ಸಣ್ಣ ಮಕ್ಕಳಲ್ಲಿ ಕಲಿಕೆಗೆ ಸಂಬಂಧಿಸಿದಂತೆ ನೆನಪಿನ ಶಕ್ತಿಯ ಕೊರತೆಯಿದ್ದರೆ, ಆ ಮಕ್ಕಳಿಗೆ ದಿನವೂ ಒಂದು ಅಥವಾ ಎರಡು ಎಳೆಯ ಒಂದೆಲಗ ಎಲೆಗಳನ್ನು ತಿನ್ನಿಸಿದರೆ ಸ್ಮರಣಶಕ್ತಿ ವೃದ್ಧಿಯಾಗುತ್ತದೆ. ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಇದು ಒಂದು ಅದ್ಭುತ ಸೊಪ್ಪು ಇದಾಗಿದ್ದು, ಆಯುರ್ವೇದಲ್ಲೂ ಹೇಳಲಾಗಿದೆ.
Advertisement
ಕನ್ನಡದಲ್ಲಿ ಒಂದೆಲಗ, ತಿಮರೆ ಎಂದು ಕರೆದರೆ, ಸಂಸ್ಕೃತದಲ್ಲಿ ಬ್ರಾಹ್ಮಿ ಎಂಬ ಹೆಸರಿದೆ. ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ವೃದ್ಧಿ, ಕಲಿಕೆಯ ಶಕ್ತಿ ಹೆಚ್ಚಿಸಲು, ದೊಡ್ಡವರಲ್ಲೂ ಮಾನಸಿಕ ಒತ್ತಡದ ನಿವಾರಣೆಗೆ ಇದು ಸಹಾಯಕಾರಿಯಾಗುತ್ತದೆ. ಒಂದೆಲಗದ ರೆಡಿಮೇಡ್ ಪುಡಿಗಳೂ ಲಭ್ಯ. ಇದನ್ನು ಹಾಲು ಅಥವಾ ಜೇನಿನ ಜೊತೆಗೆ ಕೊಡಬಹುದು.
Advertisement
Advertisement
ಬೇಕಾಗುವ ಸಾಮಗ್ರಿಗಳು:
ಹಸಿಮೆಣಸು – 2
ಬ್ರಾಹ್ಮಿ ಎಲೆಗಳು – ಒಂದು ಕಪ್
ಉದ್ದಿನ ಬೇಳೆ- 1 ಚಮಚ
ಹುಣಸೆ ಹಣ್ಣು- ರುಚಿಗೆ ತಕ್ಕಷ್ಟು
ಉಪ್ಪು- ರುಚಿಗೆ ತಕ್ಕಷ್ಟು
ನೀರು- ಸ್ವಲ್ಪ
ತೆಂಗಿನ ತುರಿ- ಅರ್ಧ ಕಪ್
Advertisement
ಮಾಡುವ ವಿಧಾನ:
* ಮೊದಲು ಒಂದು ಮಿಕ್ಸ್ ಜಾರಿಗೆ 2 ಹಸಿಮೆಣಸನ್ನು ಕಟ್ ಮಾಡಿ ಹಾಕಿ. ನಂತರ ಈಗಾಗಲೇ ತೊಳೆದುಟ್ಟುಕೊಂಡ ಎಲೆಗಳನ್ನು ಅದೇ ಮಿಕ್ಸಿ ಜಾರಿಗೆ ಹಾಕಿ.
* ಇತ್ತ ಒಂದು ಚಮಚದಷ್ಟು ಉದ್ದಿನ ಬೇಳೆಯನ್ನು ಉರಿದಿಟ್ಟುಕೊಳ್ಳಿ. ಹೀಗೆ ಉರಿದಿಟ್ಟುಕೊಂಡ ಉದ್ದಿನ ಬೇಳೆಯನ್ನು ಕೂಡ ಮಿಕ್ಸಿ ಜಾರಿಗೆ ಹಾಕಿ.
* ಅಲ್ಲದೆ ಇದಕ್ಕೆ ರುಚಿಗೆ ತಕ್ಕಷ್ಟು ಹುಣಸೆ ಹಣ್ಣು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.್ಪದಕ್ಕೆ ನೀರು ಬೆರೆಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಹೀಗೆ ತರಿತರಿಯಾಗಿ ರುಬ್ಬಿದ ಬಳಿಕ ಅದಕ್ಕೆ ಅರ್ಧ ಕಪ್ ನಷ್ಟು ತೆಂಗಿನ ತುರಿಯನ್ನು ಬೆರೆಸಿ ಮತ್ತೊಮ್ಮೆ ರುಬ್ಬಿಕೊಳ್ಳಿ.
* ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಂಡ ಬಳಿಕ ಎಣ್ಣೆ, ಉದ್ದಿನ ಬೇಳೆ ಹಾಗೂ 1 ಒಂದು ಒಣ ಮೆಣಸು ಹಾಕಿ ಒಗ್ಗರಣೆ ಕೊಟ್ಟರೆ ಬ್ರಾಹ್ಮಿ ಎಲೆಯ ಚಟ್ನಿ ರೆಡಿ. ಇದನ್ನು ದೋಸೆ ಇನ್ನಿತರ ಆಹಾರಗಳಿಗೆ ಸೈಡ್ ಡಿಶ್ ಆಗಿ ಸೇವಿಸಬಹುದು.