ಬೆಂಗಳೂರು: ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರನ್ನು ಇಂದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯಲ್ಲಿ ಕೇಳಿದ ಪ್ರಶ್ನೆಗಳು ಇಂತಿವೆ..
* ಅಲೋಕ್: ಡೀಲ್ ಮಾಡಿದ್ದೀಯಾ.. ಖಾತೆಗೆ ದುಡ್ಡು ಬಂದಿದೆ. ಟಾಪ್ ಟು ಬಾಟಂ ಏನಾಗಿದೆ ಅಂತ ಒಂದೇ ಸಲ ಒದರಬೇಕು. ನಿನ್ನ ಎಲ್ಲಾ ಆಟಗಳು ನಮಗೆ ಗೊತ್ತಿದೆ
( ರೆಡ್ಡಿ ವಕೀಲ ಚಂದ್ರಶೇಖರ್ ಮಾತನಾಡೋಕೆ ಮುಂದಾಗ್ತಾರೆ.. ಸುಮ್ನಿರಿ. ಏನಿದ್ರೂ ವಿಚಾರಣೆ ಬಳಿಕ ಮಾತನಾಡಿ. ನಾವೇನು ರೆಡ್ಡಿ ಮೇಲೆ ಹಲ್ಲೆ ಮಾಡ್ತಿಲ್ಲ. ತನಿಖೆಗೆ ಅಡ್ಡಿ ಪಡಿಸ್ಬೇಡಿ ಅಂತ ವಾರ್ನಿಂಗ್)
* ಸಿಸಿಬಿ: ಅಂಬಿಡೆಂಟ್‍ನ ಫರೀದ್ ಮತ್ತು ನಿಮ್ಮ ನಡುವೆ ಎಷ್ಟು ವರ್ಷದ ಸಂಬಂಧ..?
* ರೆಡ್ಡಿ: ಫರೀದ್‍ನ ಆಲಿಖಾನ್ ಪರಿಚಯ ಮಾಡಿದ್ದು. ಅಲಿಖಾನ್ ಕುಟುಂಬ ಅಂಬಿಡೆಂಟ್‍ನಲ್ಲಿ ಹೂಡಿಕೆ ಮಾಡಿರೋ ವಿಚಾರ ಗೊತ್ತಿತ್ತು. ಆ ಮೂಲಕ ನನಗೆ ಪರಿಚಯ
Advertisement
Advertisement
* ಸಿಸಿಬಿ: ಫರೀದ್ ವ್ಯವಹಾರದಲ್ಲಿ ನಿಮ್ಮ ಪಾಲುದಾರಿಕೆ ಇದ್ಯಾ..?
* ರೆಡ್ಡಿ: ಯಾವುದೇ ಪಾಲುದಾರಿಕೆ ಇಲ್ಲ. ಪಾಲುದಾರಿಕೆ ಬಗ್ಗೆ ಫರೀದ್ ಜೊತೆ ಮಾತನಾಡಿಲ್ಲ..
* ಸಿಸಿಬಿ: ನಿಮ್ಮ ಆಪ್ತ ಆಲಿಖಾನ್ ಹೊಂದಿದ್ದಾರೆ ಅನ್ನೋ ಮಾಹಿತಿ ಇದೆ
* ರೆಡ್ಡಿ: ಅಲಿಖಾನ್ ಬಳಿ ಎಲ್ಲವನ್ನೂ ಕೇಳಿದ್ದೀನಿ. ಆತನ ಕುಟುಂಬ 70 ಲಕ್ಷ ಹಣ ಹೂಡಿಕೆ ಮಾಡಿದ್ರು. ಆ ಹಣಕ್ಕೂ ಫರೀದ್ ಮೋಸ ಮಾಡಿದ್ದ. ಆ ವಿಚಾರ ಅಷ್ಟೇ ನನಗೆ ಗೊತ್ತು. ಆತನೂ ಪಾಲುದಾರಿಕೆಯನ್ನು ಹೊಂದಿಲ್ಲ ..
Advertisement
* ಸಿಸಿಬಿ: ಫರೀದ್ ಬಚಾವ್ ಮಾಡಲು ನೀವು ಡೀಲ್ ತೆಗೆದುಕೊಂಡಿದ್ದೀರಿ..?
* ರೆಡ್ಡಿ: ನನ್ನ ಕೇಸ್‍ಯಿಂದ್ಲೇ ಬಚಾವ್ ಆಗೋದಕ್ಕೆ ಆಗಿಲ್ಲ. ಫರೀದ್‍ನ ಹೇಗೆ ಬಚಾವ್ ಮಾಡ್ಲಿ. ತನಿಖಾ ಸಂಸ್ಥೆಗಳು ನಾವು ಹೇಳಿದಂತೆ ಕೇಳ್ತಾವಾ..?
* ಸಿಸಿಬಿ: ಇ.ಡಿ. ಅಧಿಕಾರಿಗಳಿಗೆ ನಿಮ್ಮಿಂದ ಹಣದ ಆಮಿಷ ಹೋಗಿದೆ.. ಅದಕ್ಕೆ ಸೂಕ್ತ ದಾಖಲೆಗಳು ಇವೆ..
* ರೆಡ್ಡಿ: ಇಡಿ ಆಫೀಸರ್ಸ್ ಏನೂ ಅಂತ ನಿಮಗೂ ಗೊತ್ತು. ನಾವು ಅವರ ಬಳಿ ಡೀಲ್ ಮಾಡೋಕೆ ಸಾಧ್ಯನಾ..? ನಿಮ್ಮ ಸಾಕ್ಷ್ಯ ತೋರಿಸಿದ್ರೆ ಉತ್ತರ ಕೊಡ್ತೀನಿ.
* ಸಿಸಿಬಿ: ಇಲ್ಲ ಅನ್ನೋದೇ ಆದ್ರೆ, ಫರೀದ್ ಡೀಲ್‍ನಲ್ಲಿ ನಿಮ್ಮೆಸ್ರು ಹೇಳಿದ್ಯಾಕೆ..?
Advertisement
* ರೆಡ್ಡಿ: ಬಚಾವ್ ಆಗೋಕೆ ಫರೀದ್ ಹೇಳಿರ್ಬೋದು. ಅಥವಾ ಆತನ ಮೇಲೆ ಒತ್ತಡ ಇದೆ ಅನ್ನೋದು ಗೊತ್ತಿಲ್ಲ.
* ಸಿಸಿಬಿ: ಫರೀದ್ ನಿಮಗೆ 57 ಕೆಜಿ ಚಿನ್ನದ ಗಟ್ಟಿ ಕೊಟ್ಟಿದ್ದಾರೆ. ಇದಕ್ಕೂ ದಾಖಲೆ ಇದೆ
* ರೆಡ್ಡಿ: ಫರೀದ್ ಚಿನ್ನ ಕೊಟ್ಟಿದ್ದೀನಿ ಅಂತ ಅಷ್ಟೇ ಹೇಳಿದ್ದಾನೆ. ಅದನ್ನು ನಾನು ರಿಸೀವ್ ಮಾಡಿಕೊಂಡಿದ್ದೇನಾ..? ಯಾವುದಾದರು ಸಾಕ್ಷ್ಯ ಇದ್ರೆ ಉತ್ತರ ಕೊಡ್ತೀನಿ. ಸುಖಾಸುಮ್ಮನೆ ನೀವು ಹೇಳ್ತಾ ಇದ್ದೀರಿ
* ಸಿಸಿಬಿ: ನೀವು ಇಷ್ಟು ದಿನ ಎಸ್ಕೇಪ್ ಆಗಿದ್ಯಾಕೆ..?
* ರೆಡ್ಡಿ: ನಾನು ಎಲ್ಲಿಯು ಓಡಿ ಹೋಗಿಲ್ಲ. ಹೈದರಾಬಾದ್‍ಗೂ ಹೋಗಿಲ್ಲ. ವಕೀಲರ ಜೊತೆ ಮಾತುಕತೆ ನಡೆಸುತ್ತಿದೆ.
* ಸಿಸಿಬಿ: ನಾವು ಮನೆ ರೈಡ್ ಮಾಡಿದಾಗ ಎಲ್ಲಿ ಇದ್ರಿ..
* ರೆಡ್ಡಿ: ಬೆಂಗಳೂರಲ್ಲೇ.. ಬೇರೆ ಮನೇಲಿ ಇದ್ದೆ. ನನಗೆ ವಿಚಾರಣಾ ನೋಟಿಸ್ ಕೊಡೋ ಮೊದಲೇ ರೇಡ್ ಆಗಿದ್ದು ಯಾಕೆ..?
ಹೀಗೆ.. ವಿಚಾರಣೆ ಮುಂದುವರಿದಿದೆ.
ವಿಚಾರಣೆಯ ಮಧ್ಯೆಯೇ ತನಿಖಾಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಪರಿಣಾಮ ಸಿಸಿಬಿ ಮುಖ್ಯಸ್ಥ ಅಲೋಕ್ ಕುಮಾರ್ ಕಚೇರಿಗೆ ಆಗಮಿಸಿ ರೆಡ್ಡಿಯನ್ನು ವಶಕ್ಕೆ ಪಡೆದು ಮತ್ತೆ ವಿಚಾರಣೆ ಮುಂದುವರಿಸಿದ್ದಾರೆ. ರೆಡ್ಡಿಗೆ ಐವರು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಲೋಕ್ ಕುಮಾರ್, ಡಿಸಿಪಿ ಗಿರೀಶ್, ಎಸ್ ಪಿಗಳಾದ ವೆಂಕಟೇಶ್ ಪೆಸನ್ನು ಸೇರಿದಂತೆ ಇತರ ಪೊಲೀಸರ ತಂಡ ಪ್ರಶ್ನೆಗಳನ್ನು ಕೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews