ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರು ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಾಧಿಕಾ ಅವರಿಗೆ ಸಿಸೇರಿಯನ್ ಮಾಡುವ ಮೂಲಕ ಮಗುವನ್ನು ಹೊರತೆಗೆಯಲಾಗಿದೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ.
ಸಿಸೇರಿಯನ್ ಯಾಕೆ?:
ತನ್ನ ಜೀವದೊಂದಿಗೆ ಇನ್ನೊಂದು ಜೀವವನ್ನು ಜೋಪಾನ ಮಾಡಿಟ್ಟುಕೊಂಡು ಜಗತ್ತಿಗೆ ಪರಿಚಯಿಸುವ ಶಕ್ತಿ ಹೆಣ್ಣಿಗೆ ವರದಾನವಾಗಿದೆ. ಒಂಬತ್ತು ತಿಂಗಳು ತಾಯಿಯ ಜೀವದಲ್ಲಿ ಬೆರೆತು ಸೂಕ್ತ ಸಮಯದ ನಂತರ ಹೊರಬರುವ ನೈಸರ್ಗಿಕ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿರುತ್ತದೆ. ಕೆಲವೊಮ್ಮೆ ಪ್ರಸವದ ಸಂದರ್ಭದಲ್ಲಿ ಉಂಟಾಗುವ ವ್ಯತ್ಯಾಸ ಅಥವಾ ಅವಘಡದಿಂದಾಗಿ ತಾಯಿ ಮತ್ತು ಮಗು ಇಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಕೆಲ ಗಂಟೆ ತಾಯಿ ಅನುಭವಿಸುವ ಪ್ರಸವದ ನೋವು ಜೀವನದ ಒಂದು ಅವಿಸ್ಮರಣೀಯ ಅನುಭವವಾಗುತ್ತದೆ. ಅಲ್ಲದೇ ಸಾರ್ಥಕತೆಯ ಭಾವನೆ ಮೂಡುತ್ತದೆ. ಆದರೆ ಇತ್ತೀಚೆಗೆ ಪ್ರಸವ ನೋವು ಅನುಭವಿಸಲು ಮಹಿಳೆಯರು ಹಿಂಜರಿಯುತ್ತಿದ್ದು, ಪರಿಣಾಮ ಸಿಸೇರಿಯನ್ ಕಡೆ ಮುಖಮಾಡುತ್ತಾರೆ.
ಹೆರಿಗೆ ನೋವು ಇರಲ್ಲ:
ಹೆರಿಗೆ ಎನ್ನುವುದು ಮಹಿಳೆಯ ಜೀವನದ ಪ್ರಧಾನ ಘಟ್ಟವಾಗಿರುತ್ತದೆ. ತನ್ನ ಜೀವದೊಂದಿಗೆ ಮತ್ತೊಂದು ಜೀವವನ್ನು ಹೊರಜಗತ್ತಿಗೆ ಪರಿಚಯಿಸುವ ಶುಭಸಂದರ್ಭದಲ್ಲಿ ನಾರ್ಮಲ್ ಇರಲಿ, ಸಿಸೇರಿಯನ್ ಇರಲಿ ನೋವು ಇದ್ದೇ ಇರುತ್ತದೆ. ಸಿಸೇರಿಯನ್(ಶಸ್ತ್ರಚಿಕಿತ್ಸೆ) ಮಾಡುವ ಸಂದರ್ಭದಲ್ಲಿ ನೋವು ಅನುಭವಕ್ಕೆ ಬಾರದಿದ್ದರೂ ಅನಸ್ತೇಷಿಯಾದ ಪವರ್ ಕಡಿಮೆಯಾದ ಮೇಲೆ ನೋವು ಅನುಭವಕ್ಕೆ ಬರುತ್ತದೆ.
ಸಿಸೇರಿಯನ್‍ಗೆ ಕಾರಣಗಳೇನು?
ಮಗು ದಪ್ಪ ಅಥವಾ ತೂಕ ಇದ್ದರೆ ಸಾಮಾನ್ಯ ಹೆರಿಗೆ ಕಷ್ಟವಾಗುತ್ತದೆ. ಅಲ್ಲದೇ ಗರ್ಭದಲ್ಲಿ ಮಗು ತಲೆ ಕೆಳಗಾಗಿದ್ದರೆ ಅಥವಾ ಇನ್ನಿತರ ಸ್ಥಿತಿಗಳಲ್ಲಿದ್ದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಈ ಸಂದರ್ಭದಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಮಗುವನ್ನು ಹೊರ ತೆಗೆಯುವಂತೆ ಸೂಚನೆ ನೀಡುತ್ತಾರೆ.
ಇಷ್ಟು ಮಾತ್ರವಲ್ಲದೇ ಗರ್ಭಿಣಿ ತೂಕದಲ್ಲಿ ಕಡಿಮೆಯಾದಾಗಲು ನಾರ್ಮಲ್ ಹೆರಿಗೆ ಕಷ್ಟವಾಗುತ್ತದೆ. 7-8 ತಿಂಗಳಲ್ಲಿ ಗರ್ಭದಲ್ಲಿ ಸಮಸ್ಯೆಯಾದಲ್ಲಿ ಮಗು ಹೊರ ತೆಗೆಯುವುದು ಅನಿವಾರ್ಯವಾಗುತ್ತದೆ. ಈ ವೇಳೆಯೂ ಶಸ್ತ್ರಚಿಕಿತ್ಸೆ ಆಯ್ದುಕೊಳ್ಳುತ್ತಾರೆ. ಪ್ರಸ್ತುತ ದಂಪತಿ ಒಂದು ಮಗು ಪಡೆದರೆ ಹೆಚ್ಚು ಅನ್ನೋ ಸಂದರ್ಭ ಬಂದಾಗ ಗರ್ಭಿಣಿಯರಲ್ಲಿ ನೋವು ತಡೆದುಕೊಳ್ಳುವ ಶಕ್ತಿ ಕೊಂಚ ಕಡಿಮೆ ಇರುತ್ತದೆ. ಹೀಗಾಗಿ ಕುಟುಂಬದವರೇ ಶಸ್ತ್ರಚಿಕಿತ್ಸೆ ಮಾಡುವಂತೆ ತಿಳಿಸುತ್ತಾರೆ.
ಕನಿಷ್ಠ 3 ತಿಂಗ್ಳು ವಿಶ್ರಾಂತಿ:
ಸಿಸೇರಿಯನ್ ಬಳಿಕ ಕಡಿಮೆಯೆಂದ್ರೂ 3 ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ಆಹಾರದ ಬಗ್ಗೆ ಎಚ್ಚರವಹಿಸಬೇಕು. ದೇಹದ ಮೂಳೆಗಳನ್ನು ಗಟ್ಟಿಗೊಳೀಸುವಂತಹ ಆಹಾರಗಳನ್ನು ಸೇವಿಸಿಬೇಕು. ಜೊತೆಗೆ ಹೆಚ್ಚು ಕೆಲಸ ಮಾಡಬಾರದು. ತುಂಬಾ ಭಾರ ಎತ್ತಬಾರದು. ಯಾಕಂದ್ರೆ ಆಪರೇಷನ್ ಬಳಿಕ ಸರಿಯಾಗಿ ಆರೈಕೆ ಮಾಡದಿದ್ದರೆ ದೇಹಕ್ಕೆ ತೊಂದರೆ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಆಪರೇಷನ್ ಬಳಿಕ ಸಿ ಸೆಕ್ಷನ್ ಅನ್ನೋ ಬೆಲ್ಟ್ ಧರಿಸುವುದು ಉತ್ತಮ. ಇದರಿಂದ ಸೊಂಟ ನೋವು ತಡೆಗಟ್ಟಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv