ತುಮಕೂರು: ಇಲ್ಲಿ ದುಬಾರಿ ಬೆಲೆಯ ಹೆಲ್ಮೆಟ್ ಎಲ್ಲಿಂದರಲ್ಲಿ ಇಡುವ ಹಾಗಿಲ್ಲ. ಬೈಕಿಗೆ ಲಾಕ್ ಮಾಡಿದ್ದರೂ ಸಹ ದುಬಾರಿ ಹೆಲ್ಮೆಟ್‌ಗಳನ್ನು ಕ್ಷಣಾರ್ಧದಲ್ಲಿ ಕಳ್ಳತನ ಮಾಡುವ ಗ್ಯಾಂಗ್ ನಗರದಲ್ಲಿ ಕಾಣಿಸಿಕೊಂಡಿದೆ.
ತುಮಕೂರಲ್ಲಿ ಹೆಲ್ಮೆಟ್ ಮಾಫಿಯಾ ತಲೆ ಎತ್ತಿದ್ದು, ದುಬಾರಿ ಹೆಲ್ಮೆಟ್ ಸಿಕ್ಕರೆ ಇದ್ದಕ್ಕಿದ್ದಂತೆ ಮಾಯವಾಗುತ್ತದೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದವರಿಗೆ ಸಾವಿರ ರೂ. ದಂಡ ಎನ್ನುವ ನಿಯುಮ ಜಾರಿಯಾದಾಗಿನಿಂದ ಹೆಲ್ಮೆಟ್‌ಗೆ ಭಾರೀ ಬೇಡಿಕೆ ಉಂಟಾಗಿದೆ. ಜೊತೆಗೆ ಹೆಲ್ಮೆಟ್ ಕಳ್ಳರ ಸಂಖ್ಯೆಯೂ ಹೆಚ್ಚಾಗಿದೆ. ಇದರ ಹಿಂದೆ ಹೆಲ್ಮೆಟ್ ಮಾಫಿಯಾದ ಕೈವಾಡ ಇದೆಯಾ ಅನ್ನೋ ಅನುಮಾನ ಸಹ ಇದೀಗ ವ್ಯಕ್ತವಾಗುತ್ತಿದೆ.
Advertisement
Advertisement
ಹೊಸ ನಿಯಮ ಜಾರಿ ಬಂದಾಗಿನಿAದ ಹೆಲ್ಮೆಟ್ ಹಾಕದೇ ಓಡಾಡುತ್ತಿದ್ದವರು, ಈಗ ಎರಡೆರಡು ಹೆಲ್ಮೆಟ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಇದರ ಜೊತೆಗೆ ಹೆಲ್ಮೆಟ್ ಮಾಫಿಯಾ ತಲೆ ಎತ್ತಿದೆ ಎಂಬ ಮಾತು ಸಹ ಕೇಳಿಬರುತ್ತಿದೆ. ತುಮಕೂರಿನಲ್ಲಿ ಹಾಡಹಗಲೇ ಹೆಲ್ಮೆಟ್‌ಗಳು ಮಾಯವಾಗುತ್ತಿವೆ. ಜನನಿಬಿಡ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ಹೋದವರ ಹೆಲ್ಮೆಟ್‌ಗಳೇ ಇವರ ಟಾರ್ಗೆಟ್ ಆಗಿದೆ. ಅಂದಾಜಿನ ಪ್ರಕಾರ ಕಳೆದ ಒಂದು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಹೆಲ್ಮೆಟ್‌ಗಳು ಕಳ್ಳತನವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಹೆಲ್ಮೆಟ್‌ನ್ನು ಬೈಕ್‌ಗೆ ಹಾಕಿ ಲಾಕ್ ಮಾಡಿದರೂ ಕಳ್ಳತನ ಮಾಡಲಾಗುತ್ತಿದೆ. ಹೆಲ್ಮೆಟ್ ಕಳ್ಳತನವಾದರೆ, ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಹೀಗಾಗಿ ಹೆಲ್ಮೆಟ್ ಕಳ್ಳತನದ ಪ್ರಕರಣಗಳು ಹೆಚ್ಚಾಗಿದೆ. ಕಳ್ಳರು ಮತ್ತು ಪೊಲೀಸರ ನಡುವೆ ಬೈಕ್ ಸವಾರರು ಹೈರಾಣಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ವಂಶಿಕೃಷ್ಣ ಹೆಲ್ಮೆಟ್ ಕಳ್ಳತನವಾದರೆ ದೂರು ಕೊಡಬಹುದು, ಹೆಲ್ಮೆಟ್ ಕಳ್ಳತನ ಮಾಡುವುದು ಅಪರಾಧ ಎಂದಿದ್ದಾರೆ.
ಹೆಲ್ಮೆಟ್ ಕಳ್ಳತನದ ಹಿಂದೆ ದೊಡ್ಡ ಜಾಲವೇ ಇದೆ ಎಂದು ಶಂಕಿಸಲಾಗಿದೆ. ಕಳ್ಳತನ ಮಾಡಿದ ಹೆಲ್ಮೆಟ್‌ಗಳನ್ನು ಬೀದಿಬದಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.