ನವದೆಹಲಿ: ಬಿಜೆಪಿ ಪಕ್ಷಕ್ಕೆ 1 ಸಾವಿರ ರೂ. ದೇಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಅಟಾಲ್ ಬಿಹಾರಿ ವಾಜಪೇಯಿ ಅವರ 97 ನೇ ಜನ್ಮದಿನದಂದು ಬಿಜೆಪಿ ಪ್ರಾರಂಭಿಸಿದ ದೊಡ್ಡ ಅಭಿಯಾನದ ಭಾಗ ಇದಾಗಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಪಕ್ಷದ ನಿಧಿಗೆ 1,000 ರೂ. ದೇಣಿಗೆ ನೀಡಿದ್ದೇನೆ ಮತ್ತು ನೀವು ಪಕ್ಷವನ್ನು ಬಲಪಡಿಸಲು ಸಹಾಯ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
Advertisement
Advertisement
ಭಾರತೀಯ ಜನತಾ ಪಕ್ಷದ ನಿಧಿಗೆ ನಾನು 1,000 ರೂ ದೇಣಿಗೆ ನೀಡಿದ್ದೇನೆ. ನೀವು ನೀಡುವಂತಹ ಸಣ್ಣ ದೇಣಿಗೆಯು ನಮ್ಮ ಪಕ್ಷವನ್ನು ಬಲಪಡಿಸುತ್ತದೆ. ಬಿಜೆಪಿಯನ್ನು ಬಲಗೊಳಿಸಲು ಸಹಾಯ ಮಾಡಿ. ಹಾಗೆಯೇ ಭಾರತವನ್ನು ಬಲಿಷ್ಠ ಮಾಡಲು ನಮ್ಮೊಂದಿಗೆ ಕೈ ಜೋಡಿಸಿ ಎಂದು ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ ವಾಜಪೇಯಿ ಹುಟ್ಟುಹಬ್ಬ: ಗಣ್ಯರಿಂದ ಗೌರವ ನಮನ
Advertisement
I have donated Rs. 1,000 towards the party fund of the Bharatiya Janata Party.
Our ideal of always putting Nation First and the culture of lifelong selfless service by our cadre will be further strengthened by your micro donation.
Help make BJP strong. Help make India strong. pic.twitter.com/ENdytJYEj5
— Narendra Modi (@narendramodi) December 25, 2021
Advertisement
ಮೋದಿಯ ನಂತರ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಅವರು ಪಕ್ಷದ ನಿಧಿಗೆ 1000 ರೂ. ದೇಣಿಗೆ ನೀಡಿದರು. ನಮೋ ಆ್ಯಪ್‍ನ ‘ದೇಣಿಗೆ’ ಮಾಡ್ಯೂಲ್ ಅನ್ನು ಬಳಸಿಕೊಂಡು ಬಿಜೆಪಿಯನ್ನು ನಾನು ಕೊಡುಗೆಯನ್ನು ನೀಡಿದ್ದೇನೆ. ನೀವು ಕೂಡ ರೆಫರಲ್ ಕೋಡ್ ಬಳಸಿ ಈ ಸಾಮೂಹಿಕ ಆಂದೋಲನದಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ಕೊಡುಗೆಯನ್ನು ನೀಡಲು ಹೇಳಿ. ಇದ್ದರಿಂದಾಗಿ ನಿಸ್ವಾರ್ಥ ಮನಸ್ಸಿನಿಂದ ಜನರ ಸೇವೆಯನ್ನು ಮಾಡಲು ಬಿಜೆಪಿಗೆ ಬೆಂಬಲ ನೀಡಬಹುದು ಎಂದು ಟ್ವೀಟ್ ಮಾಡಿದ್ದಾರೆ.
I have made my own humble contribution towards strengthening the BJP using the 'Donation' module of the NaMo App.
Using the referral code, you can also connect friends and family in this mass movement and empower the BJP to selflessly continue to serve the people. pic.twitter.com/gkNAkFfRqi
— Jagat Prakash Nadda (@JPNadda) December 25, 2021
ಎಷ್ಟು ದೇಣಿಗೆ ಹಾಕಬಹುದು?
5 ರೂ. ನಿಂದ 1000 ರೂ ಮೊತ್ತದ ದೇಣಿಗೆ ಹಾಕಬಹುದು ಎಂದು ನಡ್ಡಾ ಹೇಳಿದ್ದಾರೆ. ಸ್ವಯಂಪ್ರೇರಿತ ನಿಧಿ ಸಂಗ್ರಹ ಅಭಿಯಾನವು ದೀನ್ ದಯಾಳ್ ಜಿ ಯವರ ಪುಣ್ಯ ತಿಥಿಯ ದಿನಾಂಕವಾದಂತಹ ಫೆಬ್ರವರಿ 11 ರವರೆಗೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ