ಚೆನ್ನೈ: ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದಾಗ ದಂಡ ಹಾಕುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲದ ಕಾರಣ ತಮಿಳುನಾಡು ಪೊಲೀಸರು ಇನ್ಮುಂದೆ ಹೆಲ್ಮೆಟ್ ರಹಿತ ವಾಹನ ಸವಾರರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದು ರಸ್ತೆ ಸುರಕ್ಷತೆ ಬಗ್ಗೆ ಪಾಠ ಮಡಲಿದ್ದಾರೆ.
ಎಲ್ಲಾ ಪೊಲೀಸ್ ಠಾಣೆಗಳನ್ನ ತರಬೇತಿ ಕೇಂದ್ರಗಳನ್ನಾಗಿ ಘೋಷಿಸಲಾಗಿದೆ. ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿ ಸಿಕ್ಕಿಬಿದ್ದವರಿಗೆ ಎರಡು ಗಂಟೆಗಳ ಕಾಲ ಟ್ರಾಫಿಕ್ ನಿಯಮದ ಬಗ್ಗೆ ಪಾಠ ಮಾಡಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರೇಶ್ ಪೂಜಾರಿ ತಿಳಿಸಿದ್ದಾರೆ.
Advertisement
ಶುಕ್ರವಾರದಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಆಯೋಜಿಸಿದ್ದ ರಸ್ತೆ ಸುರಕ್ಷತೆ ಮತ್ತು ವೆಹಿಕಲ್ ಎಮಿಷನ್ ರೆಗ್ಯೂಲೆಷನ್ಸ್ ಮೇಲಿನ ಕಾನ್ಫರೆನ್ಸ್ ನಲ್ಲಿ ಅಮರೇಶ್ ಪೂಜಾರಿ ಈ ಬಗ್ಗೆ ಮಾತನಾಡಿದ್ರು. ಅಲ್ಲದೆ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಹಾಗೆ ಮಾಡಿದವರಿಗೆ ದಂಡ ವಿಧಿಸುವುದಲ್ಲದೆ ಅವರನ್ನು ಬಂಧಿಸಲಾಗುತ್ತದೆ ಎಂದು ಹೇಳಿದ್ರು.
Advertisement
Advertisement
ಈ ಮೇಲಿನ ಎರಡು ನಿಯಮಗಳನ್ನ ರಸ್ತೆ ನಿಯಮಾವಳಿಗಳಿಗೆ ಸಂಬಂಧಪಟ್ಟ ನ್ಯಾ. ಕೆಎಸ್ ರಾಮಕೃಷ್ಣ ನೇತೃತ್ವದ ಸುಪ್ರೀಂ ಕೋರ್ಟ್ ಕಮಿಟಿ ಮಾಡಿರುವ ಶಿಫಾರಸುಗಳ ಪಟ್ಟಿಯಲ್ಲಿ ಹೇಳಲಾಗಿದೆ.
Advertisement
ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 19ನ್ನು ಉಲ್ಲಂಘಿಸಿದವರಿಗೆ ಸ್ಥಳದಲ್ಲೇ ದಂಡ ಹಾಕುವುದಲ್ಲದೆ ಅವರ ಡ್ರೈವಿಂಗ್ ಲೈಸನ್ಸ್ ರದ್ದುಗೊಳಿಸಲು ಪ್ರಕರಣವನ್ನ ಆರ್‍ಟಿಓಗೆ ವರ್ಗಾಯಿಸಲಾಗ್ತಿದೆ ಎಂದು ಪೂಜಾರಿ ತಿಳಿಸಿದ್ರು.
ಬಳಿಕ ತಮಿಳುನಾಡಿನ ಸಾರಿಗೆ ಸಚಿವ ಎಮ್‍ಆರ್ ವಿಜಯಭಾಸ್ಕರ್ ತಮುಳುನಾಡು ರಾಜ್ಯ ಸಾರಿಗೆಯ ನಷ್ಟದ ಬಗ್ಗೆ ಪ್ರತಿಕ್ರಿಯಿಸಿ, ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ತಮಿಳುನಾಡಿನಲ್ಲಿ ಇಂಧನ ಬೆಲೆ ಏರಿಕೆ ನಡುವೆಯೂ ಬಸ್ ಟಿಕೆಟ್ ದರ ಕಡಿಮೆ ತೆಗೆದುಕೊಳ್ಳಲಾಗ್ತಿದೆ. ಇದನ್ನ ಸಾರ್ವಜನಿಕರಿಗೆ ಸೇವೆಯೆಂದು ಮಾಡಲಾಗ್ತಿದೆ ಅಂದ್ರು.