Connect with us

Cinema

ಸೋಮವಾರ ಕಿರಿಕ್ ಜೋಡಿಗೆ ಎಂಗೇಜ್‍ಮೆಂಟ್: ವಿರಾಜಪೇಟೆಯಲ್ಲಿ ಸಕಲ ಸಿದ್ಧತೆ

Published

on

ಮಡಿಕೇರಿ: ಸ್ಯಾಂಡಲ್‍ವುಡ್‍ಗೆ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದ ಕಿರಿಕ್ ಜೋಡಿಗಳಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಈಗ ತಾರಾ ಜೋಡಿಗಳಾಗುತ್ತಿದ್ದು, ಅವರ ಮದುವೆ ನಿಶ್ಚಿತಾರ್ಥ ಸಮಾರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.

ರಶ್ಮಿಕಾ ಹುಟ್ಟೂರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸೆರೆನಿಟಿ ಹಾಲ್ ನಲ್ಲಿ ಸೋಮವಾರ ಸಂಜೆ 6 ಗಂಟೆಯಿಂದ ನಿಶ್ಚಿತಾರ್ಥ ಕಾರ್ಯಕ್ರಮ ಆರಂಭವಾಗಲಿದೆ. ಕೊಡವ ಹಾಗೂ ಬಂಟ್ಸ್ ಶಾಸ್ತ್ರದ ಪ್ರಕಾರ ಸಮಾರಂಭ ನಡೆಯಲಿದೆ.

ರಕ್ಷಿತ್ ಮತ್ತು ರಶ್ಮಿಕಾ ವಜ್ರದ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ. ಶ್ರದ್ಧಾ ಪೊನ್ನಪ್ಪ ವಿನ್ಯಾಸ ಮಾಡಿರುವ ಉಡುಗೆಯಲ್ಲಿ ರಶ್ಮಿಕಾ ಕಂಗೊಳಿಸಿದರೆ, ರಕ್ಷಿತ್ ತಾವೇ ಡಿಸೈನ್ ಮಾಡಿರುವ ವಿಶೇಷ ವಿನ್ಯಾಸದ ಸೂಟ್ ಧರಿಸಲಿದ್ದಾರೆ. ಈಗಾಗಲೇ ಕಿರಿಕ್ ಪಾರ್ಟಿ ಚಿತ್ರತಂಡ ವಿರಾಜಪೇಟೆಗೆ ಆಗಮಿಸಿದೆ. ಸೋಮವಾರ ಸಂಬಂಧಿಕರು ಆಗಮಿಸಲಿದ್ದಾರೆ.

ಈ ನಿಶ್ಚಿತಾರ್ಥ ಸಮಾರಂಭ ಎರಡೂ ಕುಟುಂಬಗಳ ಪರಿಚಯಕ್ಕಾಗಿಯೇ ಮಾಡಿರುವ ಪಾರ್ಟಿ ಆಗಿದ್ದು ಸಿನಿಮಾ ಗಣ್ಯರನ್ನು ಆಹ್ವಾನಿಸಿಲ್ಲ ಎಂದು ರಕ್ಷಿತ್ ಕುಟುಂಬಸ್ಥರು ತಿಳಿಸಿದ್ದಾರೆ. ರಕ್ಷಿತ್ ಅವರ ಅವರ ಊರಿನಿಂದ ಕುಟುಂಬಸ್ಥರು, ಸ್ನೇಹಿತರು ಭಾನುವಾರ ರಾತ್ರಿ ವಿರಾಜಪೇಟೆಗೆ ಆಗಮಿಸಿದ್ದು, ಅವರಿಗೆ ರೆಸಾರ್ಟ್ ಮತ್ತು ಹೋಮ್ ಸ್ಟೇ ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸುಮಾರು 1500 ಮಂದಿ ಅತಿಥಿಗಳನ್ನು ಆಹ್ವಾನಿಸಲಾಗಿದ್ದು ಎರಡೂ ಕುಟುಂಬಗಳ ಸಂಬಂಧಿಕರಿಗೆ ವಿಶೇಷ ಔತಣಕೂಟವನ್ನು ಏರ್ಪಡಿಸಲಾಗಿದೆ. ಕರಾವಳಿ ಖಾದ್ಯಗಳ ಜೊತೆಗೆ ಕೂರ್ಗ್‍ನ ಸ್ಪೆಷಲ್ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಎರಡೂ ಕಡೆಯ ಜನರು ಅವರಿಗೆ ಇಷ್ಟ ಬಂದ ಖಾದ್ಯಗಳನ್ನು ಸವಿಯಲು ಇಲ್ಲಿ ಅವಕಾಶವಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಮದ್ವೆಯಾದ ಬಳಿಕ ಆ್ಯಕ್ಟ್ ಮಾಡ್ತೀರಾ? ಲವ್ ಆಗಿದ್ದು ಹೇಗೆ? ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ರು ರಶ್ಮಿಕಾ

 

https://www.youtube.com/watch?v=ESowcly8f7s

https://www.youtube.com/watch?v=cfYkNs_ZyD0

https://www.youtube.com/watch?v=uh5_9oujdto

https://www.youtube.com/watch?v=rmB-D2bhHUM

ರಷ್ಮಿಕಾ ಮಂದಣ್ಣ ಸಂದರ್ಶನದ ಫುಲ್ ವಿಡಿಯೋ ನೋಡಿ.

ಲವ್ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ…

https://www.youtube.com/watch?v=jzSaQ0QLDCE

Click to comment

Leave a Reply

Your email address will not be published. Required fields are marked *