ಹೇಮಂತ್‌ ಸೋರೆನ್‌ ತಂದೆಯೂ ಹಿಂದೆ ಜೈಲುಪಾಲು!

Public TV
1 Min Read
JHARKHAND

ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ ಸಿಎಂ ಹೇಮಂತ್‌ ಸೋರೆನ್‌ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬುಧವಾರ ಸಂಜೆ ಬಂಧಿಸಿದ್ದಾರೆ. ಆದರೆ ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿಗಳು ಅರೆಸ್ಟ್‌ ಆಗುತ್ತಿರುವುದು ಇದೇ ಮೊದಲಲ್ಲ ಈ ಹಿಂದೆಯೂ ಬಂಧಿತರಾಗಿದ್ದಾರೆ.

ಇಂದು ಅರೆಸ್ಟ್‌ ಆಗಿರುವ ಹೇಮಂತ್‌ ಸೋರೆನ್‌ ಅವರ ತಂದೆಯೂ ಹಿಂದೆ ಅರೆಸ್ಟ್‌ ಆಗಿದ್ದರು. ಅಷ್ಟೇ ಅಲ್ಲದೇ ಮತ್ತೊಬ್ಬ ಸಿಎಂ ಕೂಡ ಬಂಧನವಾಗಿದ್ದರು.

Hemant Soren 1

ಅರೆಸ್ಟ್‌ ಆದ ಸಿಎಂಗಳು:
ಮಧು ಕೊಡಾ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೊಡಾ (Madhu Koda) ಅವರು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದ್ದರು. 2006 ಮತ್ತು 2008 ರ ನಡುವೆ ಯುಪಿಎ ಸರ್ಕಾರದ ಮೈತ್ರಿಯೊಂದಿಗೆ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಕೊಡಾ, ಅಕ್ರಮ ಹಣ ವರ್ಗಾವಣೆ ಮತ್ತು ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಆರೋಪ ಎದುರಿಸಿದ್ದರು. ಇದನ್ನೂ ಓದಿ: ಹೇಮಂತ್ ಸೋರೆನ್ ಅರೆಸ್ಟ್ – ಚಂಪಾಯಿ ಸೋರೆನ್ ಮುಂದಿನ ಜಾರ್ಖಂಡ್ ಸಿಎಂ

2009ರಲ್ಲಿ ಬಂಧನಕ್ಕೊಳಗಾದ ಕೊಡಾ 2013ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 2017ರಲ್ಲಿ 25 ಲಕ್ಷ ರೂ.ಗಳ ದಂಡದೊಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಹವಾಲಾ ವಹಿವಾಟು ಮತ್ತು ಅಕ್ರಮ ಆಸ್ತಿಗಳ ಜೊತೆಗೆ ಇತರ ನಾಲ್ಕು ಪ್ರಕರಣಗಳಲ್ಲಿ ಕೊಡಾ ಶಿಕ್ಷೆಗೆ ಒಳಗಾದರು.

ಶಿಬು ಸೋರೆನ್: ಇಂದು ಬಂಧನವಾಗಿರುವ ಹೇಮಂತ್‌ ಸೋರೆನ್‌ (Hemant Soren) ತಂದೆ ಹಾಗೂ ಮಾಜಿ ಸಿಎಂ ಶಿಬು ಸೊರೆನ್ (Shibu Soren) ಅವರು ಕೂಡ 1994 ರಲ್ಲಿ ಅವರ ಖಾಸಗಿ ಕಾರ್ಯದರ್ಶಿ ಶಶಿನಾಥ್ ಝಾ ಅವರ ಅಪಹರಣ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ದೆಹಲಿ ನ್ಯಾಯಾಲಯವು 2006ರ ಡಿಸೆಂಬರ್ 5 ರಂದು ಜೀವಾವಧಿ ಶಿಕ್ಷೆ ವಿಧಿಸಿತು. ಏಪ್ರಿಲ್ 2018ರಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಶಿಬು ಸೊರೆನ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತು.

Share This Article