ಕಾರವಾರ: ದಸರಾ ಪ್ರಯುಕ್ತ ನಡೆದ ದಾಂಡಿಯಾ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಲ್ಮೆಟ್ ಧರಿಸಿ ಕೋಲಾಟ ಆಡಿದ್ದಾರೆ.
ಕಾರವಾರದ ಕೆ.ಎಚ್.ಬಿ. ಕಾಲೋನಿಯಲ್ಲಿ ದಸರಾ ಪ್ರಯುಕ್ತ ಮಹಿಳೆಯರು ದಾಂಡಿಯಾ ನೃತ್ಯ ಮಾಡುತ್ತಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಹೆಲ್ಮೆಟ್ ಧರಿಸಿ ಆಗಮಿಸಿದ ಮಹಿಳೆಯರು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು. ಈ ಮೂಲಕ ಪ್ರತಿಯೊಬ್ಬ ವಾಹನ ಸವಾರರು ಹೆಲ್ಮೆಟ್ ಧರಿಸೋದು ಕಡ್ಡಾಯ ಎಂಬ ಜಾಗೃತಿಯನ್ನು ಮೂಡಿಸಿದರು. ಸದ್ಯ ಮಹಿಳೆಯರು ಹೆಲ್ಮೆಟ್ ಧರಿಸಿ ದಾಂಡಿಯಾ ಆಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಶಂಸೆ ವ್ಯಕ್ತವಾಗಿದೆ.
Advertisement
Advertisement
ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದಗಿನಿಂದ ಟ್ರಾಫಿಕ್ ಉಲ್ಲಂಘಟನೆ ಭಾರೀ ದಂಡ ತೆತ್ತಬೇಕಿದೆ. ಕರ್ನಾಟಕದಲ್ಲಿ ದೊಡ್ಡ ದಂಡದ ಮೊತ್ತಕ್ಕೆ ರಾಜ್ಯ ಸರ್ಕಾರ ಬ್ರೇಕ್ ನೀಡಿದೆ. ಪೊಲೀಸರು ಮಾತ್ರ ವಾಹನ ಸವಾರರಿಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಗಾಂಧಿ ಜಯಂತಿಯಂದು ರಾಯಚೂರು ಪೊಲೀಸರು ಹೆಲ್ಮೆಟ್ ಧರಿಸದೇ ಸವಾರರಿಗೆ ದಂಡ ಹಾಕಿ ಉಚಿತ ಹೆಲ್ಮೆಟ್ ನೀಡಿದ್ದರು.