ನವದೆಹಲಿ: ಪಾಪಿ ಪಾಕಿಸ್ತಾನದ ಸೈನಿಕರ ವಶದಲ್ಲಿದ್ದರೂ ತಾಯ್ನಾಡಿನ ಬಗೆಗಿನ ರಹಸ್ಯವನ್ನು ಯೋಧ ಅಭಿನಂದನ್ ಬಾಯಿ ಬಿಡಲಿಲ್ಲ. ಆದ್ರೆ ಅಭಿನಂದನ್‍ಗೆ ಭಾರತದ ರಹಸ್ಯ ಬಾಯ್ಬಿಡುವಂತೆ ನಾನಾ ಹಿಂಸೆ ನೀಡಲಾಗಿತ್ತು.
ಹೌದು. ಪಾಪಿ ಪಾಕಿಸ್ತಾನದವರಿಗೆ ಮಾನವೀಯತೆ ಸತ್ತು ಹೋಗಿದೆ. ಯಾಕಂದ್ರೆ ಪಾಕ್ ಯುದ್ಧ ವಿಮಾನವನ್ನು ಉಡಾಯಿಸಿದ ಬಳಿಕ ಸೆರೆ ಸಿಕ್ಕ ಅಭಿನಂದನ್‍ಗೆ ಪಾಕ್ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಪಾಕ್ ಸೈನ್ಯ ಅಭಿನಂದನ್‍ನ್ನು ಸೆರೆಹಿಡಿದ ಮೊದಲ 24 ಗಂಟೆ ನಿದ್ರೆಯೇ ಮಾಡೋಕೆ ಬಿಟ್ಟಿಲ್ಲ. ಪದೇ ಪದೇ ಭಾರತದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಕೇಳಿ ಟಾರ್ಚರ್ ಕೊಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಇಷ್ಟು ಮಾತ್ರವಲ್ಲದೇ ಕಿವಿ ತಮಟೆ ಒಡೆದುಹೋಗುವಂತೆ ಜೋರಾಗಿ ಸೌಂಡ್ ಹಾಕಿ, ಕಣ್ಣೇ ಬಿಡದ ಹಾಗೇ ತುಂಬಾ ಪ್ರಕಾಶಮಾನವಾದ ಲೈಟನ್ನು ಆನ್ ಮಾಡಿದ್ದಾರೆ. ಒಬ್ಬರಿಂದ ಒಬ್ಬರು ಬಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಿದ್ದರು. ಇನ್ನು, ಅಭಿನಂದನ್ ಅವರ ಬೆನ್ನಿಗೆ ಸ್ವಲ್ಪಮಟ್ಟಿನ ಗಾಯವಾಗಿದ್ದು ದೆಹಲಿಯ ಆರ್ ಆಂಡ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅಭಿನಂದನ್‍ಗೆ ಪಾಕ್ ಸೇನಾಧಿಕಾರಿಗಳು ಮಾನಸಿಕ ಕಿರುಕುಳ!
Advertisement
ಇದೆಲ್ಲದರ ನಡುವೆ ಅಜರ್‍ನ ವಿಚಾರದಲ್ಲಿ ಪಾಕ್ ಮತ್ತೆ ಕುತಂತ್ರಿ ಬುದ್ಧಿ ತೋರ್ತಿದೆ. ಅಜರ್ ಬದುಕಿದ್ದಾನೆ. ಅಲ್ಲದೆ ಆತನಿಗೆ ಸೇನೆಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿದೆ ಎಂದು ಪಾಕ್ ಸಚಿವ ಫಯ್ಯಾಜ್ ಉಲ್ ಹಸನ್ ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ಸೇನೆಯಿಂದ ಮಾನಸಿಕ ಕಿರುಕುಳ – ಅಭಿನಂದನ್ ಮುಂದೇನು..?
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv