ಹೋಳಿಗೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಯುಗಾದಿ ಹಬ್ಬ ಬೇರೆ ಬಂತು. ಆದರೆ ಈ ಕೊರೊನಾ ವೈರಸ್ ಭೀತಿಯಿಂದಾಗಿ ಎಲ್ಲರೂ ಮನೆಯಲ್ಲೇ ಇರುತ್ತಾರೆ. ಇತ್ತ ಅಂಗಡಿಗಳು ಕೂಡ ಬಂದ್ ಆಗಿದ್ದು, ಹೋಳಿಗೆ ತಿನ್ನಬೇಕು ಅನಿಸಿದ್ರೂ ಎಲ್ಲೂ ಸಿಗಲ್ಲ. ಹೀಗಾಗಿ ಮನೆಯಲ್ಲೇ ರುಚಿ ರುಚಿಯಾದ ಕ್ಯಾರೆಟ್ ಹೋಳಿಗೆ ಮಾಡಿ ತಿನ್ನಿ.
ಬೇಕಾಗುವ ಸಾಮಾಗ್ರಿಗಳು:
* ಮೈದಾ ಹಿಟ್ಟು- ಕಾಲು ಕೆಜಿ
* ಚಿರೋಟಿ ರವೆ- 100 ಗ್ರಾಂ
* ಅರಿಶಿನ- ಚಿಟಿಕೆ
Advertisement
ಊರ್ಣ ಮಾಡಲು:
* ಕ್ಯಾರೆಟ್- ಕಾಲು ಕೆಜಿ
* ಬೆಲ್ಲ- 2 ಅಚ್ಚು
* ಏಲಕ್ಕಿ ಪುಡಿ- ಸ್ವಲ್ಪ
* ಎಣ್ಣೆ- 1 ಬಟ್ಟಲು
Advertisement
Advertisement
ಕಣಕ ಮಾಡುವ ವಿಧಾನ:
* ಮೊದಲಿಗೆ ಮೈದಾ ಹಿಟ್ಟನ್ನು ಜರಡಿ ಹಿಡಿದು ಅದಕ್ಕೆ ಚಿರೋಟಿ ರವೆ, ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. ಕಣಕದಿಟ್ಟು ಮೆದು ಇರಲು ಎಣ್ಣೆಯನ್ನು ಸೇರಿಸಿ ಚೆನ್ನಾಗಿ ನಾದಿ
* ಸುಮಾರು ಒಂದು ಗಂಟೆಗಳ ಕಾಲ ಕಣಕವನ್ನು ನೆನೆಯಲು ಬಿಡಿ. ಹಿಟ್ಟಿನ ಮೇಲೆ ಒದ್ದೆ ಬಟ್ಟೆಯನ್ನು ಹೊಚ್ಚಿಡಿ
Advertisement
ಊರ್ಣ ಮಾಡುವ ವಿಧಾನ:
* ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಿ
* ತುರಿದ ಕ್ಯಾರೆಟ್ ಅನ್ನು ಒಮ್ಮೆ ಮಿಕ್ಸಿಗೆ ಹಾಕಿ. ಜಾಸ್ತಿ ನುಣ್ಣಗೆ ಬೇಡ. ಸ್ವಲ್ಪ ತರಿತರಿ ರೀತಿ ಇರಲಿ
* ಈಗ ಒಂದು ಪ್ಯಾನ್ ಬಿಸಿಗಿಟ್ಟು ಬೆಲ್ಲವನ್ನು ಹಾಕಿ ಕರಗಲು ಬಿಡಿ.
* ಬೆಲ್ಲ ಕರಗುತ್ತಾ ಬಂದಾಗ ಕ್ಯಾರೆಟ್ ತುರಿಯನ್ನು ಸೇರಿಸಿ ಚೆನ್ನಾಗಿ ತಿರುಗಿಸಿ.
* ಕ್ಯಾರೆಟ್, ಬೆಲ್ಲದ ಪಾಕದೊಂದಿಗೆ ಚೆನ್ನಾಗಿ ಮಿಕ್ಸ್ ಆಗಲಿ
* ಈಗ ಏಲಕ್ಕಿ ಪುಡಿ ಸೇರಿಸಿ ಕೆಳಗಿಳಿಸಿ, ಆರಲು ಬಿಡಿ
ಹೋಳಿಗೆ ಮಾಡುವ ವಿಧಾನ:
* ಈಗ ಒಂದು ನಿಂಬೆಹಣ್ಣಿನ ಗಾತ್ರದಷ್ಟು ಕಣಕವನ್ನು ತೆಗೆದುಕೊಳ್ಳಿ.
* ಅದನ್ನು ಮಣೆ ಮೇಲೆಟ್ಟು ಅಗಲ ಮಾಡಿಕೊಳ್ಳಿ.
* ಅಗಲ ಮಾಡಿಕೊಂಡ ಕಣಕದೊಳಗೆ ಊರ್ಣದ ಚಿಕ್ಕ ಉಂಡೆಯನ್ನು ಸೇರಿಸಿ ಲಟ್ಟಿಸಿ.
* ಚೆನ್ನಾಗಿ ಎಣ್ಣೆ ಹಚ್ಚಿದರೆ ಹೋಳಿಗೆ ಹೊಡೆಯುವುದಿಲ್ಲ.
* ಈಗ ಚೆನ್ನಾಗಿ ಲಟ್ಟಿಸಿದ, ತಟ್ಟಿದ ಹೋಳಿಗೆಯನ್ನು ತವಾ ಮೇಲೆ ಹಾಕಿ ಎರಡೂ ಕಡೆ ಬೇಯಿಸಿ
* ಎಣ್ಣೆ ಬೇಕಾದರೆ ಹಾಕಿ, ಇಲ್ಲವಾದರೆ ಲಟ್ಟಿಸುವಾಗ ಹಾಕಿರುವ ಎಣ್ಣೆಯೇ ಸಾಕು.
* ಸರ್ವ್ ಮಾಡುವಾಗ ಬಿಸಿ ತುಪ್ಪವನ್ನು ಮೇಲೆ ಹಾಕಿ ಕೊಡಿ.