– ಕುಣಿಗಲ್ ರೈತರಿಗೆ ಅನ್ಯಾಯ ಮಾಡಬೇಡಿ ಎಂದ ಶಾಸಕ
– ವಿಪಕ್ಷದವರಿಗೆ ನಾವು ಆಹಾರ ಆಗಬಾರದು ಎಂದು ಕಿವಿಮಾತು
ಬೆಂಗಳೂರು: ಕುಣಿಗಲ್ ನೀರಿನ ಸಮಸ್ಯೆ ಪರಿಹರಿಸಲು ಡಿಕೆ ಶಿವಕುಮಾರ್ (DK Shivakumar) ಅವರು ಕ್ಯಾಬಿನೆಟ್‌ನಲ್ಲಿ ನಮಗೆ ಸಹಾಯ ಮಾಡೋದಾಗಿ ಹೇಳಿದ್ದಾರೆ. ಇದಕ್ಕೆ ರಾಜೇಂದ್ರ ರಾಜಣ್ಣ ಅವರು ಯಾಕೆ ಮಾತಾಡ್ತಾರೆ. ನಾನು ಫೋನ್ ಮಾಡಿ ಬೆದರಿಕೆ ಹಾಕ್ತೀನಿ ಅಂತಾರೆ, ಒಬ್ಬ ಮಂತ್ರಿ ಮಗನಿಗೆ ಬೆದರಿಕೆ ಹಾಕೋಕೆ ಆಗುತ್ತಾ? ನಾನು ಸಾಮಾನ್ಯ ರೈತನ ಮಗ ಅಂತ ಕುಣಿಗಲ್ ಶಾಸಕ ರಂಗನಾಥ್ (HD Ranganath) ಅವರು ಸಚಿವ ರಾಜಣ್ಣ ಪುತ್ರನ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹೇಮಾವತಿ ಕೆನಾಲ್ (Hemavathi canal) ವಿಚಾರದಲ್ಲಿ ಕುಣಿಗಲ್ ಶಾಸಕ ರಂಗನಾಥ್ ಬೆದರಿಕೆ ಹಾಕ್ತಿದ್ದಾರೆ ಎಂಬ ರಾಜಣ್ಣ ಪುತ್ರ ರಾಜೇಂದ್ರ (Rajendra Rajanna) ಹೇಳಿಕೆ ವಿಚಾರ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಇದನ್ನೂ ಓದಿ: ಹೇಮಾವತಿ ಕೆನಾಲ್ ಕದನ – ಡಿಕೆಶಿ ಸಂಬಂಧಿ ನಂಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ: ರಾಜೇಂದ್ರ ರಾಜಣ್ಣ
ಫೋನ್‌ನಲ್ಲಿ ಮಾತಾಡಿದ್ರೆ ಅದು ಬೆದರಿಕೆ ಹೇಗೆ ಆಗಬೇಕು? ನಮ್ಮ ಸರ್ಕಾರ ಬಂದಿದೆ. ಜನರ ಪರ ನಾವು ಕೆಲಸ ಮಾಡೋಣ. ಶಿರಸಾವಹಿಸಿ ಕೆಲಸ ಮಾಡೋಣ. ಸಹಕಾರ ಸಂಘದಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರೇ ಅನೇಕ ವರ್ಷಗಳಿಂದ ಇದ್ದಾರೆ. ನಾನು ಕಾಂಗ್ರೆಸ್ ಬೆಂಬಲಿಗರನ್ನ ತರೋಕೆ ಪ್ರಯತ್ನ ಮಾಡ್ತಿದ್ದೇನೆ. ಹೀಗಾಗಿ ಸಹಕಾರಿ ಸಂಘದಿಂದ ಸಾಲ ಕೊಡಿ ಅಂತ ಸದನದಲ್ಲಿ ಕೇಳಿದ್ದೇನೆ. ರಾಜಣ್ಣ ಜೊತೆ ನನಗೆ ವೈಮನಸ್ಯ ಇಲ್ಲ. ಅವರ ಜೊತೆ ಸಲುಗೆಯಿಂದ ಬಂದಿದ್ದೇನೆ. ಯಾಕೆ ನನ್ನ ಮೇಲೆ ಭಿನ್ನಾಭಿಪ್ರಾಯ ಮಾಡ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಾನು ಯಾವ ಮಂತ್ರಿ ಮಗ ಅಲ್ಲ. ಬೆದರಿಕೆ ಹಾಕೋ ಗುಣ ಇಲ್ಲ. ಡಿಕೆ ಶಿವಕುಮಾರ್ ಅವರು ಶಾಸಕನಾಗಿ ಹೇಗೆ ನಡೆದುಕೊಳ್ಳಬೇಕು ಅಂತ ಹೇಳಿ ಕೊಟ್ಟಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡ್ತಿದ್ದೇನೆ. ನಾನು ಯಾರಿಗೂ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಶೀತಲ ಸಮರ; ಡಾ.ರಂಗನಾಥ್-ರಾಜಣ್ಣ ಕುಟುಂಬ ನಡುವೆ ವಾರ್
ಕುಣಿಗಲ್‌ಗೆ ಕೊರಟಗೆರೆಯಿಂದ ನೀರು ತೆಗೆದುಕೊಂಡು ಹೋಗ್ತಿದ್ದಾರೆ, ಮಧುಗಿರಿಗೆ ಕೊಡ್ತಿಲ್ಲ ಅಂತ ರಾಜೇಂದ್ರ ರಾಜಣ್ಣ ಅರೋಪ ಮಾಡಿದ್ದಾರೆ. ನನ್ನನ್ನ ಜನ ಎರಡು ಬಾರಿ ಗೆಲ್ಲಿಸಿದ್ದಾರೆ ಅವರಿಗೆ ನೀರು ಕೊಡಬೇಕು. ಕುಣಿಗಲ್‌ಗೆ 90% ನೀರು ಹರಿದಿಲ್ಲ. ಕುಣಿಗಲ್‌ಗೆ ಹಾಸನದಿಂದ ನೀರು ಬೇಕು, ನೀರು ತರಲು ನಾನು ಹೋರಾಟ ಮಾಡ್ತೀನಿ ಅಂದಿದ್ದಾರೆ. ಇದನ್ನೂ ಓದಿ: ರಾಜಣ್ಣರನ್ನ `ಹನಿ’ ಬಲೆಗೆ ಬೀಳಿಸಲು ಲೇಡಿ ಸೇರಿ ಮೂರ್ನಾಲ್ಕು ಜನ ಪ್ರಯತ್ನಿಸಿದ್ದಾರೆ – ಪುತ್ರ ರಾಜೇಂದ್ರ
ಅಲ್ಲದೇ ರಾಜಣ್ಣ ಬಗ್ಗೆ ನಾನೇನು ಹೇಳೊಲ್ಲ. ರಾಜಣ್ಣ ಹಿರಿಯರು. ಅವರ ಬಗ್ಗೆ ನಾನು ಹೇಳೊಲ್ಲ. ನನ್ನ ತಾಲೂಕಿನ ರೈತರಿಗೆ ಸಾಲ ಕೊಡಿಸೋದು ತಪ್ಪಾ? ಯಾಕೆ ರಾಜಣ್ಣ ಹೀಗೆ ಹೇಳಿಕೆ ಕೊಡ್ತಾರೆ ಗೊತ್ತಿಲ್ಲ. ಯಾರು ಎಷ್ಟೇ ಪ್ರವೋಕ್ ಮಾಡಿದ್ರು ನಾನು ಪ್ರವೋಕ್ ಆಗೊಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾಕೆ ಗೊಂದಲದ ಹೇಳಿಕೆ ಕೊಡ್ತೀರಾ? ಸಿಎಂ, ಡಿಸಿಎಂ ಅವರು ಉತ್ತಮ ಕೆಲಸ ಮಾಡ್ತಾರೆ ಅಂತ ಜನರು ನಿರೀಕ್ಷೆ ಇಟ್ಟಿದ್ದಾರೆ. ಜನರಿಗೆ ನಮ್ಮ ಸರ್ಕಾರದ ಬಗ್ಗೆ ನಿರೀಕ್ಷೆ ಇದೆ, ಅದನ್ನ ಮಾಡಬೇಕು. ಬೀದಿಯಲ್ಲಿ ಮಾತಾಡೋದಕ್ಕಿಂತ ಪಕ್ಷದ ವೇದಿಕೆಯಲ್ಲಿ ಮಾತಾಡಬೇಕು. ಮದುಗಿರಿಯವರಿಗೆ ನೀರು ತರೋಕೆ ನಾವು ಪ್ರಯತ್ನ ಮಾಡ್ತೀನಿ. ನಾನೇ ನಿಂತು ಮಧುಗಿರಿ ರೈತರಿಗೆ ನೀರು ಕೊಡ್ತೀನಿ. ಕುಣಿಗಲ್ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದ್ದಾರೆ.
ಮುಂದುವರಿದು.. ವಿರೋಧ ಪಕ್ಷದವರಿಗೆ ನಾವು ಆಹಾರ ಆಗಬಾರದು. ನಮ್ಮಲ್ಲಿ ಶಿಸ್ತು ಬರಬೇಕು. ಇಲ್ಲದೇ ಹೋದ್ರೆ ಜನ ಆಡಿಕೊಳ್ತಾರೆ. ಜನರ ಪರ ನಾವು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.