ಎಗ್ ಬಿರಿಯಾನಿ ಎಂದರೇ ನಾನ್ ವೆಜ್ ಪ್ರಿಯರಿಗೆ ತುಂಬಾ ಇಷ್ಟ. ಅದರಲ್ಲಿಯೂ ರೆಸ್ಟೋರೆಂಟ್ ಶೈಲಿಯಲ್ಲಿ ಮಾಡುವ ಎಗ್ ಬಿರಿಯಾನಿ ಬಾಯಲ್ಲಿ ನೀರು ಬರುತ್ತೆ. ಅದಕ್ಕೆ ಇಂದು ಸರಳ ವಿಧಾನದಲ್ಲಿ ಹೇಗೆ ಎಗ್ ಬಿರಿಯಾನಿ ಮಾಡಬೇಕು ಎಂದು ಟಿಪ್ಸ್ ಕೊಡುತ್ತೇವೆ.
Advertisement
ಬೇಕಾಗಿರುವ ಪದಾರ್ಥಗಳು:
* ಬಾಸುಮತಿ ಅಕ್ಕಿ -2 ಕಪ್
* ಮೊಟ್ಟೆಗಳು – 6
* ಕಟ್ ಮಾಡಿದ ಈರುಳ್ಳಿ – 1
* ಕತ್ತರಿಸಿದ ಹಸಿರು ಮೆಣಸಿನಕಾಯಿಗಳು – 10
* ಪಲಾವ್ ಎಲೆ – 2
* ಲವಂಗ – 4
* ಕಾಳುಮೆಣಸು – 1/2 ಟೀಸ್ಪೂನ್
Advertisement
* ದಾಲ್ಚಿನ್ನಿ – 1 ಇಂಚು
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
* ಪಲಾವ್ ಮಸಾಲಾ – 1 ಟೀಸ್ಪೂನ್
* ಎಣ್ಣೆ – 2 ಟೀಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಆರು ಮೊಟ್ಟೆಗಳಲ್ಲಿ ನಾಲ್ಕನ್ನು ಬೇಯಿಸಿಕೊಳ್ಳಿ.
* ದೊಡ್ಡ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ದಾಲ್ಚಿನ್ನಿ, ಪಲಾವ್ ಎಲೆ, ಕಾಳುಮೆಣಸು, ಲವಂಗ ಹಾಕಿ ಹುರಿಯಿರಿ.
* ಕೆಲವು ಸೆಕೆಂಡುಗಳ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಜೊತೆಗೆ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ತಿಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈ ಮಿಶ್ರಣಕ್ಕೆ ಉಳಿದ ಎರಡು ಮೊಟ್ಟೆಗಳನ್ನು ಒಡೆದು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಅದಕ್ಕೆ ಅಕ್ಕಿಯನ್ನು ಸೇರಿಸಿ, ಒಂದು ನಿಮಿಷ ಫ್ರೈ ಮಾಡಿ. ಉಪ್ಪಿನೊಂದಿಗೆ ಪಲಾವ್ ಮಸಾಲಾ ಹಾಕಿ ಚೆನ್ನಾಗಿ ಫ್ರೈ ಮಾಡಿ.
* ಈಗ ಬೇಯಿಸಿದ ಮೊಟ್ಟೆಗಳನ್ನು ಹಾಕಿ. ನಾಲ್ಕು ಕಪ್ ನೀರು ಹಾಕಿ ಅಕ್ಕಿಯನ್ನು ಬೇಯಿಸಿ.
* ಸ್ವಲ್ಪ ನಿಂಬೆರಸ ಹಾಕಿ ಮಿಕ್ಸ್ ಮಾಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಯಾಗಿರುವಾಗಲ್ಲೇ ಬಡಿಸಿ.