ಬೆಂಗಳೂರು: ಹೈ ಬಜೆಟ್ ಚಿತ್ರಗಳ ಮೂಲಕ ಇಡೀ ದೇಶದ ಗಮನ ಸೆಳೆದ ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್ ನೀಡಿದೆ. ಗುರುವಾರ ಬೆಳಗ್ಗೆಯಿಂದ ಕನ್ನಡದ ಸ್ಟಾರ್ ನಟರು, ನಿರ್ಮಾಪಕರ ಮನೆ, ಕಚೇರಿ ಸೇರಿ ಒಟ್ಟು 50ಕ್ಕೂ ಹೆಚ್ಚು ಕಡೆ ಚೆನ್ನೈ ಹಾಗೂ ಹೈದ್ರಾಬಾದಿನಿಂದ ಆಗಮಿಸಿದ್ದ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆದಿದೆ.
ಐಟಿ ದಾಳಿ ನಡೆಸಲು ಸ್ಯಾಂಡಲ್ ವುಡ್ ನಟರ ಬಿಗ್ ಬ್ಯುಸಿನೆಸ್ ಕಾರಣ. ದೊಡ್ಡ ದೊಡ್ಡ ಬಿಸಿನೆಸ್ ರನ್ ಮಾಡ್ತಿರೋ ಜಾಲ ಹಿಡಿದು ಆದಾಯ ತೆರಿಕೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
Advertisement
Advertisement
ದಾಳಿ ನಡೆಸಲು ಕಾರಣವೇನು..?
ಶಿವರಾಜ್ ಕುಮಾರ್ ಅವರ ಪುತ್ರಿ ಹೆಸರಲ್ಲಿ `ಸತ್ಯ’ ಪ್ರೊಡಕ್ಷನ್ ಹೌಸ್ ಇದೆ. ಶ್ರೀಮುತ್ತು ಸಿನಿ ಸರ್ವೀಸಸ್ ಹೆಸರಲ್ಲಿ ಸೀರಿಯಲ್‍ಗಳ ನಿರ್ಮಾಣ, ಪ್ರಮುಖ ವಾಹಿನಿಗಳಿಗೆ ಐದಾರು ಸೀರಿಯಲ್ ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್‍ನಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶಿವಣ್ಣ ಮನೆ ಮೇಲೆ ದಾಳಿ ಮಾಡಿ, ಕಡತಗಳ ಪರಿಶೀಲನೆ ನಡೆಸಿದ್ದಾರೆ.
Advertisement
Advertisement
ಸುದೀಪ್ ಹಲವು ಹೋಟೆಲ್‍ಗಳ ಮಾಲೀಕನಾಗಿದ್ದಾರೆ. ರೆಸಾರ್ಟ್ ಕಂಪನಿಯಲ್ಲಿ ಪಾರ್ಟನರ್ಶಿಪ್ ಕೂಡ ಆಗಿದ್ದಾರೆ. ರೆಸಿಡೆನ್ಸಿ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಪ್ರಾಜೆಕ್ಟ್, ಹಲವು ಐಶಾರಾಮಿ ಕಾರುಗಳ ಮಾಲೀಕ ಹಾಗೂ ಮೂರು ಎಂಆರ್‍ಪಿ ಲಿಕ್ಕರ್ ಶಾಪ್‍ಗಳ ಒಡೆಯನಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸುದೀಪ್ ಮನೆ ಮೇಲೆ ದಾಳಿ ನಡೆದಿದೆ.
ಪುನೀತ್ ರಾಜ್ ಕುಮಾರ್ ಅವರು ಕೋರಮಂಗಲದಲ್ಲಿ ಜಮೀನು, ಕೋರಮಂಗಲದಲ್ಲಿ ಹಲವು ಕಟ್ಟಡಗಳ ಮಾಲೀಕನಾಗಿದ್ದಾರೆ. ಕೋರಮಂಗಲದಲ್ಲಿ `ಹ್ಯಾಂಗೋವರ್’ ಹೋಟೆಲ್, ನಗರದ ಹಲವು ಮದ್ಯದಂಗಡಿಗಳ ಒಡೆಯ ಹಾಗೂ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ ಪುನೀತ್ ರಾಜ್ ಕುಮಾರ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಟ ಯಶ್ ಅವರು ಲಕ್ಷುರಿ ಕಾರುಗಳ ಒಡೆಯನಾಗಿದ್ದಾರೆ. ಕೆಜಿಎಫ್ 150 ಕೋಟಿ ಕ್ಲಬ್ ಸೇರಿದ ಹಿನ್ನೆಲೆಯಲ್ಲಿ ಯಶ್ ನಿವಾಸದ ಮೇಲೆ ರೇಡ್ ಮಾಡಲಾಗಿದೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಮಾನ್ಯತಾ ಟೆಕ್‍ಪಾರ್ಕಿನಲ್ಲಿರೋ ನಟ ಶಿವರಾಜ್‍ಕುಮಾರ್ ನಿವಾಸ, ಸದಾಶಿವನಗರದಲ್ಲಿರೋ ನಟ ಪುನಿತ್ ನಿವಾಸ, ಕತ್ರಿಗುಪ್ಪೆಯಲ್ಲಿರುವ ಯಶ್ ನಿವಾಸ, ಜೆಪಿ ನಗರದಲ್ಲಿ ಸುದೀಪ್ ನಿವಾಸ, ಮಲ್ಲೇಶ್ವರಂನಲ್ಲಿರುವ ರಾಧಿಕಾ ಪಂಡಿತ್ ನಿವಾಸ, ನಾಗರಬಾವಿಯಲ್ಲಿರುವ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಮನೆ, ಹೆಚ್‍ಎಸ್‍ಆರ್ ಲೇಔಟ್‍ನಲ್ಲಿರುವ ವಿಲನ್ ಪ್ರೊಡ್ಯೂಸರ್ ಸಿ.ಆರ್ ಮನೋಹರ್ ಮನೆ, ನಾಗರಬಾವಿಯಲ್ಲಿರೋ ಜಯಣ್ಣ ನಿವಾಸ ಮತ್ತು ರಾಜಾಜಿನಗರದಲ್ಲಿರುವ ರಾಕ್‍ಲೈನ್ ವೆಂಕಟೇಶ್ ನಿವಾಸ ಸೇರಿದಂತೆ ಹಲವೆಡೆ ನಿನ್ನೆ ಇಡೀ ದಿನ ಐಟಿ ದಾಳಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv