ ವಿಷ್ಯ. ಆದರೆ ಅದ್ಯಾಕೋ ಅಪ್ಪು ಮುಂದಿನ ಪ್ರಾಜೆಕ್ಟ್ ಅನೌನ್ಸ್ ಆಗಿಲ್ಲ. ಹಾಗ್ ನೋಡೋದಾದರೆ ಅಪ್ಪು ಸಿಕ್ಕಾಪಟ್ಟೆ ಬ್ಯುಸಿ.
Advertisement
ಪವನ್ ಒಡೆಯರ್ ನಿರ್ದೇಶನದ ಚಿತ್ರವೊಂದು ಕಳೆದ ಕೆಲ ಫೆಬ್ರವರಿಯಲ್ಲಿ ಮುಹೂರ್ತ ಮಾಡಿಕೊಂಡಿತ್ತು. ಸಂತೋಷ್ ಆನಂದ್ ರಾಮ್ ಜೊತೆ ಇನ್ನೊಂದು ಚಿತ್ರ ಮಾಡುವ ಪ್ಲ್ಯಾನ್ ಇತ್ತು. ಯೋಗರಾಜ್ ಭಟ್ ಜೊತೆ ಇನ್ನೊಂದು ಚಿತ್ರ ಮಾಡಬೇಕಿತ್ತು. ತಮಿಳು ನಿರ್ದೇಶಕ ಸಮುದ್ರ ಖನಿ ಜೊತೆಗೊಂದು ಪ್ರಾಜೆಕ್ಟ್ ಕೈ ಹಿಡಿದಿತ್ತು. ಇಷ್ಟೆಲ್ಲಾ ಇದ್ಮೇಲೆ ಇದೀಗ ಶುರುವಾಗುತ್ತಿರೋ ಪ್ರಾಜೆಕ್ಟ್ ಯಾವುದು ಅನ್ನೋದು ಬಯಲಾಗಿಲ್ಲ. ಅದಕ್ಕೆ ಕಾರಣವೇ ರಾಜಕುಮಾರ.
Advertisement
ಅಪ್ಪು ಹಿಂದಿನಂತೆ ಕಥೆ ಮಾಡುವಂತಿಲ್ಲ. ಅವರನ್ನು ನೋಡುವ ಫಾಲೋ ಮಾಡುವ ಬಣ ದೊಡ್ಡದಾಗಿದೆ. ಯುವಕರನ್ನೇ ಅಲ್ಲ ವೃದ್ಧರನ್ನೂ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಬೇಕು. ಹೀಗಾಗಿ ಕೊಂಚ ಸಮಯ ತೆಗೆದುಕೊಂಡಿದ್ದಾರೆ ಮುಂದಿನ ಪ್ರಾಜೆಕ್ಟ್ ಅನೌನ್ಸ್ ಮಾಡೋಕೆ ಎನ್ನುವ ಸುದ್ದಿ ಹಬ್ಬಿದೆ.
ಅಪ್ಪು ಮುಂದಿನ ಪ್ರಾಜೆಕ್ಟ್ ತಡವಾಗುತ್ತೆ ಅಂದಮೇಲೆ ತುಂಬಾ ತಡವಾಗುತ್ತದೆ ಅನ್ನುವ ಲೆಕ್ಕಾಚಾರ ಹಾಕಿದ್ದರೆ ತಪ್ಪು. ಯಾಕೆಂದರೆ ಅಪ್ಪು ಕೈಲಿ ಐದಾರು ಪ್ರಾಜೆಕ್ಟ್ ಇದೆ. ಆದರೆ ಅದೆಲ್ಲವನ್ನೂ ಮತ್ತೆ ಮರು ಪರಿಶೀಲಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿಯೇ ಮುಂದಿನ ಚಿತ್ರಕ್ಕಾಗಿ ತಯರಾಗೋಕೆ ಅಪ್ಪು ಇದೀಗ ಕೊಂಚ ಬದಲಾಗಿದ್ದಾರೆ.
ಅಪ್ಪು ಜಿಮ್ ಟ್ರೈನರ್ ಸುಧಾಕರ್ ಶೆಟ್ಟಿ ಅಪ್ಪುಗೆ ಹೆವೀ ವರ್ಕೌಟ್ ಮಾಡಿಸುತ್ತಿದ್ದಾರೆ. ಒಂದೆರಡು ತಿಂಗಳ ಗ್ಯಾಪ್ ನಲ್ಲಿ ಅಪ್ಪು ಕಂಪ್ಲೀಟ್ ಬದಲಾದ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಅಪ್ಪು ದಪ್ಪವಾಗಿರೋದನ್ನ ನೋಡಿ ರೆಸ್ಟ್ ಮಾಡುತ್ತಿರಬೇಕು ಎಂದು ಊಹಿಸಿದ್ದರೆ ತಪ್ಪು. ಯಾಕೆಂದರೆ ಕೆಲವೇ ದಿನದಲ್ಲಿ ಅಪ್ಪು ಹೊಸ ಲುಕ್ ನಲ್ಲಿ ಹೊಸ ಚಿತ್ರದ ಹೊಸಬರ ಜೊತೆ ಕನ್ನಡಿಗರ ಕಣ್ಮುಂದೆ ರಾರಾಜಿಸಲಿದ್ದಾರೆ.