ಬೆಂಗಳೂರು: ದೋಸ್ತಿ ಸರ್ಕಾರದ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾದ್ರೆ ಬಿಜೆಪಿ ಅಧಿಕಾರ ಹಿಡಿಯುತ್ತಾ ಎಂಬ ಪ್ರಶ್ನೆಗಳು ರಾಜಕೀಯದಲ್ಲಿ ಹುಟ್ಟಿಕೊಂಡಿವೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ನ ಎಲ್ಲ ನಾಯಕರು ಆಪರೇಷನ್ ಕಮಲದ ಸೆಳೆತಕ್ಕೆ ನಮ್ಮ ಶಾಸಕರು ಒಳಗಾಗಲ್ಲ ಅಂತಾ ಹೇಳುತ್ತಿದ್ದಾರೆ. ಮತ್ತೊಂದು ಕಡೆ ಸರ್ಕಾರ ಬೀಳಿಸಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ.
ಒಂದು ವೇಳೆ ಕಾಂಗ್ರೆಸ್‍ನ ಅತೃಪ್ತ ಶಾಸಕರು ಮತ್ತು ಪಕ್ಷೇತರರು ಬಿಜೆಪಿ ಸೇರಿದರೆ ದೋಸ್ತಿ ಸರ್ಕಾರದ ಮುಂದೆ ಎರಡು ಆಯ್ಕೆಗಳಿವೆ. ಸಾಂವಿಧಾನಿಕ ಅಥವಾ ರಾಜಕೀಯ ಮಾರ್ಗಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಬಳಸಿಕೊಳ್ಳಬಹುದು.
Advertisement
Advertisement
1.ಸಾಂವಿಧಾನಿಕ ಮಾರ್ಗ: ಶಾಸಕರು ರಾಜೀನಾಮೆ ಸಲ್ಲಿಸಲು ಸ್ಪೀಕರ್ ಸಿಗದಂತೆ ನೋಡಿಕೊಳ್ಳುವುದು. ಬಿಜೆಪಿ ಆಪರೇಷನ್ ಕಮಲದ ವಿರುದ್ಧ ಗವರ್ನರ್ ಗೆ ದೂರು ಕೊಡುವ ಅವಕಾಶಗಳು ಸಿಎಂ ಮುಂದಿವೆ. ರಾಜ್ಯಪಾಲರಿಗೆ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸ್ತಿದೆ ಎಂದು ಮನವರಿಕೆ ಮಾಡಿಕೊಡುವುದು. ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ಯತ್ನದ ಬಗ್ಗೆ ರಾಷ್ಟ್ರಪತಿಗೆ ದೂರು ನೀಡಲುಬಹುದು. ಸ್ಪೀಕರ್ ಶಾಸಕರ ರಾಜೀನಾಮೆ ಅಂಗೀಕರಿಸದಂತೆ ಒತ್ತಡ ಹೇರಬಹುದು.
Advertisement
2.ರಾಜಕೀಯ ಮಾರ್ಗ: ತಮ್ಮ ತಮ್ಮ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿರುವುದು. ಎರಡೂ ಶಾಸಕರು ಪಕ್ಷ ತೊರೆಯದಂತೆ ಕಣ್ಗಾವಲು ಇಡೋದು. ಅಗತ್ಯಬಿದ್ದರೆ ಶಾಸಕರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸುವುದು (ರೆಸಾರ್ಟ್ ಪೊಲಿಟಿಕ್ಸ್ ಮೊರೆ ಹೋಗುವುದು). ಇನ್ನು ಸಂಪರ್ಕಕ್ಕೆ ಸಿಗದ 5-6 ಶಾಸಕರನ್ನು ಹುಡುಕಿ ಮನವೊಲಿಸಲು ಪ್ರಯತ್ನಿಸುವುದು. ಸ್ಥಾನಮಾನದ ಭರವಸೆ ಕೊಟ್ಟು ಆಪರೇಷನ್ ಕಮಲದ ಬಗ್ಗೆ ನಿರಾಸಕ್ತಿ ಮೂಡಿಸಲು ನಾಯಕರು ಪ್ರಯತ್ನಿಸಬಹುದು. ಇವು ಯಾವುದೇ ಸಫಲವಾಗದೇ ಇದ್ದಲ್ಲಿ ಬಿಜೆಪಿ ಶಾಸಕರನ್ನೇ ಸೆಳೆದು ಕೌಂಟರ್ ಆಪರೇಷನ್ ಮಾಡುವುದು.
Advertisement
ಸೋಮವಾರದವರೆಗೆ ಬಿಜೆಪಿ ಆಪರೇಷನ್‍ಗೆ ಡೋಂಟ್‍ಕೇರ್ ಅಂದ್ಕೊಂಡು ಓಡಾಡ್ತಿದ್ದ ಸಿಎಂ ರಾತ್ರಿ ಫುಲ್ ಟೆನ್ಷನ್ ಆಗಿದ್ದರಂತೆ. ರಾತ್ರೋರಾತ್ರಿ ತಂದೆ ಮಾಜಿ ಪ್ರಧಾನಿ ದೇವೇಗೌಡ್ರನ್ನು ಭೇಟಿ ಮಾಡಿ ಸತತ 2 ಗಂಟೆಗಳ ಕಾಲ ಚರ್ಚಿಸಿದರು. ಅಲ್ಲಿ ಏನ್ ಚರ್ಚೆ ನಡೀತೋ ಏನೋ..? ಹೊರಗೆ ಬಂದವರೇ ಮಾಧ್ಯಮಗಳ ಮೇಲೆ ಕಿಡಿಕಾರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv