ದೇಶದಲ್ಲಿ ಅತಿ ದೊಡ್ಡ ಹಬ್ಬವೆಂದು ಕರೆಯಲಾಗುವ ನವರಾತ್ರಿ ಈಗಾಗಲೇ ಪ್ರಾರಂಭವಾಗಿದೆ. ಭಾರತೀಯರು ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ಹಬ್ಬದ ವಿಶೇಷವೆಂದರೆ ಉಪವಾಸ ಇರುವುದು ಇಂತಹ ಸಮಯದಲ್ಲಿ ಯಾವೆಲ್ಲಾ ಆಹಾರವನ್ನು ಸೇವಿಸುವುದು ಸೂಕ್ತ ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
Advertisement
ಶೇ.75ದಷ್ಟು ಹಸಿವೆಯಲ್ಲಿರಬೇಕು ಎಂಬುದು ಹಬ್ಬದ ಉಪವಾಸದ ನಿಯಮವಾಗಿದೆ. ಉಪವಾಸ ಕೈಗೊಳ್ಳುವಾಗ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಗೋಧಿ ಮತ್ತು ಅಕ್ಕಿ ಮೊದಲಾದ ಆಹಾರಗಳನ್ನು ಸೇವಿಸುವುದನ್ನು ದಸರಾ ಉಪವಾಸದಲ್ಲಿ ನಿಷೇಧಿಸಲಾಗಿದೆ. ಅಂತೆಯೇ ಹೊಟ್ಟೆ ತುಂಬಾ ತಿಂದು ಉಪವಾಸ ಮಾಡಬಾರದು, ಅದೇ ರೀತಿ ಹಸಿವೆಯ ನಿಶ್ಯಕ್ತಿಯಿಂದ ಕೂಡ ದೇವರನ್ನು ನೆನೆಯಬಾರದು.
Advertisement
Advertisement
ಕೊರೊನಾ ವೈರಸ್ ಎಲ್ಲೆಡೆ ಇರುವುದರಿಂದ ಪ್ರತಿವರ್ಷದಂತೆ ಈ ಬಾರಿಯ ಹಬ್ಬ ಆಚರಿಸಲು ಆಗದೆ ಇರಬಹುದು ಆದರೆ ಹಬ್ಬದ ಆಚರಣೆ ಅನುಸಾರವಾಗಿ ಉಪವಾಸ ಇದ್ದೆ ಇರುತ್ತದೆ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಕೆಳಗೆ ಸೂಚಿಸಲಾದ ಆಹಾರಗಳ ಸೇವನೆ ಮಾಡಬಹುದಾಗಿದೆ.
Advertisement
ಕುಂಬಳಕಾಯಿ: ಕುಂಬಳಕಾಯಿ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ನವರಾತ್ರಿ ಉಪವಾಸದಲ್ಲಿ ಕುಂಬಳಕಾಯಿ ಬಳಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಉತ್ತಮವಾದ ಪೋಷಕಾಂಶವುಳ್ಳ ಗುಣವನ್ನು ಹೊಂದಿದೆ. ಬೀಟಾ ಕ್ಯಾರೋಟಿನ್ ಅಂಶ ಅಧಿಕ ಪ್ರಮಾಣದಲ್ಲಿ ಇರುವುದರಿಂದ ವಿಟಮಿನ್ ಎ ಪರಿವರ್ತಿಸುವ ಗುಣವನ್ನು ಹೊಂದಿದೆ. ವಿಟಮಿನ್ ಎ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕು ತಗಲುವುದರಿಂದ ದೂರವಿರಲು ಸಹಾಯ ಮಾಡುತ್ತದೆ.
ಎಳನೀರು: ರಿಬೋಫ್ಲಾವಿನ್, ಥಯಾಮಿನ್, ಪಿರಿಡಾಕ್ಸಿನ್, ನಿಯಾಸಿನ್ ಮತ್ತು ಫೋಲೇಟ್‍ಗಳಂತಹ ಪೋಷಕಾಂಶ ಮತ್ತು ಜೀವಸತ್ವವಗಳನ್ನು ಅಧಿಕ ಪ್ರಮಾಣದಲ್ಲಿ ಎಳನೀರು ಹೊಂದಿದೆ. ಎಳನೀರಿನಲ್ಲಿ ಆ್ಯಂಟಿವೈರಲ್ ಮತ್ತು ಬ್ಯಾಕ್ಟೀರಿಯಾವನ್ನು ವಿರೋಧಿಸುವ ಗುಣವನ್ನು ಹೊಂದಿದೆ. ಜ್ವರ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಪ್ರತಿನಿತ್ಯ ಒಮ್ಮೆಯಾದರೂ ಒಂದು ಎಳನೀರು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳ ಬಹುದಾಗಿದೆ.
ಹುರಿದ ಕಮಲದ ಹೂವಿನ ಬೀಜ: ನವರಾತ್ರಿಯಲ್ಲಿ ವಿಶೇಷ ಆಹಾರಗಳ ಪಟ್ಟಿಯಲ್ಲಿ ಕಮಲದ ಹೂವಿನ ಬೀಜವು ಒಂದು. ಹಬ್ಬದ ದಿನದಂದು ಮಾಡುವ ಖೀರ್, ಸಬ್ಜಿ ಮಾಡಹುದು. ಹುರಿದ ಈ ಬೀಜಗಳನ್ನು ಸ್ವಲ್ಪ ಕಲ್ಲು ಉಪ್ಪು ಮತ್ತು ಮೆಣಸಿನಕಾಯಿಯೊಂದಿಗೆ ಸೇರಿಸಿದಾಗ ದೇಹದಲ್ಲಿ ಸೇರಿರುವ ವಿಷಕಾರಿ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕೆಂಪು ರಕ್ತಕಣಗಳು ಹೆಚ್ಚಿಸುತ್ತದೆ. ಬಿಳಿ ರಕ್ತಕಣಗಳು ಮತ್ತು ಪ್ಲೇಟ್‍ಲೆಟ್‍ಗಳನ್ನು ಸಮಾನ ಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ.
ಬಾಳೆಹಣ್ಣಿನ ಬರ್ಫಿ: ಬಾಳೆಹಣ್ಣು ಬರಿದಾಗಿ ತಿನ್ನಲು ಮಾತ್ರವಲ್ಲ. ಅವುಗಳಿಂದ ರುಚಿಯಾದ ಬರ್ಫಿಯನ್ನು ತಯಾರಿಸಬಹುದಾಗಿದೆ. ಬಾಳೆಹಣ್ಣು, ಸಕ್ಕರೆ, ಹಾಲಿನಿಂದ ತಯಾರಿಸಿದ ಕ್ಯಾಚೆ ಕೆಲೆ ಕಿ ಬರ್ಫಿ ಸಾಕಷ್ಟು ಆರೋಗ್ಯಕರ ಮತ್ತು ಆರೋಗ್ಯಕರ ಅಂಶವನ್ನು ಹೊಂದಿದೆ. ವಿಟಮಿನ್ ಸಿ ಮತ್ತು ವಿಟಮಿನ್ ಬಿ ಪೋಷಕಾಂಶವನ್ನು ಹೊಂದಿದ್ದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಅವಶ್ಯ ಇರುವ ಖನಿಜ ಅಂಶಗಳನ್ನು ದೇಹಕ್ಕೆ ನೀಡುತ್ತದೆ.
ಗೆಡ್ಡೆ ಗೆಣಸಿನ ಚಾಟ್: ನವರಾತ್ರಿ ಸಮಯದಲಿ ತಯಾರಿಸಿದ ಚಾಟ್‍ಗಳು ಹಬ್ಬಕ್ಕೆ ಬಲು ವಿಶೇಷ. ಗೆಣಸಿನಿಂದ ತಯಾರಿಸಿದ ಚಾಟ್ ನವರಾತ್ರಿ ಹಬ್ಬದ ವಿಶೇಷ ಖಾದ್ಯವಾಗಿದೆ. ನಿಂಬೆ, ಕಲ್ಲು, ಉಪ್ಪು ಮತ್ತು ಮಸಾಲೆಯೊಂದಿಗೆ ಸೇರಿಸಿ ಚಾಟ್ ತಯಾರಿಸಲಾಗುತ್ತದೆ. ವಿಟಮಿನ್ ಎ ಅಂಶವನ್ನು ದೇಹಕ್ಕೆ ಒದಗಿಸುತ್ತದೆ. ಕಡಿಮೆ ರಕ್ತ ಮಟ್ಟ ಇರುವವರಿಗೆ ಇದರ ಸೇವನೆಯಿಂದ ರಕ್ತಮಟ್ಟವನ್ನು ಸರಿದೂಗಿಸುವ ಅಂಶವನ್ನು ಹೊಂದಿದೆ. ರೋಗ ನಿರೋಧಕ ಅಂಶವನ್ನು ಅಧಿಕ ಪ್ರಮಾಣದಲ್ಲಿ ಹೊಂದಿದೆ.
ಹುರುಳಿ ದೋಸೆ: ಹುರುಳಿ ಹಿಟ್ಟಿನಿಂದ ಮಾಡುವ ದೋಸೆಯು ಅತ್ಯಂತ ಪೋಷಕಾಂಶ ಹಾಗೂ ಶಕ್ತಿಯನ್ನು ನೀಡುತ್ತದೆ. ವ್ರತಾಚರಣೆಯಲ್ಲಿ ಇದನ್ನು ಸವಿದರೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದು. ಇದರಲ್ಲಿ ಸಮೃದ್ಧವಾದ ನಾರಿನಂಶವನ್ನು ಪಡೆದುಕೊಂಡಿದೆ.
ಹಾಲಿನ ಉತ್ಪನ್ನ: ಹಾಲು, ಮೊಸರು, ಪನೀರ್, ಬೆಣ್ಣೆ, ತುಪ್ಪ, ಖೊಯಾ ಮತ್ತು ಮಂದಗೊಳಿಸಿದ ಹಾಲಿನಂತಹ ನೈಸರ್ಗಿಕ ಉತ್ಪನ್ನಗಳನ್ನು ಸೇವಿಸಬಹುದು. ಯಾವುದೇ ಮಂಗಳಕರ ಸಂದರ್ಭಕ್ಕೆ ಹಾಲಿನ ಉತ್ಪನ್ನಗಳನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ.
ಒಣಫಲಗಳು: ಉಪವಾಸ ಸಮಯದಲ್ಲಿ ಒಣಫಲಗಳ ಸೇವನೆಯನ್ನು ಮಾಡಬಹುದಾಗಿದೆ. ಬಾದಾಮಿ, ಗೇರುಬೀಜ, ಕಡಲೆ ಕಾಳು, ಆಕ್ರೋಟ್, ಮೆಲನ್ ಕಾಳುಗಳು, ಪೈನ್ ನಟ್‍ಗಳು, ದ್ರಾಕ್ಷಿ, ಪಿಸ್ತಾವನ್ನು ಸೇವಿಸಬಹುದಾಗಿದೆ.
ಹಣ್ಣುಗಳು ಮತ್ತು ತರಕಾರಿಗಳು: ಉಪವಾಸ ಸಮಯದಲ್ಲಿ ಹಸಿ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಬಹುದಾಗಿದೆ. ನವರಾತ್ರಿ ಸಮಯದಲ್ಲಿ ಸಾಮಾನ್ಯವಾಗಿ ಸೇವಿಸುವ ತರಕಾರಿಗಳು ಸೋರೆಕಾಯಿ, ಆಲೂಗೆಡ್ಡೆ, ಕುಂಬಳಕಾಯಿ, ಸಿಹಿ ಆಲೂಗೆಡ್ಡೆ, ಸೌತೆಕಾಯಿ, ಟೊಮೆಟೊ, ಕ್ಯಾರೆಟ್, ಆಪಲ್ಸ್, ದ್ರಾಕ್ಷಿಗಳು, ಪಪ್ಪಾಯ, ಪೇರಳೆ, ಪೀಚ್, ಬೆರ್ರಿ ಇತ್ಯಾದಿ ಯಾವುದೇ ಋತುಮಾನದಲ್ಲಿ ಸಿಗುವ ಹಣ್ಣುಗಳ ಸೇವನೆ ಮಾಡಬಹುದಾಗಿದೆ.
ಉಪವಾಸ ಮಾಡುವುದರಿಂದ ದೈಹಿಕ, ಮಾನಸಿಕ ಮತ್ತು ಧಾರ್ಮಿಕ ಪ್ರಯೋಜನಗಳನ್ನು ಸಿಗುತ್ತದೆ. ನವರಾತ್ರಿಯ ಸಮಯದಲ್ಲಿ ಮಾಡುವ ಒಂಬತ್ತು ದಿನಗಳ ಕಾಲ ಉಪವಾಸ ದೇಹ, ಮನಸ್ಸು ಮತ್ತು ಆತ್ಮದ ಶುದ್ಧೀಕರಣಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಧಾರ್ಮಿಕ ಮತ್ತು ಆರೋಗ್ಯಕ್ಕೆ ಪೂರಕವಾದ ಕಾರಣಗಳನ್ನು ಉಪವಾಸದೊಂದಿಗೆ ಥಳಕು ಹಾಕಿಕೊಂಡಿವೆ.