ಬೆಂಗಳೂರು: ಮೋಟಾರು ವಾಹನ ತಿದ್ದುಪಡಿ ಮಸೂದೆ ವಿರುದ್ಧ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರಿಗೆಗೆ ಮುಷ್ಕರದ ಬಿಸಿ ತಟ್ಟಿಲ್ಲ. ಅಲ್ಲದೇ ನಗರದಲ್ಲೂ ಬಿಎಂಟಿಸಿ, ಕೆಎಸ್‍ಆರ್ ಟಿಸಿ, ಮೆಟ್ರೋ ಟ್ರೈನ್ ಬೆಳಗ್ಗೆ ಎಂದಿನಂತೆ ಸಂಚಾರ ಶುರು ಮಾಡಿವೆ.
ಹೊಸ ಮೋಟಾರು ಕಾಯ್ದೆ ವಿರೋಧಿಸಿ ಸಾರಿಗೆ ಬಂದ್ ಕರೆ ಹಿನ್ನಲೆಯಲ್ಲಿ ಗದಗ ನಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ದೊರೆತಿದ್ದು, ಬಂದ್ ಗೆ ಯಾವುದೇ ಬೆಂಬಲವಿಲ್ಲ. ಎಂದಿನಂತೆ ಸಾರಿಗೆ ಬಸ್, ಆಟೋ, ಟ್ಯಾಕ್ಸಿ, ಲಾರಿಗಳು ಕಾರ್ಯ ಸಂಚರಿಸುತ್ತಿದೆ. ಗದಗ ಜಿಲ್ಲೆನಲ್ಲಿ ಯಾವುದೇ ಸಂಘಟನೆಗಳಿಂದ ಬಂದ್ ಕರೆಗೆ ಬೆಂಬಲ ವ್ಯಕ್ತವಾಗಿಲ್ಲ. ಅಲ್ಲದೇ ಎಂದಿನಂತೆ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಆರಂಭವಾಗಿದೆ.
Advertisement
Advertisement
ವಾಣಿಜ್ಯ ನಗರಿ ಹುಬ್ಬಳ್ಳಿಗೆ ಸಾರಿಗೆ ಮುಷ್ಕರ ಬಿಸಿ ತಟ್ಟಿಲ್ಲ. ಎಂದಿನಂತೆ ಸಿಟಿ ಬಸ್ ಹಾಗೂ ಸರ್ವಿಸ್ ಬಸ್‍ಗಳು ರಸ್ತೆಗಿಳಿದಿದೆ. ಆಟೋ, ಟ್ಯಾಕ್ಸಿಗಳ ಸಂಚಾರಕ್ಕೂ ಮುಷ್ಕರ ಘೋಷಣೆ ಅಡ್ಡಿಯಾಗುತ್ತಿಲ್ಲ. ದೈನಂದಿನ ಕಾರ್ಯಗಳಿಗೆ ಬಸ್ ಮೂಲಕ ಪ್ರಯಾಣಿಕರು ತೆರಳುತ್ತಿದ್ದಾರೆ. ಹುಬ್ಬಳ್ಳಿ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನಿತ್ಯದಂತೆ ಬಸ್ ಸಂಚಾರ ಮುಂದುವರಿದಿದೆ. ಸಾರಿಗೆ ಕಾರ್ಮಿಕರ ಮುಷ್ಕರಕ್ಕೆ ಆಟೋ, ಖಾಸಗಿ ವಾಹನ ಬಸ್ ಸಂಘಗಳ ಬೆಂಬಲ ದೊರೆಯುತ್ತಿಲ್ಲ.
Advertisement
ಕೊಡಗಿನಲ್ಲಿ ಕೂಡ ಎಂದಿನಂತೆ ಬಸ್ ಸಂಚಾರ ಆರಂಭವಾಗಿದ್ದು, ಸಾರಿಗೆ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ. ಎಂದಿನಂತೆ ಸರ್ಕಾರಿ ಬಸ್ ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಿಲ್ಲ. ಖಾಸಗಿ ಬಸ್, ಆಟೋ, ಟ್ಯಾಕ್ಸಿ ವಾಹನ ಕೂಡ ಎಂದಿನಂತೆ ಸಂಚಾರ ಆರಂಭವಾಗಿದೆ. ಇನ್ನು ಬಾಗಲಕೋಟೆಯಲ್ಲೂ ಬಂದ್ ಬಿಸಿ ತಟ್ಟಿಲ್ಲ. ಜಿಲ್ಲೆಯಲ್ಲಿ ಎಂದಿನಂತೆ ಸಂಚಾರ ಶುರುವಾಗಿದೆ. ಬೆಳಗ್ಗಿನಿಂದಲೇ ಸಾರಿಗೆ ಬಸ್ ಗಳು ಸಂಚರಿಸುತ್ತಿದೆ. ಅಲ್ಲದೇ ಬಸ್ ಸಂಚಾರದಲ್ಲಿ ಯಾವುದೇ ವ್ಯತಯ ಇಲ್ಲ. ಹಾಗಾಗಿ ಸುಗಮವಾಗಿ ಆಟೋ, ಖಾಸಗಿ ವಾಹನಗಳ ಸಂಚಾರ ಆರಂಭವಾಗಿದೆ.
Advertisement
ಕೊಪ್ಪಳದಲ್ಲಿ ಎಂದಿನಂತೆ ಸಾರಿಗೆ ಸಂಚಾರ ಸುಗಮವಾಗಿ ಸಾಗುತ್ತಿದೆ. ಸಾರಿಗೆ ಬಂದ್ ಗೆ ಸಾರಿಗೆ ಸಂಸ್ಥೆ ನೌಕರರು ಬೆಂಬಲ ನೀಡದ ಕಾರಣ ಬೆಳಗ್ಗಿನಿಂದಲೇ ಸಾರಿಗೆ ಬಸ್ ಗಳು ಸಂಚಾರ ನಡೆಸುತ್ತಿವೆ. ಇದರಿಂದಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಜೊತೆಗೆ ಆಟೋ, ಖಾಸಗಿ ವಾಹನಗಳ ಸಂಚಾರ ಸಹ ಯಾಥಾಸ್ಥಿತಿಯಲ್ಲಿದ್ದು ಪ್ರಯಾಣಿಕರಿಗೆ ತೊಂದರೆಯಾಗಿಲ್ಲ. ಸಾರಿಗೆ ಬಂದ್ ಯಾವುದೇ ಸಂಘಟನೆಗಳು ಬೆಂಬಲ ನೀಡದ ಕಾರಣ ಕೊಪ್ಪಳದಲ್ಲಿ ಸಾರಿಗೆ ಸಂಚಾರ ಸುಗಮವಾಗಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.
ಮಂಡ್ಯದಲ್ಲೂ ಬಂದ್ ಬಿಸಿ ತಟ್ಟಿಲ್ಲ. ಎಂದಿನಂತಿರುವ ಸಂಚಾರ ವ್ಯವಸ್ಥೆ ಶುರುವಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಸ್ಸುಗಳು ಸಂಚರಿಸುತ್ತಿದ್ದು, ಬೆಳಗ್ಗಿನಿಂದಲೇ ಸಾರಿಗೆ ಬಸ್ ಗಳು ರಸ್ತೆಗಿಳಿದಿವೆ. ಬಸ್ ಸಂಚಾರದಲ್ಲಿ ಯಾವುದೇ ವ್ಯತಯ ಇಲ್ಲದ ಕಾರಣ ಸುಗಮವಾಗಿ ಆಟೋ, ಖಾಸಗಿ ವಾಹನಗಳ ಸಂಚಾರ ಸಾಗಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಾಂತ ಸಾರಿಗೇ ನೌಕರರು ಬಂದ್ ಗೆ ಬೆಂಬಲಿಸಿಲ್ಲ. ಸಾರಿಗೆ ಸಂಪರ್ಕ ಯಥಾ ಸ್ಥಿತಿಯಲ್ಲಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಗೆ ಎಂದಿನಂತೆ ಸರ್ಕಾರಿ ಸಾರಿಗೆ ವಾಹನಗಳು ಸಂಚರಿಸುತ್ತಿದೆ. ಅಲ್ಲದೇ ಆಟೋ, ಟ್ಯಾಕ್ಸಿಗಳು ಕೂಡ ಎಂದಿನಂತೆ ಸಂಚಾರ ಆರಂಭಿಸಿದೆ. ಗೋವಾ- ಕಾರವಾರ ಕದಂಬ ಗೋವಾ ಸಾರಿಗೆಯೂ ಎಂದಿನಂತೆ ಸಂಚಾರ ಆರಂಭಿಸಿದೆ. ಇನ್ನೂ ಚಾಮರಾಜನಗರ, ಆನೇಕಲ್, ತುಮಕೂರು, ಕಲಬುರಗಿ, ನೆಲಮಂಗಲ, ಮೈಸೂರು, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನದಲ್ಲೂ ಸಾರಿಗೆ ಸಂಪರ್ಕ ಯಥಾ ಸ್ಥಿತಿಯಲ್ಲಿದ್ದು, ಎಂದಿನಂತೆ ಸರ್ಕಾರಿ ವಾಹನಗಳು ಸಂಚರಿಸುತ್ತಿದೆ.
ರಾಯಚೂರಿನಲ್ಲಿ ಕೇಂದ್ರದ ನೂತನ ಮೋಟಾರು ವಾಹನ ಕಾಯ್ದೆಗೆ ವಿರೋಧವಿದ್ದು, ಕಾರ್ಮಿಕ ಸಂಘಟನೆಗಳ ಮುಷ್ಕರ ಕರೆ ನೀಡಿದ ಹಿನ್ನೆಲೆಯಲ್ಲಿ ಸಾರಿಗೆ ವಾಹನಗಳ ಸಂಚಾರದಲ್ಲಿ ವ್ಯತ್ಯಯವಿಲ್ಲ. ಅಲ್ಲದೇ ಸಿಐಟಿಯು ಕಾರ್ಮಿಕರು ಮಾತ್ರ ಇಂದು ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. ಎಐಟಿಯುಸಿ ಸಂಘಟನೆ ಮುಷ್ಕರ ಕ್ಕೆ ಬೆಂಬಲ ನೀಡಿಲ್ಲ. ಸದ್ಯ ಮಧ್ಯಾಹ್ನ ವೇಳೆ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews