ಭೋಪಾಲ್: ಅಯೋಧ್ಯೆ ಹಾಗೂ ಕಾಶಿ ನಂತರ ಮಥುರಾದಲ್ಲೂ ಕೃಷ್ಣನ ಭವ್ಯ ಮಂದಿರ ನಿರ್ಮಾಣವಾಗಲಿದೆ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಜನ್ಮ ಭೂಮಿ ಹಾಗೂ ಕಾಶಿಯಷ್ಟೇ ಮಥುರವೂ ತನ್ನದೇ ಆದ ಮಹತ್ವವನ್ನು ಪಡೆದಿದೆ. ಅವುಗಳ ಮರುಸ್ಥಾಪನೆಯ ನಂತರ ಮಥುರಾದಲ್ಲೂ ಭವ್ಯ ಮಂದಿರ ನಿರ್ಮಿಸಲಾಗುತ್ತದೆ ಎಂದರು.
ಪ್ರೀತಿ, ವಾತ್ಸಲ್ಯದ ಪ್ರತೀಕ ಶ್ರೀಕೃಷ್ಣ. ಮಥುರಾ ಶ್ರೀಕೃಷ್ಣನ ಜನ್ಮಸ್ಥಳವಾಗಿದೆ. ಅಲ್ಲಿ ಕೃಷ್ಣನ ಭವ್ಯವಾದ ಮಂದಿರವಿರಬೇಕು. ಈಗ ಅಲ್ಲಿ ದೇವಸ್ಥಾನವಿದ್ದು, ಪ್ರಧಾನಿ ಮೋದಿ ಅವರು ಕಾಶಿಯಲ್ಲಿ ಅಭಿವೃದ್ಧಿ ಪಡಿಸಿದ ಕಾರಿಡಾರ್‌ನಂತೆ ಸುಂದರಗೊಳಿಸಬಹುದು. ಜೊತೆಗೆ ದೇವಸ್ಥಾನದಿಂದ ಗಂಗಾ ನದಿಯನ್ನು ನೇರವಾಗಿ ನೋಡಬಹುದು ಎಂದು ಹೇಳಿದರು. ಇದನ್ನೂ ಓದಿ: ಉಪಯೋಗಿ ಅಲ್ಲ, ನಿರುಪಯೋಗಿ: ಮೋದಿ ಬಣ್ಣನೆಗೆ ಅಖಿಲೇಶ್ ಯಾದವ್ ಲೇವಡಿ
ಕಾಶಿ ವಿಶ್ವನಾಥನ ಪುನಾರಾಭಿವೃದ್ಧಿ ಬಹಳ ಕಷ್ಟಕರವಾಗಿತ್ತು. ಆದರೂ ಇಂದು ಕಾಶಿಯಲ್ಲಿ ದೇವಸ್ಥಾನದ ಅಭಿವೃದ್ಧಿಯಾಗುತ್ತಿದೆ. ಇದರಿಂದ ಪ್ರಧಾನಿ ಮೋದಿ ಅವರ ದೂರದೃಷ್ಟಿಯನ್ನು ನಾವು ನೋಡಬಹುದಾಗಿದೆ. ಈ ರೀತಿಯೇ ಮಥುರಾದಲ್ಲಿ ಆಗುತ್ತದೆ ಎಂದು ಭರವಸೆ ನೀಡಿದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಬಿಜೆಪಿ ಸಂಸದೆ, ಕಾಶಿಗೆ ತೆರಳುತ್ತಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಜನ ಸೇವೆಯೇ ನಿಜವಾದ ರಾಮ ರಾಜ್ಯ: ಯೋಗಿ ಆದಿತ್ಯನಾಥ್