ಲಡ್ಡು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದನ್ನು ಮಾಡುವ ವಿಧಾನ ಗೊತ್ತಿದ್ದರೆ ಸುಲಭದಲ್ಲಿ ಮಾಡಬಹುದು. ಅಂಗಡಿಯಲ್ಲಿ ಸಿಗೋ ಲಡ್ಡುಗಿಂತ ಮನೆಯಲ್ಲಿಯೇ ಎಣ್ಣೆ ಮತ್ತು ತುಪ್ಪ ಬಳಸದೆ ತಯಾರು ಮಾಡಬಹುದು. ಹೀಗಾಗಿ ಆರೋಗ್ಯಕರವಾದ ಸಿಂಪಲ್ ಲಡ್ಡು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
* ಕೆಂಪು ಅಕ್ಕಿ -1 ಕಪ್
* ಬೆಲ್ಲ -3/4 ಕಪ್
* ತುರಿದ ಕೊಬ್ಬರಿ – 1ಕಪ್
* ಏಲಕ್ಕಿ 5-6
* ಗೋಡಂಬಿ – 8,10 ಸಣ್ಣಗೆ ಚೂರು ಮಾಡಿದ್ದು
Advertisement
ಮಾಡುವ ವಿಧಾನ
* ಕೆಂಪು ಅಕ್ಕಿಯನ್ನು ಶುದ್ಧನೀರಿನಲ್ಲಿ 2 ಬಾರಿ ತೊಳೆದು ಸ್ವಲ್ಪ ಒಣಗಿಸಿ
* ಬಳಿಕ ಒಂದು ಪ್ಯಾನ್‍ಗೆ ಅಕ್ಕಿ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ
* ಒಂದು ಮಿಕ್ಸಿ ಜಾರ್‍ಗೆ ಅಕ್ಕಿ ಹಾಗೂ ಏಲಕ್ಕಿ ಹಾಕಿ ಪುಡಿ ಮಾಡಿಕೊಳ್ಳಿ
* ಅದಕ್ಕೆ ಬೆಲ್ಲ, ಕಾಯಿ ತುರಿ ಹಾಕಿ ರುಬ್ಬಿ
* ರುಬ್ಬಿದ ಮಿಶ್ರಣವನ್ನು ಒಂದು ಬೌಲ್‍ಗೆ ಹಾಕಿಕೊಂಡು ಗೋಡಂಬಿ ಚೂರುಗಳನ್ನು ಮಿಕ್ಸ್ ಮಾಡಿ ಲಡ್ಡು ರೀತಿಯಲ್ಲಿ ಉಂಡೆ ಮಾಡಿ. ಬಳಿಕ ಆರೋಗ್ಯಕರವಾದ ಲಡ್ಡು ಸವಿಯಿರಿ.