ರಾಂಚಿ: ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ (Hemanth Soren) ಅವರನ್ನು 5 ದಿನ ಜಾರಿ ನಿರ್ದೇಶನಾಲಯ (ED) ಕಸ್ಟಡಿಗೆ ನೀಡಲಾಗಿದೆ.
ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಬಳಿಕ ಹೇಮಂತ್ ಸೋರೆನ್ ಅವರನ್ನು ಬುಧವಾರ ಸಂಜೆ ಬಂಧಿಸಲಾಗಿತ್ತು. ಬಳಿಕ ಗುರುವಾರ ಮಧ್ಯಾಹ್ನ ಅವರನ್ನು ರಾಂಚಿಯ PMLA ಕೋರ್ಟಿಗೆ ಹಾಜರುಪಡಿಸಲಾಯಿತು. ಈ ವೇಳೆ ಇಡಿ 10 ದಿನಗಳ ಕಾಲ ಕಸ್ಟಡಿಗೆ ಕೋರಿತ್ತು. ನ್ಯಾಯಾಲಯ ಸೋರೆನ್ ಅವರನ್ನು ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದೀಗ ಇಂದು 5 ದಿನಗಳ ಕಾಲ ಇಡಿ ಕಸ್ಟಡಿಗೆ ಹೇಮಂತ್ ಸೋರೆನ್ ಅವರನ್ನು ಒಪ್ಪಿಸಲಾಗಿದೆ.
Advertisement
Advertisement
ಈ ನಡುವೆ ತಮ್ಮನ್ನು ಬಂಧಿಸಿದ ಜಾರಿ ನಿರ್ದೇಶನಾಲಯ (ED) ನಿರ್ಧಾರ ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemanth Soren) ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ನ್ಯಾ. ಸಂಜೀವ್ ಖನ್ನಾ ನೇತೃತ್ವದ ತ್ರಿ ಸದಸ್ಯ ಪೀಠವು ಹೈಕೋರ್ಟ್ ಸಂಪರ್ಕಿಸುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಹೇಮಂತ್ ಸೋರೆನ್ ಅರ್ಜಿ ವಿಚಾರಣೆಗೆ ಒಪ್ಪದ ಸುಪ್ರೀಂಕೋರ್ಟ್
Advertisement
Advertisement
ಬುಧವಾರ ಭಾರೀ ಭದ್ರತೆ ನಡುವೆ ರಾಂಚಿಯ ಸಿಎಂ ನಿವಾಸಕ್ಕೆ ಬಂದ ಇಡಿ ಅಧಿಕಾರಿಗಳು ಹೇಮಂತ್ ಸೋರೆನ್‌ಗೆ ಪ್ರಶ್ನೆಗಳನ್ನು ಕೇಳಿದ್ದರು. ಸತತ 8 ಗಂಟೆಯ ವಿಚಾರಣೆಯ ಬಳಿಕ ಇಡಿ ಬಂಧಿಸಿತ್ತು. ಮುಂಜಾಗ್ರತಾ ಕ್ರಮವಾಗಿ ರಾಂಚಿಯಲ್ಲಿ ಭದ್ರತೆಗೆ 7ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ನಡುವೆ ಹೇಮಂತ್ ಸೋರೆನ್ ಅವರು ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಸೋಮವಾರ ಅಧಿಕಾರಿಗಳು ದಾಳಿ ನಡೆಸಿದ್ದರ ಕುರಿತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ರಾಂಚಿಯಲ್ಲಿ ಎಫ್‌ಐಆರ್ ದಾಖಲು ಮಾಡಿದರು.