ಮಿಲಿಟರಿ ಹೆಲಿಕಾಪ್ಟರ್‍ ಗುರಿ ತಪ್ಪಿ ರಾಕೆಟ್ ಸಿಡಿತ, ಸ್ಥಳದಲ್ಲಿದ್ದ ವಾಹನ ಢಮಾರ್! ವಿಡಿಯೋ ನೋಡಿ

Public TV
1 Min Read
russia war

ಮಾಸ್ಕೋ: ರಷ್ಯಾದ ಮಿಲಿಟರಿ ಅಭ್ಯಾಸದ ವೇಳೆ ಎಡವಟ್ಟಾಗಿದ್ದು, ಹೆಲಿಕಾಪ್ಟರ್ ನಿಂದ ಚಿಮ್ಮಿದ ರಾಕೆಟ್ ನಿಲುಗಡೆ ಮಾಡಿದ್ದ ವಾಹನದ ಮೇಲೆ ಬಿದ್ದಿದ್ದು, ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಪಶ್ಚಿಮ ಭಾಗದಲ್ಲಿ ರಷ್ಯಾ ಸೇನೆ ಮಿಲಿಟರಿ ಯುದ್ಧ ಅಭ್ಯಾಸ ನಡೆಸುತ್ತಿದ್ದು ಹೆಲಿಕಾಪ್ಟರ್ ಮೂಲಕ ರಾಕೆಟ್ ಉಡಾಯಿಸುತಿತ್ತು. ಈ ವೇಳೆ ನಿರ್ಧಿಷ್ಟ ಗುರಿಯನ್ನು ತಲುಪಬೇಕಿದ್ದ ರಾಕೆಟ್ ಗುರಿ ತಪ್ಪಿ ವಾಹನಗಳನ್ನು ನಿಂತಿದ್ದ ಸ್ಥಳದ ಮೇಲೆ ಬಿದ್ದಿದೆ. ಈ ಸ್ಫೋಟದಿಂದ ವ್ಯಕ್ತಿಯೊಬ್ಬರು ನೆಲಕ್ಕೆ ಬಿದ್ದಿದ್ದಾರೆ.

ಈ ಘಟನೆ ನಡೆದ ಸ್ಥಳದಲ್ಲಿ ಟ್ರಕ್‍ಗೆ ಸಮೀಪದಲ್ಲಿರುವ ಬಿಳಿ ಜೀಪ್‍ ಕಿಟಕಿ ಒಡೆದುಹೋಗಿದ್ದು, ಇತರೆ ವಾಹನಗಳು ಕೂಡ ಹಾನಿಗೊಳಗಾಗಿವೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಈ ಅವಘಡದಿಂದ ಜನರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಸರಕು ವಾಹನಗಳು ಮಾತ್ರ ಹಾನಿಯಾಗಿವೆ ಎಂದು ಪಶ್ಚಿಮ ಮಿಲಿಟರಿ ಜಿಲ್ಲೆಯ ರಕ್ಷಣಾ ಸಚಿವಾಲಯ ತಿಳಿಸಿದೆ.

ಹೆಲಿಕಾಪ್ಟರ್ ನಿಂದ ನಿಂದ ಚಿಮ್ಮಿದ ರಾಕೆಟ್ ಭೂಮಿ ಅಪ್ಪಳಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article