ಲಕ್ನೋ: ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ ಪಂಚರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಕುರಿತಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ವೇಳೆ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಹಾಡಿ ಹೋಗಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಲ್ಡೋಜರ್ (Bulldozer) ಮಂದೆ ಯಾರೂ ಬರಲು ಸಾಧ್ಯವಿಲ್ಲ. ಅದು ಸೈಕಲ್ ಆಗಿರಲಿ ಅಥವಾ ಇನ್ನೇನೇ ಇರಲಿ. ಎಲ್ಲವನ್ನೂ ಒಂದು ನಿಮಿಷದಲ್ಲಿ ಮುಗಿಸುತ್ತದೆ ಎಂದು ವಿರೋಧ ಪಕ್ಷಗಳಿ ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ನಮ್ಮ ಸರ್ಕಾರ ರಚನೆಯಾಗುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು. ನಾವು ಪ್ರತಿಯೊಂದು ಅಭುವೃದ್ಧಿಯ ಅಂಶಗಳಿಗಾಗಿ ಕೆಲಸ ಮಾಡಿದ್ದೇವೆ. ಸಾರ್ವಜನಿಕರು ನಮ್ಮನ್ನು ನಂಬುತ್ತಾರೆ ಎಂದು ಹೇಳುವ ಮೂಲಕವಾಗಿ ಪಂಚರಾಜ್ಯಗಳಲ್ಲಿ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿರುವ ಕುರಿತಾಗಿ ಹರ್ಷವ್ಯಕ್ತಪಡಿಸಿದ್ದಾರೆ.
Advertisement
Advertisement
ಲಕ್ನೋದ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಪ್ರಾರಂಭವಾಯಿತು. ಲಕ್ನೋದ ಪಕ್ಷದ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದು ಹೋಳಿ ಆಡುತ್ತಿರುವುದು ಕಂಡುಬಂದಿದೆ. ಅವರು ಯುಪಿ ಮೇ ಕಾ ಬಾ ಯುಪಿ ಮೇ ಬಾಬಾ (UP Mein ka ba? UP Mein Baba) ಎಂದು ಘೋಷಣೆಗಳನ್ನುಕೂಗುವ ಮೂಲಕವಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ‘ಬುಲ್ಡೋಜರ್ ಬಾಬಾ’ ಅಬ್ಬರ – ಮೋದಿ, ಯೋಗಿ ಆರ್ಭಟಕ್ಕೆ ಧೂಳೀಪಟ
ಉತ್ತರ ಪ್ರದೇಶದಲ್ಲಿ ‘ಬುಲ್ಡೋಜರ್ ಬಾಬಾ’ ಎಂದೇ ಖ್ಯಾತರಾಗಿದ್ದ ಯೋಗಿ ಆದಿತ್ಯಾನಾಥ್ ಕಮಾಲ್ ಮಾಡಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿತವಾಗಿದ್ದ ಉತ್ತರಪ್ರದೇಶ ಎಲೆಕ್ಷನ್ನಲ್ಲಿ ಬಿಜೆಪಿ ಗೆದ್ದು ಬೀಗಿದೆ. ಎಕ್ಸಿಟ್ ಪೋಲ್ಗಳು ಹೇಳಿದಂತೆಯೇ ಯೋಗಿ-ಮೋದಿ ಜೋಡಿ ಉತ್ತರ ಪ್ರದೇಶದಲ್ಲಿ ಅದ್ವಿತೀಯ ಎನಿಸುವಷ್ಟರ ಮಟ್ಟಿಗೆ ಮೋಡಿ ಮಾಡಿದೆ. ಕಳೆದ ಬಾರಿಯಷ್ಟು ಸೀಟ್ ಗಳಿಸದೇ ಇದ್ದರೂ, ಭಾರೀ ಬಹುಮತ ಗಳಿಸಿದೆ. ಈ ಮೂಲಕ ಉತ್ತರ ಪ್ರದೇಶದ ಇತಿಹಾಸದಲ್ಲೇ 37 ವರ್ಷಗಳ ಬಳಿಕ ಮೊದಲ ಬಾರಿಗೆ, ಒಂದೇ ಪಕ್ಷ ಸತತ ಎರಡನೇ ಬಾರಿ ಅಧಿಕಾರವನ್ನು ಕೈವಶ ಮಾಡಿಕೊಂಡಿದೆ. ಇದನ್ನೂ ಓದಿ: ಬಿಜೆಪಿಗೆ ಗೆಲುವು – 4 ದಾಖಲೆ ಬರೆದ ಸಿಎಂ ಯೋಗಿ
ಮತ್ತೆ ಯೋಗಿ ಸರ್ಕಾರ್:
ಒಟ್ಟು ಸ್ಥಾನಗಳು 403, ಬಹುಮತಕ್ಕೆ 202
ಬಿಜೆಪಿ – 253
ಅಪ್ನಾದಳ – 11
ನಿಷಾದ್ – 06
ಎಸ್ಪಿ – 114
ಆರ್ಎಲ್ಡಿ – 09
ಎಸ್ಬಿಎಸ್ಪಿ – 05
ಬಿಎಸ್ಪಿ – 01
ಕಾಂಗ್ರೆಸ್ – 02
ಎಂಐಎಂ – 00
ಇತರರು – 00
2017 ಫಲಿತಾಂಶ:
ಬಿಜೆಪಿ 312, ಬಿಎಸ್ಪಿ 19, ಎಸ್ಪಿ+ಕಾಂಗ್ರೆಸ್ 54, ಇತರರು- 18