ತುಮಕೂರು: ಹೇಮಾವತಿ ನೀರಿಗಾಗಿ ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
ಜಯರಾಂ ಅವರು ತನ್ನ ಕ್ಷೇತ್ರದ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಇಂದು ತುರುವೇಕೆರೆ ತಾಲೂಕಿನ ಅಡವನಹಳ್ಳಿ ಹೇಮಾವತಿ ನಾಲೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಸ್ತುವಾರಿ ಸಚಿವ ಡಿಸಿಎಂ ಡಾ ಜಿ.ಪರಮೇಶ್ವರ್ ಹೇಮಾವತಿ ನೀರು ಹರಿಸಲು ತಾರತಮ್ಯ ಮಾಡಿದ್ದು, ತನ್ನ ಕ್ಷೇತ್ರವನ್ನ ಕಡೆಗಣಿಸಿದ್ದಾರೆ ಎಂದು ಆರೋಪ ಮಾಡಿದರು.
Advertisement
ಒಂಭತ್ತು ಕ್ಷೇತ್ರವನ್ನು ಬರಗಾಲ ಎಂದು ಘೋಷಿಸಿದ್ದಾರೆ. ಆದರೆ ನಮ್ಮ ಕ್ಷೇತ್ರವನ್ನು ಘೋಷಣೆ ಮಾಡಿಲ್ಲ. ತಾನು ಬಿಜೆಪಿ ಶಾಸಕ ಎಂದು ತನ್ನ ಕ್ಷೇತ್ರ ಕಡೆಗಣಿಸಿದ್ದಾರೆ. ಸಮ್ಮಿಶ್ರ ಸರ್ಕಾರದಿಂದ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
Advertisement
Advertisement
ಸಮುದ್ರದ ಪಕ್ಕದಲ್ಲಿದ್ದರೂ ಕುಡಿಯಲು ನೀರು ಸಿಗುತ್ತಿಲ್ಲ ಅಂತಹ ಪರಿಸ್ಥಿತಿ ನನ್ನ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ತುರುವೇಕೆರೆ ತಾಲೂಕಿನ ಮೂಲಕ ಅನೇಕ ತಾಲೂಕಿಗೆ ನೀರು ಹರಿಯುತ್ತಿದೆ. ಆದರೆ ನನ್ನ ತಾಲೂಕಿಗೆ ನೀರು ಬರುತ್ತಿಲ್ಲ. ಇಂದು ಇಲ್ಲಿಗೆ ಬಂದಿರುವ ಜನರು ಊಟ ಮಾಡದೇ ಬಂದಿದ್ದಾರೆ. ಅವರ ಕಷ್ಟ ನಮಗೆ ಗೊತ್ತು ಎಂದು ಉಪವಾಸ ಸತ್ಯಾಗ್ರಹ ಆರಂಭಿಸಿ ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಶಾಸಕರು ಕಣ್ಣೀರಿಟ್ಟು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv