2 ರೆಡ್ಡಿ+1 ಯಡ್ಡಿ ಇದು ಮೋದಿ 2+1 ಫಾರ್ಮುಲಾ: ಸಿಎಂ ತಿರುಗೇಟು

Public TV
1 Min Read
cm modi

ಬೆಂಗಳೂರು: 2 ರೆಡ್ಡಿ+ 1 ಯಡ್ಡಿ ಇದು ಪ್ರಧಾನಿ ನರೇಂದ್ರ ಮೋದಿ ಹೇಳಿದ 2+1 ಫಾರ್ಮುಲಾ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಚಾಮರಾಜನಗದ ಸಂತೆಮಾರಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ, ಕರ್ನಾಟಕದಲ್ಲಿ ಕಾಂಗ್ರೆಸ್ ಕುಟುಂಬದ ರಾಜಕಾರಣ ತಾಂಡವವಾಡುತ್ತಿದೆ. ಮುಖ್ಯಮಂತ್ರಿಗಳಿಗೆ 2 +1 ಫಾರ್ಮುಲಾ ಇದ್ರೆ, ಇತರೆ ಮಂತ್ರಿಗಳು 1 + 1 ಫಾರ್ಮುಲದಡಿ ಅವರಿಗೆ ಅವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಇದ್ಯಾವ ರೀತಿಯ ಪ್ರಜಾಪ್ರಭುತ್ವ ಎಂದು ಪ್ರಶ್ನಿಸಿದ್ದರು.

ಈ ಪ್ರಶ್ನೆಗೆ ಉತ್ತರ ಎಂಬಂತೆ ಸಿಎಂ ಕನಾಟಕ ಕಾಂಗ್ರೆಸ್ ಮಾಡಿರುವ ಟ್ವೀಟ್ ಅನ್ನು ರಿ ಟ್ವೀಟ್ ಮಾಡಿದ್ದಾರೆ. 2 ರೆಡ್ಡಿ + 1 ಯಡ್ಡಿ ಇದು ಕರ್ನಾಟಕವನ್ನು ಲೂಟಿ ಮಾಡಲು ಮುಂದಾಗಿರುವ ಬಿಜೆಪಿ ಫಾರ್ಮುಲಾ. ಯಾಕೆ ಮೋದಿಯವರೇ ನೀವು ಈ ಫಾರ್ಮುಲಾದ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿ ತರಾಟಗೆ ತೆಗೆದುಕೊಂಡಿದ್ದಾರೆ.

ವಾರಣಾಸಿ ಮತ್ತು ವಡೋದರಲ್ಲಿ ನೀವು ಸ್ಪರ್ಧೆ ಮಾಡಿದ್ದು ಯಾಕೆ? 56 ಇಂಚಿನ ಎದೆಯನ್ನು ಹೊಂದಿರುವ ನೀವು ಈ ಪ್ರಶ್ನೆಗೆ ಸ್ಪಷ್ಟನೆ ನೀಡಿ. 2 ಸ್ಥಾನ ಬಿಟ್ಟಾಕಿ, ನಿಮ್ಮ ಪಕ್ಷ 60-70 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಬರೆದು #2Reddy1Yeddy ಮತ್ತು #CongressMathomme ಹ್ಯಾಶ್ ಟ್ಯಾಗಿ ಸಿಎಂ ಟ್ವೀಟ್  ಮಾಡಿ ಮೋದಿಯವರಿಗೆ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *