ಬೆಂಗಳೂರು: ಬೆಳ್ಳಂಬೆಳ್ಳಗೆ ಕನ್ನಡದ ಹಲವು ಕಲಾವಿದರು, ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಣ್ಣ, ಪುನೀತ್, ಸುದೀಪ್, ಯಶ್, ರಾಧಿಕಾ ಹಾಗೂ ನಿರ್ಮಾಪಕರ ಮನೆಯಲ್ಲಿ ಐಟಿ ರೇಡ್ ನಡೆದಿದೆ. ಈ ಐಟಿ ರೇಡ್ ಯಾಕೆ ನಡೆದಿರಬಹುದು ಎನ್ನುವುದಕ್ಕೆ ಕೆಲ ಕಾರಣಗಳು ಸಿಕ್ಕಿವೆ.
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮರ್ ವರ್ಷಕ್ಕೆ ಐದು, ಆರು ಸಿನಿಮಾಗಳಲ್ಲಿ ನಟಿಸುತ್ತಾರೆ. ಸ್ಯಾಂಡಲ್‍ವುಡ್‍ನ ಮೋಸ್ಟ್ ಬ್ಯುಸಿ ನಟ ಅಂದರೆ ಅದು ಶಿವಣ್ಣ ಆಗಿದ್ದು, ನಿರ್ಮಾಪಕರ ಪಾಲಿಗೆ ಅವರು ಚಿನ್ನದ ಗಣಿಯೆಂದೇ ಹೆಸರುವಾಸಿಯಾಗಿದ್ದಾರೆ. ಕಳೆದ ವರ್ಷ ಶಿವಣ್ಣ ನಟಿಸಿದ್ದ ಟಗರು, ದಿ ವಿಲನ್, ಮಫ್ತಿ ಸಿನಿಮಾಗಳು ಹಿಟ್ ಆಗಿತ್ತು.
Advertisement
Advertisement
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸ್ಯಾಂಡಲ್‍ವುಡ್ ಮೋಸ್ಟ್ ಸಕ್ಸಸ್ ಹೀರೋ. ಪುನೀತ್ ರಾಜ್‍ಕುಮಾರ್ ಕಾಲ್‍ಶೀಟ್ ಸಿಗುವುದು ಬಹಳ ಕಷ್ಟ. ಅಲ್ಲದೇ ಪುನೀತ್ ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾವನ್ನು ಮಾಡುತ್ತಾರೆ. ಎರಡು ಸಿನಿಮಾ ಮಾಡಿದರೂ ಸೂಪರ್ ಹಿಟ್ ಆಗುತ್ತದೆ. 2017ರಲ್ಲಿ ರಾಜಕುಮಾರ, ಅಂಜನಿಪುತ್ರ ಸೂಪರ್ ಹಿಟ್ ಆಗಿತ್ತು. ಅಲ್ಲದೇ ಹೊಸದಾಗಿ ಪಿಆರ್ ಕೆ ಆಡಿಯೋ, ಪಿಆರ್ ಕೆ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ನಟಸಾರ್ವಭೌಮ ಹಾಗೂ ಯುವರತ್ನ ಸಿನಿಮಾ ಈ ವರ್ಷ ತೆರೆ ಕಾಣಲು ಸಿದ್ಧವಾಗಿದೆ.
Advertisement
Advertisement
ಸ್ಯಾಂಡಲ್‍ವುಡ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್ ಸದ್ಯದ ಅತ್ಯಂತ ಯಶಸ್ವಿ ನಟ. ‘ಕೆಜಿಎಫ್’ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಸೂಪರ್ ಹಿಟ್ ಆಗಿದೆ. ಕೆಜಿಎಫ್ ಸಿನಿಮಾ ಇದೂವರೆಗಿನ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 150 ಕೋಟಿ ದಾಟುವ ಮೂಲಕ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿದೆ. ವರ್ಷದಿಂದ ವರ್ಷಕ್ಕೆ ಯಶ್ ಸಿನಿಮಾದ ಗಳಿಕೆ ಜಿಗಿಯುತ್ತಿದೆ. ಯಶ್ ಈ ಹಿಂದೆ ನಟಿಸಿದ ಗಜಕೇಸರಿ, ಮಿ. ಆಂಡ್ ಮಿಸಸ್ ರಾಮಾಚಾರಿ, ಮಾಸ್ಟರ್ ಪೀಸ್, ಸಂತು ಸ್ಟ್ರೈಟ್ ಫಾರ್ವಡ್ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಸ್ಯಾಂಡಲ್‍ವುಡ್‍ನ ಬಹು ಬೇಡಿಕೆಯ ನಟಿ ರಾಧಿಕಾ ಪಂಡಿತ್. ರಾಧಿಕಾ ಅವರು ಯಶ್ ಪತ್ನಿ ಆಗಿರುವುದರಿಂದ ಸಹಜವಾಗಿ ಐಟಿ ದಾಳಿ ನಡೆದಿದೆ. ಈ ಹಿಂದೆ ರಾಧಿಕಾ ಅವರು ಯಶ್ ಜೊತೆ ನಟಿಸಿದ್ದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗಿತ್ತು.
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಜೊತೆಗೆ ‘ದಿ-ವಿಲನ್’ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದರು. ವಿಲನ್ ಸಿನಿಮಾದ ಆಡಿಯೋ, ಸ್ಯಾಟಲೈಟ್ ರೈಟ್ ಸೇರಿ 70 ಕೋಟಿಗೂ ಹೆಚ್ಚು ಗಳಿಕೆ ಆಗಿತ್ತು. ಈ ವರ್ಷ `ಅಂಬಿ ನಿಂಗೆ ವಯಸ್ಸಾಯ್ತೋ’ ಹಿಟ್ ಆಗಿತ್ತು. ಸುದೀಪ್ ಬೆಳ್ಳಿತೆರೆಯಲ್ಲದೆ, ಕಿರುತೆರೆಯಲ್ಲೂ ತಮ್ಮ ಖದರ್ ತೋರಿಸಿದ್ದಾರೆ. ಈಗ ಬಹು ನಿರೀಕ್ಷಿತ `ಪೈಲ್ವಾನ್’ ಸಿನಿಮಾ ತೆರೆಕಾಣಲಿದೆ.
ವಿಜಯ್ ಕಿರಗಂದೂರು ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಹಾಗೂ ಮೋಸ್ಟ್ ಸಕ್ಸಸ್‍ಫುಲ್ ನಿರ್ಮಾಪಕ. 70 ಕೋಟಿ ವೆಚ್ಚದಲ್ಲಿ ‘ಕೆಜಿಎಫ್’ ಸಿನಿಮಾವನ್ನು ನಿರ್ಮಿಸಲಾಗಿತ್ತು. ಅಲ್ಲದೇ ಈ ಹಿಂದೆ ರಾಜಕುಮಾರ, ಮಾಸ್ಟರ್ ಪೀಸ್ ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು. ವಿಜಯ್ ಸಿನಿಮಾ ಮಾತ್ರವಲ್ಲದೇ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದಾರೆ.
ಕನ್ನಡದ ಕೋಟಿ ನಿರ್ಮಾಪಕರಲ್ಲಿ ಸಿ.ಆರ್. ಮನೋಹರ್ ಕೂಡ ಒಬ್ಬರಾಗಿದ್ದು 60 ಕೋಟಿ ವೆಚ್ಚದಲ್ಲಿ ಅವರು ‘ದಿ-ವಿಲನ್’ ಸಿನಿಮಾವನ್ನು ನಿರ್ಮಿಸಿದ್ದರು. ಶಿವಣ್ಣ, ಸುದೀಪ್, ಪ್ರೇಮ್ ಕಾಂಬಿನೇಷನ್‍ನಲ್ಲಿ ಸಿನಿಮಾ ಹಿಟ್ ಆಗಿತ್ತು. ಮನೋಹರ್ ಚಿತ್ರರಂಗವಲ್ಲದೇ ರಾಜಕೀಯ ರಂಗದಲ್ಲೂ ಹೆಸರು ಮಾಡಿದ್ದು ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv