ಬೆಂಡೆಕಾಯಿ ಹಲವು ಜನರಿಗೆ ಇಷ್ಟ. ಮತ್ತೆ ಕೆಲವರಿಗೆ ವಾಸನೆ ಹಾಗೂ ಅಂಟು ಇರುವ ಕಾರಣ ಬೆಂಡೆಕಾಯಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಬೆಂಡೆಕಾಯಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ವಿಷಯ ಹಲವರಿಗೆ ಗೊತ್ತಿಲ್ಲ. ಹೊಟ್ಟೆಯ ಸಮಸ್ಯೆ ಇದ್ದವರಿಗೆ ಬೆಂಡೆಕಾಯಿ ಸೇವಿಸಿದರೆ ತುಂಬಾ ಉಪಯೋಗ ಆಗಲಿದೆ.
ಈಗಿನ ಕಾಲದಲ್ಲಿ ಜನರು ತಮ್ಮ ತೂಕ ಹೆಚ್ಚಾಗಿದೆ ಎಂದು ಚಿಂತಿಸುತ್ತಿರುತ್ತಾರೆ. ಆದರೆ ಬೆಂಡೆಕಾಯಿಯ ನೀರನ್ನು ಕುಡಿದರೆ ಅದು ನಮ್ಮ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ಬೆಂಡೆಕಾಯಿ ನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ತುಂಬಾ ಉಪಯೋಗವಾಗುತ್ತದೆ. ಬೆಂಡೆಕಾಯಿ ಸೇವಿಸಿದರೆ, ದೇಹದ ಮೆಟಾಬಾಲಿಸಂ ಸಿಸ್ಟಂ ಸರಿ ಇರಿಸುತ್ತದೆ. ಅಲ್ಲದೆ ಜೀರ್ಣಕ್ರಿಯೆ ಸರಿ ಮಾಡಿ, ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Advertisement
Advertisement
ಬೆಂಡೆಕಾಯಿಯಲ್ಲಿ ಕಾರ್ಬೋಹೈಡ್ರೆಟ್, ಪ್ರೋಟಿನ್, ವಿಟಮಿನ್ ಕೆ, ಎ ಹಾಗೂ ಸಿ ಅಂಶ ಹೊಂದಿದೆ. ಇದನ್ನು ಹೊರತುಪಡಿಸಿ ಪೋಟ್ಯಾಶಿಯಂ, ಕ್ಯಾಲಿಶಿಯಂ, ಮ್ಯಾಗ್ನೀಶಿಯಂ ಅಂಶ ಕೂಡ ಇರುತ್ತದೆ. ಬೆಂಡೆಕಾಯಿ ಸೇವಿಸುವುದರಿಂದ ಅದರಲ್ಲಿ ಇರುವ ಫೈಬರ್ ನಿಂದ ಹೊಟ್ಟೆಯಲ್ಲಿನ ಮಲಬದ್ಧತೆ, ಡೈಯೇರಿಯಾ ಹಾಗೂ ಹೊಟ್ಟೆಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
Advertisement
Advertisement
ಇದನ್ನು ಹೊರತುಪಡಿಸಿ ಬೆಂಡೆಕಾಯಿಯಲ್ಲಿ ಇರುವ ವಿಟಮಿನ್ – ಎ ಅಂಶ ಕಣ್ಣುಗಳಿಗೆ ತುಂಬಾ ಉಪಯೋಗವಾಗುತ್ತದೆ. ಬೆಂಡೆಕಾಯಿಯಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ ಹಾಗೂ ಬಿಟಾ ಕ್ಯಾರೋಟಿನ್‍ನಿಂದ ತ್ವಚೆ ತಾಜಾವಾಗಿ ಇಡಲು ಸಹಾಯ ಮಾಡುತ್ತದೆ.