ಪ್ರತಿ ವಾರ ಚಿಕನ್, ಮಟನ್ ತಿಂದು ಬೇಜಾರಾಗಿರುತ್ತೆ. ಮನೆಯಲ್ಲಿ ಮಕ್ಕಳಿದ್ದರಂತೂ ಈ ವಾರ ಬೇರೆ ಏನದ್ರೂ ಸ್ಪೆಷಲ್ ಮಾಡಮ್ಮಾ ಅಂತ ಹೇಳುತ್ತಿರುತ್ತಾರೆ. ಹೀಗಾಗಿ ಈ ಬಾರಿ ಹಂದಿ ಕರಿ ಮಾಡುವ ಸುಲಭ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಕೊಡಗು ಮಂದಿ ಹೆಚ್ಚಾಗಿ ಹಂದಿ ಮಾಂಸ ಸೇವನೆ ಮಾಡುತ್ತಾರೆ. ಇಲ್ಲಿ ಪ್ರಮುಖ ಹಬ್ಬಗಳಲ್ಲಿ ಕೈಲ್ ಮುಹೂರ್ತದಲ್ಲಿ ಹಂದಿ ಕರಿ ಇದ್ದೇ ಇರುತ್ತದೆ. ಇನ್ನು ಮದುವೆ, ಇತರ ಸಂಭ್ರಮಗಳಲ್ಲಿನ ವಿಶೇಷ ಅಡುಗೆಗಳಲ್ಲಿ ಹಂದಿ ಕರಿ ಇದ್ದೇ ಇರುತ್ತದೆ. ಹಂದಿ ಕರಿ ಇಲ್ಲದೇ ಇವರ ಊಟ ಪೂರ್ಣವಾಗುವುದಿಲ್ಲ.
Advertisement
ಬೇಕಾಗುವ ಸಾಮಗ್ರಿಗಳು:
* ಪೋರ್ಕ್ ಮಾಂಸ – 1 ಕೆ.ಜಿ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
* ಕೊತ್ತಂಬರಿ ಸೊಪ್ಪು – 1ಕಪ್
* ಪುದೀನ ಸೊಪ್ಪು – 1ಕಪ್
* ಖಾರದ ಪುಡಿ – 2 ಚಮಚ
* ಕೊತ್ತಂಬರಿಪುಡಿ – 6 ಚಮಚ
Advertisement
* ಅರಿಶಿಣ ಪುಡಿ – ಸ್ವಲ್ಪ
* ಪೆಪ್ಪರ್ ಪುಡಿ – 1 ಚಮಚ
* ಕಟ್ ಮಾಡಿದ ಈರುಳ್ಳಿ – 2
* ಹಸಿ ಮೆಣಸಿನಕಾಯಿ – 8
* ಕಟ್ ಮಾಡಿದ ಟೊಮೊಟೊ – 1
* ನಿಂಬೆಹಣ್ಣು – 2 ಚಮಚ
* ಎಣ್ಣೆ – 1 ಟೀಸ್ಪೂನ್
* ಸಾಸಿವೆ – 1 ಟೀಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
Advertisement
ಮಾಡುವ ವಿಧಾನ:
* ಚೆನ್ನಾಗಿ ತೊಳೆದ ಹಂದಿ ಮಾಂಸವನ್ನು ಕಟ್ ಮಾಡಿ ಅದಕ್ಕೆ ಅರಿಶಿನಪುಡಿ, ಖಾರದ ಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ನೀರು ಹಾಕದೆ ಕುಕ್ಕರ್‍ನಲ್ಲಿ ಬೇಯಿಸಿ.
* ಕೊತ್ತಂಬರಿ ಪುಡಿಯನ್ನು ಕಾವಲಿ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪ ಕಪ್ಪು ಬಣ್ಣ ಬರುವವರೆಗೂ ಹುರಿದಿಟ್ಟುಕೊಳ್ಳಿ.
* ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕಟ್ ಮಾಡಿದ ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಈರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೆ ಟ್ರೈ ಮಾಡಿ.
Advertisement
* ನಂತರ ಟೊಮೆಟೊ ಉದ್ದುದ್ದ ಕತ್ತರಿಸಿದ ಕೊತ್ತಂಬರಿ ಮತ್ತು ಪುದೀನ ಸೊಪ್ಪನ್ನು ಹಾಕಿದ ನಂತರ ಬೆಂದ ಪೆÇೀರ್ಕ್ ಹಾಕಿ. ಅದಕ್ಕೆ ಉಪ್ಪು, ಪೆಪ್ಪರ್‍ಪುಡಿ ಹಾಕಿ, ಸ್ವಲ್ಪ ಖಾರದ ಪುಡಿ ಹಾಕಿ ಬೇಯಲು ಬಿಡಿ.
* ಬೆಂದ ನಂತರ ಸಣ್ಣ ಉರಿ ಮಾಡಿ ಹುರಿದ ಕೊತ್ತಂಬರಿ ಪುಡಿ ಹಾಕಿ ಚೆನ್ನಾಗಿ ತಿರುಗಿಸುತ್ತೀರಿ, ಇದಾದ ಮೇಲೆ ಅರ್ಧ ಹೋಳು ನಿಂಬೆಹಣ್ಣಿನ ರಸವನ್ನು ಹಾಕಿ ಮುಚ್ಚಳ ಮುಚ್ಚಿ ಒಂದೆರೆಡು ನಿಮಿಷ ಬೇಯಿಸಿ.