ಮುಂಬೈ: ಬಾಲಿವುಡ್ ನ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಹಿರಿಯ ನಟಿ ಹೇಮಾ ಮಾಲಿನಿ ಅವರ ಆತ್ಮಚರಿತ್ರೆ ‘ಬಿಯಾಂಡ್ ದ ಡ್ರೀಮ್ ಗರ್ಲ್’ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡುವಾಗ ಹೇಮಾ ಮಾಲಿನಿ ದೀಪಿಕಾ ಪಡುಕೋಣೆ ಅವರನ್ನು “ಡ್ರೀಮ್ ಗರ್ಲ್” ಎಂದು ಹೇಳುವ ಮೂಲಕ ಹೊಗಳಿದ್ದಾರೆ.
Advertisement
ಹೇಮಾ ಮಾಲಿನಿ ಅವರ ಜೀವನಚರಿತ್ರೆಯ ಈ ಪುಸ್ತಕವನ್ನು ಪತ್ರಕರ್ತ ರಾಮ್ ಕಮಲ್ ಮುರ್ಖಜಿ ಬರೆದಿದ್ದು, ಹೇಮಾ ಅವರ 69ನೇ ಹುಟ್ಟುಹಬ್ಬದಂದು ಈ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ಪುಸ್ತಕಕ್ಕೆ ಪ್ರಧಾನಿ ನರೇಂದ್ರ ಮೋದಿ ಮುನ್ನುಡಿ ಬರೆದಿರುವುದು ವಿಶೇಷ.
Advertisement
Advertisement
ಈ ಕಾರ್ಯಕ್ರಮದಲ್ಲಿ ಹೇಮಾ ಮಾಲಿನಿ ಅವರ ಹೆಣ್ಣು ಮಕ್ಕಳು ಭಾಗವಹಿಸಿದ್ದರೆ, ಪತಿ ಧರ್ಮೆಂದ್ರ ಕಾಣಿಸಿಕೊಂಡಿರಲಿಲ್ಲ. ಜೂಹಿ ಚಾವ್ಲಾ, ಅಲ್ಕಾ ಯಗ್ನಿಕ್, ರಮೇಶ್ ಸಿಪ್ಪಿ ಹಾಗೂ ಕಿರಣ್ ಜುನೇಜಾ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Advertisement