ಬೆಂಗಳೂರು: ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸುಪಾರಿ ಪ್ರಕರಣ ಸಂಬಂಧ ಕ್ಷಣಕ್ಕೊಂದು ಟ್ವಿಸ್ಟ್ ಸಿಕ್ತಿದೆ. ವಿಶ್ವನಾಥ್ ಮತ್ತು ಗೋಪಾಲಕೃಷ್ಣ ನಡುವಿನ ವೈಷಮ್ಯ ಇದೆಲ್ಲದಕ್ಕೂ ಕಾರಣ ಎನ್ನಲಾಗ್ತಿದೆ.
Advertisement
ಯಲಹಂಕದಲ್ಲಿ ವೀರ ಸಾವರ್ಕರ್ ಮೇಲ್ಸೆತುವೆ ಉದ್ಘಾಟನೆ ದಿನದ ಹಿಂದಿನ ರಾತ್ರಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಸಜ್ಜಾಗಿದ್ರು. ಗೋಪಾಲಕೃಷ್ಣ ಸೂಚನೆಯಂತೆ ಕಪ್ಪು ಬಾವುಟಗಳನ್ನು ಹಿಡಿದು ಪ್ರತಿಭಟನೆಗೆ ಸಿದ್ಧರಾಗಿದ್ರು. ಆದರೆ ಶಾಸಕ ಎಸ್.ಆರ್ ವಿಶ್ವನಾಥ್, ಗೋಪಾಲಕೃಷ್ಣಗೆ ಕರೆ ಮಾಡಿ ಪ್ರತಿಭಟನೆ ಮಾಡಿದ್ರೆ ಹೌಸಿಂಗ್ ಬೋರ್ಡ್‍ಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟುತ್ತಿರುವ ಮನೆ ನೆಲಸಮ ಮಾಡೋದಾಗಿ ಎಚ್ಚರಿಕೆ ನೀಡಿದ್ರು.
Advertisement
Advertisement
ಅದರಂತೆ ಬೆಳ್ಳಂಬೆಳಗ್ಗೆ ಗೋಪಾಲಕೃಷ್ಣ ಮನೆ ಮುಂದೆ ಎರಡು ಜೆಸಿಬಿಗಳು ನಿಂತಿದ್ದವು. ಇದರಿಂದ ಹೆದರಿದ ಗೋಪಾಲಕೃಷ್ಣ ಪ್ರತಿಭಟನೆಯಿಂದ ಹಿಂದೆ ಸರಿದಿದ್ರು. ಪರಿಣಾಮ ಕಾರ್ಯಕರ್ತರ ಆಕ್ರೋಶ, ಬಿಜೆಪಿ ಕಾರ್ಯಕರ್ತರ ಅಪಹಾಸ್ಯದಿಂದ ಮುಜುಗರಕ್ಕೊಳಗಾಗಿದ್ರು. ಇದೇ ಕಾರಣದಿಂದ ವೈಷಮ್ಯ ಹೆಮ್ಮರವಾಗಿತ್ತು ಎನ್ನಲಾಗ್ತಿದೆ. ಇದನ್ನೂ ಓದಿ: ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ- ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್
Advertisement
ಇತ್ತ ಶಾಸಕರ ಕೊಲೆಗೆ ಸಂಚು ರೂಪಿಸಿರೋದನ್ನ ಖಂಡಿಸಿ ಇಂದು ಬಿಜೆಪಿ ಕಾರ್ಯಕರ್ತರು, ವಿಶ್ವನಾಥ್ ಬೆಂಬಲಿಗರು ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿರೋ ಹಿನ್ನೆಲೆಯಲ್ಲಿ ರಾಜಾನುಕುಂಟೆ ಪೊಲೀಸರು ಭದ್ರತೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.