ತುಮಕೂರು: ಈ ಜಿಲ್ಲೆಯ ಜನರು ರಕ್ತ ಕೊಡುತ್ತೇವೆ ಹೊರತು ರಾಮನಗರ (Ramanagara) ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲು ಯಾವುದೆ ಕಾರಣಕ್ಕೂ ಬಿಡುವುದಿಲ್ಲ ಎಂದು ಜೆಡಿಎಲ್‌ಪಿ ನಾಯಕ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು (Suresh Babu) ಎಚ್ಚರಿಕೆ ನೀಡಿದ್ದಾರೆ.
ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ (Hemavathi Express Canal) ವಿರೋಧಿ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಎಲ್ಲಿಂದ ಪ್ರಾರಂಭವಾಗುತ್ತೋ ಅಲ್ಲಿಂದ ಪಾದಯಾತ್ರೆ ಶುರುಮಾಡಿದ್ದೇವೆ. ಇದು ನಮ್ಮ ಜಿಲ್ಲೆಯ ರೈತರ ಅಳಿವು-ಉಳಿವಿನ ಪ್ರಶ್ನೆ. ಗುಬ್ಬಿ, ತುಮಕೂರು ಸೇರಿದಂತೆ ಎಲ್ಲಾ ತಾಲೂಕುಗಳಿಗೂ ತೊಂದರೆಯಾಗಲಿದೆ. ಈ ಯೋಜನೆ ನಿಲ್ಲಿಸಬೇಕು ಎಂದು ಡಿಕೆ ಶಿವಕುಮಾರ್ (DK Shivakumar) ಅವರನ್ನು ಹಲವು ಬಾರಿ ಭೇಟಿಯಾಗಿದ್ದೇವೆ. ಅವರ ಧೋರಣೆ ಏನು ಎಂಬುದು ಗೊತ್ತಾಗಿದೆ. ನೀವು ಏನೇ ಮಾಡಿದರೂ ನೀರು ತೆಗೆದುಕೊಂಡು ಹೋಗುತ್ತೇವೆ ಅನ್ನೊದು ಅವರ ಧೋರಣೆ. ಅದೇಗೆ ನೀರನ್ನು ತೆಗೆದುಕೊಂಡು ಹೋಗುತ್ತೀರಾ ನೋಡೇ ಬಿಡೋಣ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: DCM ಆದ ಮರುದಿನವೇ ಬೇನಾಮಿ ಆಸ್ತಿ ಆರೋಪದಿಂದ ಮುಕ್ತ; 1,000 ಕೋಟಿ ಮೌಲ್ಯದ ಆಸ್ತಿ ಪವಾರ್‌ಗೆ ರಿಲೀಸ್!
Advertisement
Advertisement
ತುಮಕೂರು ಜಿಲ್ಲೆಯವರು ಏನು ಬಳೆ ತೊಟ್ಟುಕೊಂಡು ಕುಳಿತಿಲ್ಲ. ಜಿಲ್ಲೆಯಲ್ಲಿ ಇಬ್ಬರು ಸಚಿವರು, ಏಳು ಜನ ಕಾಂಗ್ರೆಸ್ ಶಾಸಕರಿದ್ದಾರೆ. ನಿಮಗೇನಾದರೂ ಕಾಳಜಿ ಇದ್ದರೆ ಕೂಡಲೇ ಈ ಯೋಜನೆಯನ್ನು ನಿಲ್ಲಿಸಬೇಕು. ಹಿಂದೆ ಒಂದು ಸಲ ಜಿ.ಪಂ ಕೆಡಿಪಿ ಸಭೆಯಲ್ಲಿ ಕೆನಾಲ್ ವಿರುದ್ಧ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರೆಸೊಲ್ಯೂಷನ್ ಪಾಸ್ ಮಾಡಿದ್ದೇವೆ. ಹಾಗಾಗಿ ಈ ಯೋಜನೆಯನ್ನು ಹಿಂಪಡೆಯುವಂತೆ ಪರಮೇಶ್ವರ್ ಅವರು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಕುಣಿಗಲ್ ಗಡಿ ದಾಟಿದ ಮೇಲೆ ನಿಮಗೆ ಹೇಗೆ ಬೇಕೋ ಹಾಗೆ ಮಾಡಿ. ನಮ್ಮ ಜಿಲ್ಲೆಯಿಂದ ಲಿಂಕ್ ಕೆನಾಲ್ ಬೇಡ. ಬೇರೆ ಯಾವುದೇ ಮಾರ್ಗದಲ್ಲಿ ಮಾಡಿಕೊಳ್ಳಿ ಎಂದು ಕಿಡಿಕಾರಿದರು. ಇದನ್ನೂ ಓದಿ: ನಬಾರ್ಡ್‌ನಿಂದ ರಾಜ್ಯಕ್ಕಲ್ಲ ಇಡೀ ದೇಶಕ್ಕೇ ಹಣ ಕಡಿಮೆಯಾಗಿದೆ, ಸಿಎಂ ಸುಳ್ಳು ಹೇಳಿದ್ದಾರೆ: ಜೋಶಿ
Advertisement
ರಾಜ್ಯದ ಇತಿಹಾಸದಲ್ಲಿ ಮೂಲ ಯೋಜನೆಯನ್ನು ಡೈವರ್ಟ್ ಮಾಡಿ ನೀರು ತೆಗೆದುಕೊಂಡು ಹೋಗೋದು ಇದೇ ಮೊದಲು. ಮೂಲ ಯೋಜನೆ ಬಿಟ್ಟು ರಾಮನಗರ ಜಿಲ್ಲೆಗೆ ಯಾರ ಸ್ವಾರ್ಥಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ? ನಾವು ಇವತ್ತು ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ. ನೀವೇನಾದರೂ ತೊಡೆ ತಟ್ಟಿ ತೆಗೆದುಕೊಂಡು ಹೋಗುತ್ತೇವೆ ಅಂದರೆ ಇಲ್ಲಿ ರಕ್ತಪಾತ ಆಗುತ್ತೆ.ಈ ರಕ್ತಪಾತಕ್ಕೆ ನೇರವಾಗಿ ಕಾಂಗ್ರೆಸ್ ಸರ್ಕಾರ ಹೊಣೆಯಾಗುತ್ತೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೂಡಲೇ ಈ ಯೋಜನೆಯನ್ನು ರದ್ದು ಮಾಡಬೇಕು. ನಮ್ಮ ಜಿಲ್ಲೆಗೆ ಬರುವ ನೀರನ್ನು ಒಂದು ಹನಿಯನ್ನೂ ಕೂಡ ಬಿಡಲ್ಲಾ. ಅಸೆಂಬ್ಲಿಯಲ್ಲೂ ಮಾತನಾಡುತ್ತೇವೆ. ಯೋಜನೆ ನಿಲ್ಲಿಸುವವರೆಗೂ ಜಿಲ್ಲೆಯ ಜನ ರೊಚ್ಚಿಗೆದ್ದು ಹೋರಾಟ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಾಂಬ್ ಸ್ಫೋಟಿಸಿ ಮೋದಿ ಹತ್ಯೆ ಮಾಡುವುದಾಗಿ ಮುಂಬೈ ಪೊಲೀಸರಿಗೆ ಬೆದರಿಕೆ
Advertisement
ಈ ದೇಶದಲ್ಲಿ ಹೋರಾಟಗಳಿಗೆ ಕಿಮ್ಮತ್ತು ಕೊಡಲ್ಲಾ. ಆಡಳಿತ ಪಕ್ಷಕ್ಕೆ ಕಿವಿ, ಕಣ್ಣು, ಮೂಗು ಏನೂ ಕಾಣಿಸುವುದಿಲ್ಲ. ಕ್ಯಾಬಿನೆಟ್‌ನಲ್ಲಿ ತೀರ್ಮಾನ ಆಗಿರುವುದಕ್ಕೆ ಕಾನೂನು ಹೋರಾಟ ಆದರೆ ಏನಾಗುತ್ತೆ? ಕಾನೂನು ಹೋರಾಟ ಒಂದು ಭಾಗ. ಜನರ ಮುಂದೆ ಯಾವ ಕಾನೂನು? ಜನ ರೊಚ್ಚಿಗೆದ್ದಾಗ ಸರ್ಕಾರ ತಲೆಬಾಗಬೇಕಾಗುತ್ತದೆ. ಗೃಹ ಸಚಿವರಿಗೆ ಹಾಗೂ ಜಿಲ್ಲೆಯ ಕಾಂಗ್ರೆಸ್‌ನ 7 ಶಾಸಕರಿಗೆ ಹೇಳುತ್ತಿದ್ದೇನೆ. ಶಾಶ್ವತವಾಗಿ ನೀವೆಲ್ಲಾ ಮಾಜಿಗಳಾಗುತ್ತೀರಿ. ಈ ಯೋಜನೆಗೆ ಏನಾದರೂ ಅವಕಾಶ ಕೊಟ್ಟರೆ ಕಾಂಗ್ರೆಸ್ ಅನ್ನು ಬೇರು ಸಮೇತ ಕಿತ್ತುಹಾಕುತ್ತಾರೆ ಎಂದು ಗುಡುಗಿದರು. ಇದನ್ನೂ ಓದಿ: ನಬಾರ್ಡ್‌ನಿಂದ ರಾಜ್ಯಕ್ಕಲ್ಲ ಇಡೀ ದೇಶಕ್ಕೇ ಹಣ ಕಡಿಮೆಯಾಗಿದೆ, ಸಿಎಂ ಸುಳ್ಳು ಹೇಳಿದ್ದಾರೆ: ಜೋಶಿ