ಕಠ್ಮಂಡು: ಐದು ಮಂದಿ ವಿದೇಶಿ ಪ್ರವಾಸಿಗರು ಸೇರಿ ಒಟ್ಟು ಆರು ಮಂದಿ ಪ್ರಯಾಣಿಕರಿದ್ದ ಮನಾಂಗ್ ಹೆಲಿಕಾಪ್ಟರ್ (Manang Helicopter) ನೇಪಾಳದಲ್ಲಿ (Nepal) ನಾಪತ್ತೆಯಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಸೋಲುಖುಂಬುವಿನಿಂದ (Solukhumbu) ಕಠ್ಮಂಡುವಿಗೆ (Kathmandu) ತೆರಳುತ್ತಿದ್ದ ಹೆಲಿಕಾಪ್ಟರ್, ಬೆಳಗ್ಗೆ 10 ಗಂಟೆಯ ಸುಮಾರಿಗೆ ಕಂಟ್ರೋಲ್ ಟವರ್‌ನೊಂದಿಗೆ ಸಂಪರ್ಕ ಕಡಿತವಾಗಿದೆ. ಈ ಹೆಲಿಕಾಪ್ಟರ್ 5 ಮೆಕ್ಸಿಕನ್ (Mexixcan) ಪ್ರಯಾಣಿಕರು ಮತ್ತು ಓರ್ವ ನೇಪಾಳಿ ಪೈಲೆಟ್ (Pilot) ಅನ್ನು ಒಳಗೊಂಡಿದ್ದು, ಮೌಂಟ್ ಎವರೆಸ್ಟ್ (Mount Everest) ಬಳಿ ನಾಪತ್ತೆಯಾಗಿದೆ ಎಂದು ಕಠ್ಮಂಡು ವಿಮಾನ ನಿಲ್ದಾಣದ ಅಧಿಕಾರಿ ಟೆಕ್‌ನಾಥ್ ಸಿತೌಲಾ ತಿಳಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಹಿಮಾಚಲದಲ್ಲಿ 20 ಮಂದಿ ಬಲಿ – 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
Advertisement
Advertisement
ಸೋಲುಖುಂಬುವಿನ ಸುರ್ಕಿಯಿಂದ ರಾಜಧಾನಿ ಕಠ್ಮಂಡುವಿಗೆ ಬೆಳಗ್ಗೆ 9:45ಕ್ಕೆ ಹೆಲಿಕಾಪ್ಟರ್ ಟೇಕಾಫ್ ಆಗಿತ್ತು. ಹೆಲಿಕಾಪ್ಟರ್ 9ಎನ್ ಎಎಮ್‌ವಿ (9N-AMV) ಕರೆ ಚಿಹ್ನೆಯೊಂದಿಗೆ ಸ್ಥಳೀಯ ಸಮಯ ಬೆಳಿಗ್ಗೆ 10:12 ಕ್ಕೆ ರಾಡಾರ್‌ನಿಂದ ಹೊರಬಂದಿತು ಎಂದು ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ (Gyanendra Bhul) ಹೇಳಿದ್ದಾರೆ. ಇದನ್ನೂ ಓದಿ: ಚಿಪ್ ಘಟಕ ತೆರೆಯಲ್ಲ- ವೇದಾಂತ ಜೊತೆಗಿನ 1.61 ಲಕ್ಷ ಕೋಟಿ ಒಪ್ಪಂದವನ್ನ ರದ್ದುಗೊಳಿಸಿದ ಫಾಕ್ಸ್‌ಕಾನ್
Advertisement
Advertisement
ಹೆಲಿಕಾಪ್ಟರ್ ಹುಡುಕಾಟ ಮತ್ತು ಪ್ರಯಾಣಿಕರ ರಕ್ಷಣೆಗೆ ಆಲ್ಟಿಟ್ಯೂಡ್ ಏರ್ ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟಿದೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (Civil Aviation Authority) ಟ್ವೀಟ್ ಮಾಡಿದೆ. ಇದನ್ನೂ ಓದಿ: Rafale Deal: 90,000 ಕೋಟಿ ವೆಚ್ಚ, 26 ರಫೇಲ್ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್!
Web Stories