ಹೆಂಗಳೆಯರ ಫ್ಯಾಷನ್‌ಗೆ ಕೊನೆಯೇ ಇಲ್ಲ. ಹೊಸತು ಹಳೆಯದ್ದಾಗುತ್ತಿದ್ದಂತೆ ಈಗ ಹಳೆಯ ಕಾಲದ ಆಭರಣಗಳೇ ಟ್ರೆಂಡ್ ಆಗಿವೆ. ಯುವತಿಯರೂ ಸಹ ಅಜ್ಜ – ಅಜ್ಜಿ ಕಾಲದ ಒಡವೆಗಳಿಗೆ ಚಿತ್ತಾಕರ್ಷಕ ರೂಪಕೊಟ್ಟು ಧರಿಸುತ್ತಿದ್ದಾರೆ. ಬೆಳ್ಳಿ ಬಂಗಾರ ಎಂದರೆ ಕಣ್ಣರಳಿಸುವ ಹೆಣ್ಣುಮಕ್ಕಳು ಪ್ರತೀ ಒಡವೆಯನ್ನೂ ಟ್ರೆಂಡಿಯಾಗಿ ಹೇಗೆ ಧರಿಸಬಹುದು ಎಂದೇ ಲೆಕ್ಕಾಚಾರ ಹಾಕುತ್ತಿದ್ದಾರೆ.
Advertisement
ಇತ್ತೀಚಿನ ದಿನಗಳಲ್ಲಿ ಬೆಳ್ಳಿ-ಬಂಗಾರ ಎಲ್ಲರ ಮನಗೆಲ್ಲುತ್ತಿದೆ. ಬೆಳ್ಳಿಯ ಆಭರಣಗಳು ಧರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲಾ ರೀತಿಯ ಧಿರಿಸಿಗೆ ಒಪ್ಪುವಂತಹ ಚೆಂದದ ಡಿಸೈನ್ ಬೆಳ್ಳಿ ಪ್ರಿಯರಿಗೆ ಅಚ್ಚುಮೆಚ್ಚು. ಅನಾದಿ ಕಾಲದಿಂದಲೂ ಬೆಳ್ಳಿಯ ಬಳಕೆ ಚಾಲ್ತಿಯಲ್ಲಿದೆ. ಇಂದಿನ ದಿನಮಾನಗಳಲ್ಲೂ ಬೆಳ್ಳಿ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಕೆಲವರು ಇದೇ ಬೆಳ್ಳಿ ಆಭರನಣಕ್ಕೆ ಚಿನ್ನದ ಹೊಳಪು ನೀಡಿ ಧರಿಸುತ್ತಾರೆ.
Advertisement
ಬೆಳ್ಳಿ ಆಭರಣಗಳಲ್ಲಿ ಕಿವಿಯೋಲೆಗಳು, ಉಂಗುರಗಳು, ಮೂಗಿನ ನತ್ತುಗಳು, ಬೆಳ್ಳಿಯ ನೆಕ್ಲೆಸ್‌ಗಳು, ಬಳೆ, ಖಡಗಗಳು ಸೇರಿ ಇನ್ನೂ ಅನೇಕವು ಫ್ಯಾಷನ್ ಪ್ರಿಯರ ಲಗ್ಗೆ ಇಟ್ಟಿದೆ. ಅಲ್ಲದೆ ಬೆಳ್ಳಿ ಆರೋಗ್ಯಕ್ಕೂ ಒಳ್ಳೆಯದು. ಹಾಗಾದ್ರೆ ಯಾವೆಲ್ಲ ರೀತಿಯಲ್ಲಿ ಈ ಬೆಳ್ಳಿ ಆಭರಣಗಳನ್ನು ಟ್ರೆಂಡಿಯಾಗಿ ಧರಿಸಬಹುದು ಎನ್ನುವ ಬಗ್ಗೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್.
Advertisement
Advertisement
ಆಫೀಸ್‌ಗಳಲ್ಲೂ ಟ್ರೆಂಡಿ ಲುಕ್:
ಬೆಳ್ಳಿ ಆಭರಣಗಳು ಒಂದೇ ರೀತಿಯದಲ್ಲ. ಹೀಗಾಗಿ ನೀವು ಅದನ್ನು ಆಫೀಸ್‌ಗೂ ಧರಿಸಿ ಹೋಗಬಹುದು. ಇದನ್ನು ನಿಮ್ಮ ಡೆನಿಮ್ ಶರ್ಟ್ ಅಥವಾ ಫಾರ್ಮಲ್ ಮೇಲೆ ಧರಿಸಬಹುದು. ಅಥವಾ ಕಾಟನ್ ಸೀರೆಗಳ ಮೇಲೂ ಧರಿಸಬಹುದಾಗಿದೆ. ಬೆಳ್ಳಿ ಖಡಗ, ಬೆಳ್ಳಿ ಉಂಗುರ, ನೆಕ್ಲೆಸ್ ಸೇರಿದಂತೆ ಬೆಳ್ಳಿ ನತ್ತುಗಳನ್ನು ಧರಿಸಿದರೆ ಸಖತ್ ಸ್ಟೈಲಿಷ್ ಲುಕ್ ನೀಡುತ್ತದೆ.
ದೇಸಿ ಸ್ಟೈಲ್:
ಬೆಳ್ಳಿಯ ಆಭರಣಗಳು ಕುರ್ತಾ ಮತ್ತು ಸಲ್ವಾರ್ ಕಮೀಜ್‌ಗಳೊಂದಿಗೆ ಉತ್ತಮವಾಗಿ ಕಾಣುತ್ತವೆ. ಜೊತೆಗೆ ಪಲಾಜೋಸ್ ಮತ್ತು ಇತರ ಟ್ರೆಡೀಷನಲ್ ಉಡುಪುಗಳೊಂದಿಗೆ ಬೆಳ್ಳಿ ಚೆನ್ನಾಗಿ ಒಪ್ಪುತ್ತದೆ. ಬೆಳ್ಳಿ ಬಳೆಗಳು, ಕಿವಿಯೋಲೆಗಳು, ಚೋಕರ್ ಅಥವಾ ನೆಕ್ಲೆಸ್ ರೂಪದಲ್ಲಿ ಧರಿಸಿ ಸ್ಟೈಲಿಷ್ ಆಗಿ ಕಾಣಬಹುದಾಗಿದೆ.
ಬೊಹಿಮಿಯನ್ ಶೈಲಿ:
ಬೋಹೀಮಿಯನ್ ಬೆಳ್ಳಿ ಆಭರಣಗಳು ಟ್ರೆಂಡಿ ಮತ್ತು ಆರಾಮದಾಯಕ ಶೈಲಿಯಾಗಿದೆ. ದೊಡ್ಡ ಮೂಗುತಿ ಉಡುಪಿನೊಂದಿಗೆ ಧರಿಸಬಹುದು. ಅಲ್ಲದೇ ಬೆಳ್ಳಿ ಬಳೆ ಮತ್ತು ನೆಕ್ಲೆಸ್‌ಗಳನ್ನು ಕೂಡ ಶರ್ಟ್‌ಗಳ ಮೇಲೆ ಧರಿಸಬಹುದಾಗಿದೆ.
ಸ್ಟ್ರೀಟ್ ಸ್ಟೈಲ್:
ಇಂಡೋ-ವೆಸ್ಟರ್ನ್ ಮತ್ತು ಬೋಹೀಮಿಯನ್ ಶೈಲಿಗಳು ಇಂದು ಹೆಚ್ಚು ಟ್ರೆಂಡಿಂಗ್ ಶೈಲಿಗಳಾಗಿವೆ. ವಿಶೇಷ ಸಂದರ್ಭಗಳಲ್ಲಿ ಅಥವಾ ಶಾಪಿಂಗ್‌ಗೆ ಹೋಗುವಾಗ ನೀವು ಆಭರಣಗಳನ್ನು ಧರಿಸಬಹುದು. ಇದು ಹೀಲ್ಸ್, ಜೆಗ್ಗಿಂಗ್‌ಗಳು ಮತ್ತು ಸಡಿಲವಾದ ಟಾಪ್‌ಗಳೊಂದಿಗೆ ಸಖತ್ ಫ್ಯಾಷನೇಬಲ್ ಆಗಿ ಕಾಣುತ್ತದೆ.