ನವದೆಹಲಿ: ದೇಶದ ಅತಿ ದೊಡ್ಡ ರಾಷ್ಟ್ರೀಯ ಬ್ಯಾಂಕ್ ತನ್ನ ಎಲ್ಲಾ ಸೇವಾ ಶುಲ್ಕಗಳನ್ನು ಬದಲಾವಣೆ ಮಾಡಿದೆ. ಇಂದಿನಿಂದ ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಸೇವಾಶುಲ್ಕ ಸೇರಿದಂತೆ ತೆರಿಗೆಯೂ ಸಹ ಹೆಚ್ಚುವರಿಯಾಗಲಿದೆ.
ಎಸ್‍ಬಿಐ ಗ್ರಾಹಕರಿಗೆ ಒದಗಿಸುವ ಎಲ್ಲಾ ಸೇವೆಗಳು ಅಂದರೆ ಎಟಿಎಂ ಬಳಕೆ, ಚೆಕ್ ಬುಕ್, ಹಣ ವಿನಿಮಯ ಮುಂತಾದ ಸೇವೆಗಳಿಗೆ ಹೊಸ ಶುಲ್ಕವನ್ನು ನಿಗದಿಪಡಿಸಿದ್ದು, ಜೂನ್ 1ರಿಂದ ಅಂದ್ರೆ ಇಂದಿನಿಂದ ಈ ಹೊಸ ಸೇವಾ ಶುಲ್ಕಗಳು ಗ್ರಾಹಕರಿಗೆ ಅನ್ವಯಿಸಲಿವೆ.
Advertisement
Advertisement
ಉಳಿತಾಯ ಖಾತೆದಾರರಿಗೆ ತಗಲುವ ಶುಲ್ಕಗಳು:
1. 10 ಹಾಳೆಗಳಿರುವ ಚೆಕ್ ಬುಕ್‍ಗೆ ಖಾತೆದಾರ 30 ರೂ. ಶುಲ್ಕ ಪ್ಲಸ್ ಸರ್ವಿಸ್ ಟ್ಯಾಕ್ಸ್ ನೀಡಬೇಕು.
2. 25 ಚೆಕ್‍ಗಳಿರುವ ಚೆಕ್ ಬುಕ್‍ಗೆ 75 ರೂ. ಪ್ಲಸ್ ಸರ್ವಿಸ್ ಟ್ಯಾಕ್ಸ್
3. 50 ಚೆಕ್‍ಗಳಿರುವ ಚೆಕ್‍ಬುಕ್‍ಗೆ 150 ರೂ. ಪ್ಲಸ್ ಸರ್ವಿಸ್ ಟ್ಯಾಕ್ಸ್
Advertisement
Advertisement
ಎಟಿಎಂಗಳ ಶುಲ್ಕ ಪರಿಷ್ಕರಣೆ:
1. ಎಟಿಎಂಗಳಲ್ಲಿ 4 ಬಾರಿ ಹಣ ಹಿಂಪಡೆಯುವುದಕ್ಕೆ ಯಾವುದೇ ಶುಲ್ಕವಿಲ್ಲ. ಅಂದ್ರೆ ಎಸ್‍ಬಿಐ ಸೇರಿದಂತೆ ಬೇರೆ ಬ್ಯಾಂಕ್‍ಗಳಲ್ಲಿ ಹಣವನ್ನು ಗರಿಷ್ಟ 4 ಬಾರಿ ಉಚಿತವಾಗಿ ಡ್ರಾ ಮಾಡಬಹುದು.
2. ಎಸ್‍ಬಿಐ ಬ್ರಾಂಚ್‍ಗಳ ಎಟಿಎಂನಲ್ಲಿ ಹಣವನ್ನು 4ಕ್ಕಿಂತ ಹೆಚ್ಚು ಬಾರಿ ಡ್ರಾ ಮಾಡಿದ್ದಲ್ಲಿ ಪ್ರತಿ ವ್ಯವಹಾರಕ್ಕೆ 10 ರೂ. ಸೇರಿದಂತೆ ಸರ್ವಿಸ್ ಟ್ಯಾಕ್ಸ್ ಪಾವತಿಸಬೇಕು.
3. ಗರಿಷ್ಟ ನಾಲ್ಕರ ಮಿತಿಯ ಬಳಿಕ ಇತರ ಬ್ಯಾಂಕ್‍ಗಳಲ್ಲಿ ಹಣವನ್ನು ಡ್ರಾ ಮಾಡಿದ್ದಲ್ಲಿ ಪ್ರತಿ ವ್ಯವಹಾರಕ್ಕೆ 20 ರೂ. ಪ್ಲಸ್ ಸರ್ವಿಸ್ ಟ್ಯಾಕ್ಸ್ ಪೇ ಮಾಡ್ಬೇಕು.
ಹಣ ವರ್ಗಾವಣೆ/ Online transfer
INB, MB, UPI, & USSD ಮೂಲಕ ತ್ವರಿತ ಹಣ ವರ್ಗಾವಣೆ ಮಾಡುವವರೂ ಶುಲ್ಕ ಪಾವತಿಸಬೇಕು.
1. 1 ಲಕ್ಷದವರೆಗೆ ವರ್ಗಾವಣೆಗೆ ರೂ. 5 ರೂಪಾಯಿ ಶುಲ್ಕ ಹಾಗೂ ಸೇವಾ ತೆರಿಗೆ
2. 1 ಲಕ್ಷದಿಂದ 2 ಲಕ್ಷ ರೂ. ವರ್ಗಾವಣೆಗೆ ರೂ. 15 ಮತ್ತು ಸೇವಾ ತೆರಿಗೆ
3. 2 ಲಕ್ಷದಿಂದ 5 ಲಕ್ಷದವರೆಗಿನ ವರ್ಗಾವಣೆಗೆ ರೂ. 25 ಶುಲ್ಕ + ಸೇವಾ ತೆರಿಗೆ
ನೋಟು ಬದಲಾವಣೆ:
ನಿಮ್ಮಲ್ಲಿಯ ಹಳೆಯ ಅಥವಾ ಹರಿದ ನೋಟುಗಳ ಬದಲಾವಣೆಗೆ ಸಹ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
1. 20 ನೋಟುಗಳ ಮತ್ತು 5 ಸಾವಿರ ರೂ.ವರೆಗಿನ ನೋಟುಗಳ ಬದಲಾವಣೆಗೆ ಯಾವುದೇ ಶುಲ್ಕ ಅನ್ವಯವಾಗವುವದಿಲ್ಲ.
2. 20ಕ್ಕಿಂತ ಅಥವಾ 5,000 ಕ್ಕಿಂತ ಹೆಚ್ಚಿನ ಬೆಲೆಯ ನೋಟುಗಳಿದ್ದರೆ ಒಂದು ನೋಟಿಗೆ 2 ರೂಪಾಯಿ ಅಥವಾ 1,000 ರೂಪಾಯಿಗೆ 5 ರೂ. (ಇವುಗಳಲ್ಲಿ ಯಾವುದು ಗರಿಷ್ಟವೋ ಅದು) ಶುಲ್ಕ ನೀಡಬೇಕು.
ಡೆಬಿಟ್ ಕಾರ್ಡ್:
ಬ್ಯಾಂಕ್‍ನಿಂದ ಕೇವಲ ರುಪೇ ಕಾರ್ಡ್‍ನ್ನು ಮಾತ್ರ ಉಚಿತವಾಗಿ ನೀಡಲಾಗುವುದು.
ಬ್ಯಾಂಕ್ ಬುಡ್ಡಿ (buddy) ಸೇವೆ:
ಇನ್ನು ಸ್ಟೇಟ್ ಬ್ಯಾಂಕ್‍ನ ಆ್ಯಪ್ ಬಳಕೆದಾರರಿಗೂ ಹೊಸ ಶುಲ್ಕ ಅನ್ವಯವಾಗಲಿದೆ. ವ್ಯಾಲೆಟ್‍ನಿಂದ ಎಟಿಎಂಗಳ ಮುಖಾಂತರವನ್ನು ಹಣವನ್ನು ಡ್ರಾ ಮಾಡಿದರೆ ಪ್ರತಿ ಬಾರಿ 25 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಗಮನಿಸಿ, ಎಸ್‍ಬಿಐ ಎಟಿಎಂನಿಂದ ಹಣ ಡ್ರಾ ಮಾಡಿದ್ರೆ 25 ರೂ. ಶುಲ್ಕ ಇಲ್ಲ