ಬಿಜೆಪಿಗೆ 1 ಸಾವಿರ ರೂ. ದೇಣಿಗೆ ನೀಡಿದ ಮೋದಿ

Advertisements

ನವದೆಹಲಿ: ಬಿಜೆಪಿ ಪಕ್ಷಕ್ಕೆ 1 ಸಾವಿರ ರೂ. ದೇಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.

Advertisements

ಮಾಜಿ ಪ್ರಧಾನಿ ದಿವಂಗತ ಅಟಾಲ್ ಬಿಹಾರಿ ವಾಜಪೇಯಿ ಅವರ 97 ನೇ ಜನ್ಮದಿನದಂದು ಬಿಜೆಪಿ ಪ್ರಾರಂಭಿಸಿದ ದೊಡ್ಡ ಅಭಿಯಾನದ ಭಾಗ ಇದಾಗಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಪಕ್ಷದ ನಿಧಿಗೆ 1,000 ರೂ. ದೇಣಿಗೆ ನೀಡಿದ್ದೇನೆ ಮತ್ತು ನೀವು ಪಕ್ಷವನ್ನು ಬಲಪಡಿಸಲು ಸಹಾಯ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

Advertisements

ಭಾರತೀಯ ಜನತಾ ಪಕ್ಷದ ನಿಧಿಗೆ ನಾನು 1,000 ರೂ ದೇಣಿಗೆ ನೀಡಿದ್ದೇನೆ. ನೀವು ನೀಡುವಂತಹ ಸಣ್ಣ ದೇಣಿಗೆಯು ನಮ್ಮ ಪಕ್ಷವನ್ನು ಬಲಪಡಿಸುತ್ತದೆ. ಬಿಜೆಪಿಯನ್ನು ಬಲಗೊಳಿಸಲು ಸಹಾಯ ಮಾಡಿ. ಹಾಗೆಯೇ ಭಾರತವನ್ನು ಬಲಿಷ್ಠ ಮಾಡಲು ನಮ್ಮೊಂದಿಗೆ ಕೈ ಜೋಡಿಸಿ ಎಂದು ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ ವಾಜಪೇಯಿ ಹುಟ್ಟುಹಬ್ಬ: ಗಣ್ಯರಿಂದ ಗೌರವ ನಮನ

ಮೋದಿಯ ನಂತರ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಅವರು ಪಕ್ಷದ ನಿಧಿಗೆ 1000 ರೂ. ದೇಣಿಗೆ ನೀಡಿದರು. ನಮೋ ಆ್ಯಪ್‍ನ ‘ದೇಣಿಗೆ’ ಮಾಡ್ಯೂಲ್ ಅನ್ನು ಬಳಸಿಕೊಂಡು ಬಿಜೆಪಿಯನ್ನು ನಾನು ಕೊಡುಗೆಯನ್ನು ನೀಡಿದ್ದೇನೆ. ನೀವು ಕೂಡ ರೆಫರಲ್ ಕೋಡ್ ಬಳಸಿ ಈ ಸಾಮೂಹಿಕ ಆಂದೋಲನದಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ಕೊಡುಗೆಯನ್ನು ನೀಡಲು ಹೇಳಿ. ಇದ್ದರಿಂದಾಗಿ ನಿಸ್ವಾರ್ಥ ಮನಸ್ಸಿನಿಂದ ಜನರ ಸೇವೆಯನ್ನು ಮಾಡಲು ಬಿಜೆಪಿಗೆ ಬೆಂಬಲ ನೀಡಬಹುದು ಎಂದು ಟ್ವೀಟ್ ಮಾಡಿದ್ದಾರೆ.

Advertisements

ಎಷ್ಟು ದೇಣಿಗೆ ಹಾಕಬಹುದು?
5 ರೂ. ನಿಂದ 1000 ರೂ ಮೊತ್ತದ ದೇಣಿಗೆ ಹಾಕಬಹುದು ಎಂದು ನಡ್ಡಾ ಹೇಳಿದ್ದಾರೆ. ಸ್ವಯಂಪ್ರೇರಿತ ನಿಧಿ ಸಂಗ್ರಹ ಅಭಿಯಾನವು ದೀನ್ ದಯಾಳ್ ಜಿ ಯವರ ಪುಣ್ಯ ತಿಥಿಯ ದಿನಾಂಕವಾದಂತಹ ಫೆಬ್ರವರಿ 11 ರವರೆಗೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ

Advertisements
Exit mobile version